ಭೂ ಪೂಜೆಗೆ ಕ್ಷಣಗಣೆನೆ
ತಾಳಿಕೋಟೆ,
ತಾಲೂಕಿನ ಬಹು ನೀರಿಕ್ಷಿತ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಹಂತ 1 ರ ಪೈಪ್ "ತರಣಾ ಜಾಲದ ಕಾಮಗಾರಿಯ ಭೂ"ು ಪೂಜಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾು ಆಗ"ುಸಲಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣೆನೆ ಆರಂಭವಾಗಿದೆ.
ತಾಲೂಕಿನ ಕೊಡಗಾನೂರ ಕ್ರಾಸ್ನಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. ಕೆಬಿಜೆಎನ್ಎಲ್ನ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆಯಲ್ಲಿ ತೊಡಗಿದೆ. ಈಗಾಗಲೇ 420*220 ಬೃಹತ್ ಶಾ"ುಯಾನ ಹಾಕಾಲಾಗಿದೆ. ವೇದಿಕೆ 60*40 ಪೂಟ್ ಅಳತೆಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಭದ್ರತೆಗಾಗಿ 5 ಜನ ಡಿವೈಎಸ್ಪಿ, 10 ಜನ ಸಿಪಿಐಗಳು, 25 ಜನ ಪಿಎಸ್ಐಗಳು ಸೇರಿದಂತೆ ಅಂದಾಜು 500 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 25 ಸಾ"ರ ಜನರಿಗೆ ಕುಳಿತುಕೊಳ್ಳಲು ಆಸನ ಸಿದ್ದಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಜೊತೆ ಜಲಸಂಪನ್ಮೂಲ ಸಚಿವರಾದ ಗೋ"ಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಆಗ"ುಸಲಿದ್ದಾರೆ. ಅಧ್ಯಕ್ಷತೆಯನ್ನು ದೇವರ ಹಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಅಧ್ಯಕ್ಷತೆ ವ"ಸಿಲಿದ್ದಾರೆ. ಮುಖ್ಯಮಂತ್ರಿಗಳು ಬಂದಿಳಿಯಲು ಕೊಡಗಾನೂರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿಗಳ ಜನರ ದೂರನ್ನು ಆಲಿಸಲಿದ್ದು ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸಿದ್ದತೆಗಳ ಕುರಿತು ಸ್ವತಹ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರೀಶೀಲಿಸುತ್ತಿದ್ದು ಇಡೀ ದಿನ ಅಲ್ಲಿಯೇ ಇದ್ದು ಸಿದ್ದತೆಗಳ ಕುರಿತು ಅಗತ್ಯ ಕ್ರಮ ಕೈಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ ಸಿಇಓ ರಾಹುಲ ಶಿಂಧೆ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕೆಬಿಜೆಎನ್ಎಲ್ ಅಧಿಕಾರಿಗಳು ಅಗತ್ಯ ಸಲಹೆ ಸೂಚನೆಗಳನ್ನು ಕೈಕೊಳ್ಳುತ್ತಿದ್ದಾರೆ. ಕಾರ್ಯಕ್ರಮದ ನಂತರ ತಾಳಿಕೋಟೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ತಾಳಿಕೋಟೆುಂದ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣ ಬೆಳಸಲಿದ್ದಾರೆ.
ಸಿಎಂಗೆ ಗೋವು ಕೊಡುಗೆ :- ಎರಡು ದಶಕಗಳ ಬೇಡಿಕೆಯಾದ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆ ಜಾರಿಗೆ ಶ್ರ"ುಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾು ಅವರಿಗೆ ಭಂಟನೂರ ರೈತರು ಗೋವು ಕೊಡುಗೆ ನೀಡಲು ಮುಂದಾಗಿದ್ದಾರೆ. ಅದರಂತೆ ಶಾಸಕ ಸೋಮನಗೌಡ ಪಾಟೀಲ ಅವರಿಗೆ ಜೋಡೆತ್ತುಗಳ ಕೊಡುಗೆ ನೀಡಲಾಗುತ್ತಿದೆ ಎಂದು ರೈತ ಮುಖಂಡ ಸಂಗನಗೌಡ ಹೆಗರೆಡ್ಡಿ ಹೇಳಿದರು.