27ನೇ ನುಡಿಹಬ್ಬ ಘಟಿಕೋತ್ಸವ ತಾಂತ್ರಿಕತೆಯ ಪ್ರಗತಿಗೆ ವಿದ್ಯಾಥರ್ಿಗಳ ಮಾನಸಿಕ ಸಾಮಥ್ರ್ಯ ವೃದ್ಧಿ ಅಗತ್ಯ: ಕಿರಣ್ ಕುಮಾರ್
ಬಳ್ಳಾರಿ 31:ಭಾರತದ ತಾಂತ್ರಿಕ ಕ್ಷೇತ್ರವನ್ನು ಉನ್ನತಿಯತ್ತ ಕೊಂಡೊಯ್ಯಲು ವಿದ್ಯಾಥರ್ಿಗಳ ಮಾನಸಿಕ ಸಾಮಥ್ರ್ಯ ವೃದ್ಧಿ ಅತ್ಯಗತ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ವಿಕ್ರಮ್ ಸಾರಬಾಯಿ ಸಂಶೋಧನೆ ಕೇಂದ್ರದ ಪ್ರಾಧ್ಯಾಪಕ ಎ.ಎಸ್.ಕಿರಣ್ ಕುಮಾರ್ ಹೇಳಿದರು.
ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 27ನೇ ನುಡಿಹಬ್ಬದ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕರಾಗಿ ಅವರು ಮಾತನಾಡಿದರು.
ಇವತ್ತಿನ ಆಧುನಿಕ ಯುಗದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ನಾಗಲೋಟದಲ್ಲಿ ಸಾಗುತ್ತಾ, ಈ ಪೃಥ್ವಿಯ ಮೇಲೆ ವಾಸ ಮಾಡುತ್ತಿರುವ ಎಲ್ಲ ಜೀವಿಗಳಿಗೆ ಜೀವನವನ್ನು ಬದಲಾಯಿಸುತ್ತಾ ಬಂದಿದೆ. ಹಿಂದಿನ ಶತಮಾನಗಳಿಗೆ ಹೋಲಿಸಿದಾಗ ಮನುಷ್ಯನಿಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಹೊಸ ಹೊಸ ಸಲಕರಣೆ ಹಾಗೂ ಸೌಲಭ್ಯಗಳಿಂದ ದೈಹಿಕ ಶ್ರಮ ಮತ್ತು ಸಮಯದ ಅವಶ್ಯಕತೆ ಕಡಿಮೆಯಾಗುತ್ತ ಬಂದಿದೆ ಎಂದರು. ಭಾರತೀಯ ಅಂತರಿಕ್ಷ ಕ್ಷೇತ್ರದ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಇಸ್ರೋ ಸಂಸ್ಥೆಯು ಸಿಬ್ಬಂದಿಯ ಉತ್ಸಾಹ, ಶಿಸ್ತು, ತಾಂತ್ರಿಕ ಕೌಶಲ್ಯ, ತನ್ಮಯತೆ ಹಾಗೂ ಅರ್ಪಣಾ ಮನೋಭಾವ ಕಾರಣಗಳಿಂದ ಇಸ್ರೋ ಸಂಸ್ಥೆಯು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಯಿತು ಎಂದರು
ಇಸ್ರೋದ ವಿಜ್ಞಾನಿಗಳು, ಇಂಜಿನಿಯರಗಳು ಒಂದು ಕಾಲದಲ್ಲಿ ಬೇರೆಲ್ಲರಂತೇ ವಿದ್ಯಾಥರ್ಿಗಳಾಗಿದ್ದವರೇ, ಭಾರತ ದೇಶವನ್ನು ತಾಂತ್ರಿಕವಾಗಿ ಔನ್ನತ್ಯಕ್ಕೆ ಕೊಂಡೊಯ್ಯಲು ಅವರಿಗೆ ಇಂದು ಸಾಧ್ಯವಾಗಿದ್ದರೆ, ಆ ಕೆಲಸವನ್ನು ಇಂದಿನ ಪೀಳಿಗೆಯವರು ಮತ್ತಷ್ಟು ಸಮರ್ಥವಾಗಿ ಮಾಡಬಹುದು. ಅದಕ್ಕೆ ಅಗತ್ಯವಾದ ಮನೋಸಾಮಥ್ರ್ಯವನ್ನು ಇಂದಿನ ವಿದ್ಯಾಥರ್ಿಗಳು ರೂಪಿಸಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಾ.ಮನು ಬಳಿಗರ್ ಅವರಿಗೆ ನಾಡೋಜ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಮಲ್ಲಿಕಾ ಎಸ್. ಘಂಟಿ, ಕುಲಸಚಿವ ಡಾ. ಅಶೋಕ್ ಕುಮಾರ್ ರಂಜೇರಿ, ಅಧ್ಯಯನಾಂಗ ನಿದರ್ೇಶಕ ಡಾ. ಶಿವಾನಂದ್ ಎಸ್ ವಿರಕ್ತಮಠ, ಹಣಕಾಸು ಅಧಿಕಾರಿ ಡಾ.ಸಿದ್ದಗಂಗಮ್ಮ, ವಿವಿಧ ವಿಭಾಗಗಳ ಡೀನ್ ಗಳಾದ ಡಾ.ಪಾಂಡುರಂಗ ಬಾಬು, ಡಾ.ಸುಬ್ಬಣ್ಣ ರೈ, ಡಾ.ಸಚ್ಚಿ ರಮೇಶ್, ಡಾ. ಸಿ.ಮಹದೇವಯ್ಯ ಇದ್ದರು. ಶೈಕ್ಷಣಿಕ ಸಹಾಯಕ ಕುಲಸಚಿವ ಸೋಮಶೇಖರ್ ನಿರೂಪಿಸಿದರು.