ನಬಾರ್ಡ್ ನಿಂದ 133 ರೈತರಿಗೆ ರು.1.36 ಕೋಟಿ ಸಾಲ ಠೇವಣಿ ಮೊತ್ತ ರೂ 3.72 ಕೋಟಿಗೆ ಏರಿಕೆ: ದೊಡ್ಡಪ್ಪ ದೇಸಾಯಿ
ಗಂಗಾವತಿ: ಸತತ 10 ವರ್ಷ ಗಂಗಾವತಿ ಪ್ರಾಥಮಿಕ ಕೃಷಿ ಮತ್ತು ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ ಅಧ್ಯಕ್ಷನಾಗಿದ್ದು ಈ ಅವಧಿಯಲ್ಲಿ 133 ರೈತರಿಗೆ ನಬಾರ್ಡ್ನಿಂದ 1.36 ಕೋಟಿ ರು ಸಾಲ ಸೌಲಭ್ಯ ಜತೆಗೆ ಬ್ಯಾಂಕಿನ ಠೇವಣಿ ಮೊತ್ತವನ್ನು ರು.28 ಲಕ್ಷ ದಿಂದ 3.72 ಕೋಟಿ ರು ಗೆ ಹೆಚ್ಚಿಸಲಾಗಿದೆ ಎಂದು ಪಿಎಲ್ಡಿ ಬ್ಯಾಂಕಿಗೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ದೊಡ್ಡಪ್ಪ ದೇಸಾಯಿ ಹೇಳಿದರು.
ಗುರುವಾರ ನಗರದ ಸರೋಜಮ್ಮ ಕಲ್ಯಾಣ ಮಂಟಪ ಬಳಿ ಇರುವ ಶ್ರೀ ಶುಶಮೀಂದ್ರ ಗುರುಕುಲದಲ್ಲಿ ಪಿಎಲ್ಡಿ ಬ್ಯಾಂಕಿ 70 ವಾಷರ್ಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ 79 ಉಗ್ರಾಣ, 110 ಟ್ರಾಕ್ಟರ್, ಹೈನುಗಾರಿಕೆ, ತೋಟಗಾರಿಕೆ, ಕುರಿ ಸಾಕಾಣಿಕೆ, ಮೀನುಗಾರಿಕೆ, ಹೀಗೆ ಹತ್ತು ಹಲವು ಯೋಜನೆಗಳ ಸಹಾಯಧನ ರೈತರಿಗೆ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಸರಕಾರವು ಮಧ್ಯಮ ಹಾಗು ಧೀರ್ಘಾವಧಿಯ ಸಾಲ ಸೌಲಭ್ಯವು 10 ಲಕ್ಷದಿಂದ 15 ಲಕ್ಷದವರೆಗೆ ಹೆಚ್ಚಿಸಿದೆ ಶೇ.3 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿಗೆ ರಿಯಾಯಿತಿ ನೀಡುತ್ತಿದೆ ರೈತರು ಇದರ ಪ್ರಯೋಜನೆ ಪಡೆಯಬೇಕೆಂದು ಕರೆ ನೀಡಿದರು.
ನಿರ್ಗಮಿತ ಉಪಾಧ್ಯಕ್ಷ ಬಸವರಾಜ್ ಸಮಗಂಡಿ, ನೂತನ ಉಪಾಧ್ಯಕ್ಷ ಜನಗಂಡೆಪ್ಪ ಪೂಜಾರ್, ಶರಣೇಗೌಡ, ಜೋಗದ ನಾರಾಯಣಪ್ಪ ನಾಯಕ, ರಮೇಶ್ ನಾಯಕ, ಯಮನೂರಪ್ಪ ಹುಲಗಿ ಹಾಗು ವಿಜಯಕುಮಾರ್ ರಾಯ್ಕರ್ ಇತರರಿದ್ದರು