1189 ಲೀ.ಮದ್ಯ, 245 ಲೀ ಬಿಯರ್ 104 ಲೀ ಸೇಂದಿ: ಅಬಕಾರಿ ಅಕ್ರಮಗಳಲ್ಲಿ ಜಪ್ತಾದ ಮದ್ಯ ನಾಶ

1189 ಲೀ.ಮದ್ಯ, 245 ಲೀ ಬಿಯರ್ 104 ಲೀ ಸೇಂದಿ: ಅಬಕಾರಿ ಅಕ್ರಮಗಳಲ್ಲಿ ಜಪ್ತಾದ ಮದ್ಯ ನಾಶ

ಬಳ್ಳಾರಿ 10:ಬಳ್ಳಾರಿ ಉಪ ವಿಭಾಗ ವ್ಯಾಪ್ತಿಯ ಬಳ್ಳಾರಿ ವಲಯ-01 ಮತ್ತು ವಲಯ ನಂ-02 ರ ವ್ಯಾಪ್ತಿಗಳಲ್ಲಿ ಚುನಾವಣೆ ಮತ್ತು ಇತರೆ ಸಮಯದಲ್ಲಿ ಅಬಕಾರಿ ಅಕ್ರಮಗಳಲ್ಲಿ ಸಕರ್ಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಮದ್ಯವನ್ನು ಜ.11 ರಂದು ಕಂದಾಯ ಅಧಿಕಾರಿ ಹಾಗೂ ಐಎಎಸ್ ಅಧಿಕಾರಿ (ಪ್ರೊಬೆಷನರ್) ಕೆ.ಆರ್.ನಂದಿನಿ ಹಾಗೂ ಅಬಕಾರಿ ಉಪ ಅಧೀಕ್ಷಕರಾದ ಮೋತಿಲಾಲ್ ಅವರ ಸಮ್ಮುಖದಲ್ಲಿ ನಾಶಪಡಿಸಲಾಯಿತು.

   ಬಳ್ಳಾರಿ ವಲಯ-01 ಮತ್ತು ಬಳ್ಳಾರಿ ವಲಯ ನಂ.2 ರ ವ್ಯಾಪ್ತಿಯಲ್ಲಿ 1189.268 ಲೀ.ಮದ್ಯ, 245.640 ಲೀ ಬಿಯರ್ ಮತ್ತು 104 ಲೀ ಸೇಂದಿಯನ್ನು ನಾಶಪಡಿಸಲಾಗಿದೆ. ಈ ಸಂದರ್ಭದಲ್ಲಿ ಬಳ್ಳಾರಿ ವಲಯಮಟ್ಟದ ಅಬಕಾರಿ ನೀರಿಕ್ಷಕರು, ಸಿಬ್ಬಂದಿಗಳು ಹಾಗು ಇತರರು ಇದ್ದರು.

 

ಸುದ್ದಿ ಓದಿ