ಕಂಪ್ಲಿ

ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ​‍್ಣ

ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ​‍್ಣ

 ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ​‍್ಣ  

ಕಂಪ್ಲಿ 17 : ಇಲ್ಲಿನ ಗಂಗಾಸಂಕೀರ್ಣದಲ್ಲಿ ಲೇಖಕ ಜಿ.ಪ್ರಕಾಶರ ‘ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಎರಡು ಕವನ ಸಂಕಲನಗಳ ಲೋಕಾರಾ​‍್ಣ ಸಮಾರಂಭ ನಡೆಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರ​‍್ಪ ‘ಬದುಕಿನ ಅನಂತದಲ್ಲಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕವಿಗಳು ಪ್ರಶಸ್ತಿಗಳಿಗೆ ಬಲಿಯಾಗದೆ ಉತ್ತಮ ಸಾಹಿತ್ಯ ರಚನೆಯತ್ತ ಮನಸ್ಸು ಹರಿಸಬೇಕಿದೆ. ಬದುಕು ಮತ್ತು ಬರಹ ಒಂದಾಗಿಸುವ ಕೃತಿಗಳು ಶ್ರೇಷ್ಠ.ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ, ಆತಂಕ ಬೇಡ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಪದಾಧಿಕಾರಿಗಳೊಂದಿಗೆ, ಪ್ರಗತಿಪರ ಸಂಘಟನೆಗಳು ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ‘ಜೀವ ಝೇಂಕಾರ’ ಕವನ ಸಂಕಲನವನ್ನು ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದರು  ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ‘ಬದುಕಿನ ಅನಂತದಲಿ’ ಕೃತಿ ಪರಿಚಯಿಸಿದರು ಹಂಪಿ ಕನ್ನಡ ವಿವಿಯ ಸಂಶೋಧನಾರ್ಥಿ ಬೇರಿ​‍್ಗ ಜಯಶ್ರೀ ‘ಜೀವ ಝೇಂಕಾರ’ ಕೃತಿಯನ್ನು ಪರಿಚಯಿಸಿದರು  ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಎಸ್‌.ಪೋಳ, ಬಿ.ಸಿದ್ದಪ್ಪ, ಅನಂತಪುರದ ಡಾ.ಎಚ್‌.ರಾಘವೇಂದ್ರಾಚಾರ್, ನಾಡಗೌಡ ವೀರೇಂದ್ರಗೌಡ, ಸಂತೋಷ ಸೋಗಿ. ಪದಾಧಿಕಾರಿಗಳಾದ ಎಸ್‌.ಡಿ.ಬಸವರಾಜ, ಎಸ್‌.ರಾಮು, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ಶಾಮಸುಂದರರಾವ್, ಬಿ.ಅಂಬಣ್ಣ, ಮಂಜುನಾಥಗೌಡ, .ಶೇಖರ​‍್ಪ, ಬಿ.ಎಂ.ರುದ್ರಯ್ಯಸ್ವಾಮಿ, ಕೆ.ಚಂದ್ರಶೇಖರ ಇತರರಿದ್ದರು.  


ಸುದ್ದಿ ಓದಿ