ಅಥಣಿ

ಉಮೇಶ ಕತ್ತಿಯವ ನನ್ನನ್ನು ಆವ್ಹಾನಿಸರುವುದನ್ನು ಪ್ರಶ್ನಿಸುತ್ತೇನೆ: ಕುಮಠಳ್ಳಿ

ಉಮೇಶ ಕತ್ತಿಯವ ನನ್ನನ್ನು ಆವ್ಹಾನಿಸರುವುದನ್ನು ಪ್ರಶ್ನಿಸುತ್ತೇನೆ: ಕುಮಠಳ್ಳಿ

ಲೋಕದರ್ಶನ ವರದಿ 


ಅಥಣಿ : ಅರಣ್ಯ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದಿದ್ದ ಸಭೆಗೆ ನನ್ನನ್ನು ಆವ್ಹಾನಿಸಿಲ್ಲ. ಅದು ಅಧಿಕೃತ ಬಿಜೆಪಿ ಸಭೆ ಅಲ್ಲ ಹೀಗಾಗಿ ನನ್ನನ್ನು ಆವ್ಹಾನಿಸಿರಲಿಕ್ಕಿಲ್ಲ ಆದರೂ ನಾನು ಸಚಿವ ಉಮೇಶ ಕತ್ತಿಯವರಿಗೆ ನನ್ನನ್ನು ಆವ್ಹಾನಿಸದೇ ಇರುವುದನ್ನು ಪ್ರಶ್ನಿಸುತ್ತೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಅಗ್ರಹಾರಿಣಿ ಚಿಕ್ಕ ನದಿಗೆ ಬಾಂದಾರ ಎತ್ತರಿಸುವ 50 ಲಕ್ಷ ರೂ.ಗಳ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.  

     ಇತ್ತೀಚಿಗೆ ಸಚಿವ ಉಮೇಶ ಕತ್ತಿ ಹಾಗೂ ಇನ್ನಿತರ ಕೆಲವು ಶಾಸಕರು ಹಾಗೂ ಬಿಜೆಪಿ ಮುಖಂಡರು ಒಂದೆಡೆ ಸೇರಿದ್ದರು ಈ ವಿಷಯ ನನಗೆ ಮಾಧ್ಯಮಗಳ ಮೂಲಕ ತಿಳಿಯಿತು ಮತ್ತು ಈ ಸಭೆಯ ನಂತರ ಸಚಿವ ಕತ್ತಿ ಇಲ್ಲಿ ನಾವು ಅನೌಪಚಾರಿಕವಾಗಿ ಸೇರಿದ್ದೇವೆ ಎಂದು ಸ್ಪಷ್ಟನೆ ಕೂಡ ನೀಡಿದ್ದರು ಆದರೂ ಕೂಡ ಈ ಸಭೆಯ ಬಗೆಗೆ ತಮಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಸಚಿವ ಕತ್ತಿಯವರಿಗೆ ಪ್ರಶ್ನಿಸುತ್ತೇನೆ ಎಂದು ಹೇಳಿದರು.  

     ಜಾರಕಿಹೊಳಿ ಸಹೋದರರ ವಿರುದ್ಧ ಸಿಎಮ್ ಬೊಮ್ಮಾಯಿ ಇವರಿಗೆ ದೂರು ನೀಡಲು ಸಚಿವ ಕತ್ತಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು ಹೋಗಿರುವ ವಿಷಯ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ, ಮುಖಂಡರಲ್ಲಿ ಯಾವುದೇ ಹೊಂದಲ ಅಥವಾ ಭಿನ್ನಾಭಿಪ್ರಾಯಗಳಿಲ್ಲ ಆದರೂ ಒಂದು ಮನೆಯಲ್ಲಿಯೇ ನಮ್ಮ ನಮ್ಮಲ್ಲಿಯೇ ಸಣ್ಣ ಪ್ರಮಾಣದಲ್ಲಿ ಭಿನ್ನಾಭಿಪ್ರಾಯಗಳಿದ್ದಂತೆ ಪಕ್ಷದಲ್ಲಿಯೂ ಸಹ ಕೆಲವರಲ್ಲಿ ಭಿನ್ನ ಅಭಿಪ್ರಾಯಗಳಿರಬಹುದು ನಮ್ಮ ನಮ್ಮ ಭಿನ್ನಾಭಿಪ್ರಾಯಗಳನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ನಮ್ಮಲ್ಲಿ ಯಾವುದೇ ಮನಸ್ಥಾಪಗಳಿಲ್ಲ ಎಂದು ಸ್ಪಷ್ಟಪಡಿಸಿದರು.  

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ, ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ನರಸು ಬಡಕಂಬಿ, ಅರುಣ ಬಾಸಿಂಗಿ, ಎಸ್‌.ಆರ್‌.ನಾಯಿಕ, ಎಸ್‌.ಡಿ.ನಾಯಿಕ, ಡಿ.ಕೆ.ಮಗದುಮ್, ರಾಜು ಮರಡಿ, ಸತ್ಯವ್ವಾ ನಾಯಿಕ, ಸಂಜೀವ ಹಣಮಾಪುರ, ಮೆಹಬೂಬ ಮಕಾಂದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ