"ಎಲ್.ಎಲ್.ಸಿ ಕಾಲುವೆಗೆ ಜಂಟಿಯಾಗಿ ನೀರು ಬಿಡದಿದ್ದರೇ ಕಾಲುವೆ ಒಡೆಯುತ್ತೇವೆ"
ಲೋಕದರ್ಶನ ವರದಿ
ಬಳ್ಳಾರಿ23: ನೀರಾವರಿ ಸಲಾಹ ಸಮಿತಿ ತಿಮರ್ಾನದಂತೆ ಎಲ್.ಎಲ್.ಸಿ ಕಾಲುವೆಗೆ ಡಿ.26ರಿಂದ ಮಾರ್ಚ 30ರವರೆಗೆ ಆಂಧ್ರ ಪಾಲಿನ ನೀರಿನೊಂದಿಗೆ ಕಾನರ್ಾಟಕ ಪಾಲಿನ ನಿತ್ಯ 450 ಕ್ಯೂಸೆಕ್ಸ್ ನೀರು ಬಿಡಬೇಕಂದು ತಿಮರ್ಾನಿಸಲಾಗಿತ್ತು. ಏಕೆಂದರೆ 60ವರ್ಷಗಳ ಹಿಂದಿನಿಂದ ಕಾಲುವೆ ನಿಮರ್ಾಣವಾದಾಗ ಆಂಧ್ರ ಮತ್ತು ಕನರ್ಾಟಕ ಜಂಟಿ ನೀರು ಬಿಡಬೇಕೆಂದು ಆಗಲೇ ನಿರ್ಧರಿಸಿ ಕಾಲುವೆಗಳನ್ನು ನಿಮರ್ಿಸಲಾಗಿತ್ತು. ಆದರೆ ಕನರ್ಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಜಂಟಿಯಾಗಿ ನೀರು ಬಿಡದಿದ್ದರೆ ಕಾಲುವೆಯನ್ನು ಒಡೆಯುದಾಗಿ ಅಧಿಕಾರಿಗಳಿಗೆ ತುಂಗಭದ್ರ ರೈತಸಂಘ ಹೇಳಿಕೆ ನೀಡಿದೆ. ಈ ಕುರಿತು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ತುಂಗಭದ್ರ ನೀರಾವರಿ ಸಲಾಹ ಸಮಿತಿಯ ಸಭೆಯಲ್ಲಿ ತಿಮರ್ಾನದಂತೆ ಎರಡು ರಾಜ್ಯಗಳಿಗೆ ಜಂಟಿಯಾಗಿ ನೀರು ಬಿಡಬೇಕು. ಆಗ ಮಾತ್ರ ರಾಜ್ಯದ ರೈತರಿಗೆ ಅನುಕುಲವಾಗಲಿದೆ. ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಕನರ್ಾಟಕ ಸರಕಾರ ಆಂಧ್ರ ಪ್ರದೇಶದ ಸರಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಎರಡು ರಾಜ್ಯಗಳು ಜಂಟಿಯಾಗಿ ಕಾಲುವೆಯಲ್ಲಿ ನೀರು ಬಿಡುವ ಕೆಲಸವಾಗಬೇಕು ಎಂದರು. ಕನರ್ಾಟಕದ ಪಾಲಿನ ಕೇವಲ 450 ಕ್ಯೂಸೆಕ್ಸ್ ನೀರನ್ನು ಕಾಲುವೆಗೆ ಬಿಟ್ಟರೆ ರೈತರು ಸಮರ್ಪಕವಾಗಿ ನೀರು ಪಡೆಯಲು ಸಾದ್ಯವಾಗುವುದಿಲ್ಲ. ಈ ತಿಂಗಳ ಡಿ.26ರಿಂದ ಎಲ್.ಎಲ್.ಸಿ ಕಾಲುವೆಯಲ್ಲಿ ನೀರು ಬಿಡಲಾಗುತ್ತದೆ. ಆದರೆ ಆಂಧ್ರ ಸರಕಾರದ ಅಧಿಕಾರಿಗಳು ಕೇವಲ ಜನವರಿ 15ರವರೆಗೆ ಮಾತ್ರ ಈ ಕಾಲುವೆಯಲ್ಲಿ ನೀರು ತೆಗೆದುಕೊಂಡು ನಂತರ ತಮ್ಮ ಪಾಲಿನ ನೀರನ್ನು ಸ್ಥಗಿತಗೊಳಿಸಿ ಆ ನೀರನ್ನು ಮೇ ತಿಂಗಳಲ್ಲಿ ಕಾಲುವೆ ಮೂಲಕ ನೀರು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾದರೆ ನಮ್ಮ ರೈತರಿಗೆ ಅನ್ಯಾಯವಾಗುತ್ತದೆ. ಅದಕ್ಕಾಗಿ ಕೂಡಲೇ ನಮ್ಮ ಕನರ್ಾಟಕದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಂಧ್ರದೊಂದಿಗೆ ಸಮಾಲೋಚನೆ ನಡೆಸಿ ಜಂಟಿಯಾಗಿ ನೀರು ತೆಗೆದುಕೊಳ್ಳುವ ಕೆಲಸವಾಗಬೇಕು. ಇಲ್ಲದಸಿದ್ದರೆ ಡಿ27ರಂದು ಎಲ್.ಎಲ್.ಸಿ ಕಾಲುವೆಯ 135ರ ಬಳಿ ಎರಗುಡಿ ಗ್ರಾಮದ ಹತ್ತಿರ ಕಾಲುವೆಯನ್ನು ಒಡೆದು ಹಾಕಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಪತ್ರಿಕಾಗೋಷ್ಟಿಯಲ್ಲಿ ತುಂಗಭದ್ರ ರೈತ ಸಂಘದ ಮುಖಂಡರುಗಳಾದ ಗಂಗಾವತಿ ವಿರೇಶ, ಮಸಿದಿಪುರ ಬಸವನಗೌಡ, ಕೊಂಚಗೇರಿ ಮಲ್ಲಪ್ಪ, ಟಿ.ರಂಜನ್ ಸಾಬ್, ಕೆ.ರಾಮನಗೌಡ, ಕೆ.ಎನ್.ಕ್ಯಾಂಪಿನ ಶಿವಯ್ಯ, ಎ.ಬಸವಯ್ಯಸ್ವಾಮಿ, ಎಲೆ ಪಂಪಾಪತಿ, ಜಾಳಿಹಾಳ ಶ್ರೀದರ್, ಕಂಪ್ಲಿ ಸತ್ಯನಾರಾಯಣರಾವ್, ಚಂದ್ರಕಾಂತ ರೆಡ್ಡಿ,ಆಗಲೂರು ಸಿದ್ದಪ್ಪ, ಶ್ಯಾನವಾಸಪೂರ ಸಿದ್ದಪ್ಪ, ಮುಸ್ಟಿಗಟ್ಟಿ ಬೀಮನಗೌಡ ಸೇರಿದಂತೆ ನೂರಾರು ರೈತರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.