"ಸಂಭ್ರಮದ ಲಿಂ.ಯಲ್ಲಾಲಿಂಗ ದೇವರ ಪಲ್ಲಕ್ಕಿ ಉತ್ಸವ"
ಆನಂದ ಕೋಳಿಗುಡ್ಡೆ
ಹಾರೂಗೇರಿ 02: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಬೃಹನ್ಮಠದಲ್ಲಿ ಲಿಂಗೈಕ್ಯ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ 33 ನೇಯ ಪುಣ್ಯಾರಾಧನೆ ನಿಮಿತ್ಯ ಶನಿವಾರರಂದು ಸುಕ್ಷೇತ್ರ ಕೋಳಿಗುಡ್ಡ ಆನಂದ ಆಶ್ರಮದಿಂದ ಸುಕ್ಷೇತ್ರ ಮುಗಳಖೋಡ ಪಟ್ಟಣದವರೆಗೆ ನಡೆದ ಪಾದಯಾತ್ರೆಗೆ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಕೋಳಿಗುಡ್ಡ ಮಠದಲ್ಲಿ ಚಾಲನೆಯನ್ನು ನೀಡಿದರು.
ಜಾತಿ ಮತ ಬೇಧವೆನ್ನದೆ ನಡೆಯುವ 11 ದಿನಗಳವರೆಗೆ ನಡೆಯುತ್ತಿರುವ ಇಂದು ಬೆಳಿಗ್ಗೆ 8 ಗಂಟೆಗೆ ಯಲ್ಲಾಲಿಂಗ ಪ್ರಭು ಮಹಾರಾಜರ ಬೃಹನ್ಮಠದಲ್ಲಿ ಓಂಕಾರ ಮಹಾಮಂತ್ರದೊಂದಿಗೆ ಪ್ರಾರಂಭಗೊಂಡಿತು, ಕೋಳಿಗುಡ್ಡ ಮಠದಿಂದ ಬೆಳ್ಳಿ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯಲ್ಲಿ ಕೋಳಿಗುಡ್ಡ, ಹಾರೂಗೇರಿ ಕ್ರಾಸ್, ಹಾರೂಗೇರಿ, ಹಿಡಕಲ್ಲ ಗ್ರಾಮಸ್ಥರು ಬೆಳ್ಳಿ ಪಲ್ಲಕ್ಕಿಯನ್ನು ಸ್ವಾಗತಿಸಿ ಪೂಜೆ ನೆರವೆರಿಸುತ್ತ ಸುಕ್ಷೇತ್ರ ಮುಗಳಖೋಡ ಮಹಾದ್ವಾರದಕ್ಕೆ ಸುಮಾರ 4 ಗಂಟೆಗೆ ಆಗಮಿಸಿತು
ಮಹಾದ್ವಾರದಿಂದ ಶ್ರೀಮಠದವರೆಗೆ ಪೂರ್ಣ ಕುಂಭ ಹೋತ್ತುಕೊಂಡು ಸುಮಂಗಲಿಯರು ಮತ್ತು ಪಟ್ಟಣದ ನಾಗರಿಕರು ಸಂಚರಿಸುತ್ತಾ ವೇದಳೊಂದಿಗೆ ಓಂಕಾರ ಭಜನೆ, ಝಾಂಜ ಮೇಳ, ಡೊಳ್ಳುಕುಣಿತ, ಬ್ಯಾಂಡ್ ವೃಂದ, ಶಹನಾಯಿ, ಭಜನಾ ತಂಡದವರು ಹಾಗೂ ವಿವಿಧ ರೂಪಕಗಳು ಈ ಮೆರವಣಿಗೆಯಲ್ಲಿ ಜನಮನ ಸೆಳೆಯುತ್ತಿದ್ದವು.
ಈ ಮೆರವಣಿಗೆಯ ಕೇಂದ್ರ ಬಿಂದು ಆಗಿರುವ ಯಲ್ಲಾಲಿಂಗ ಮಹಾರಾಜರು ಹಾಗೂ ಸಿದ್ದರಾಮ ಮಹಾರಾಜರ ಪಲ್ಲಕಿ ಉತ್ಸವ ಸಾರ್ವಜನಿಕರಿಗೆ ದರ್ಶನ ಆಶೀವರ್ಾದ ಮಾಡುತ್ತಾ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಮಠದ ಆವರಣದಲ್ಲಿ ಉತ್ಸವ ಬಂದ ಬಳಿಕ ಶ್ರೀಮಠದ ಶ್ರೀಗಳಿಂದ 33 ನೇ ಪುಣ್ಯಾರಾಧನೆಯ ಕಾರ್ಯಕ್ರಮದ ಜ್ಯೋತಿಯನ್ನು ಬೆಳಗಿಸಿದರು. ಈ ಭಾಗದ ಸಮಸ್ತ ಭಕ್ತರ ಕಲ್ಪವೃಕ್ಷ ಮತ್ತು ಭೂಮಿಯ ಮೇಲಿನ ಸ್ವರ್ಗವಾಗಿರುವ ಸುಕ್ಷೇತ್ರ ಮುಗಳಖೋಡ ಬೃಹನ್ಮಠದಲ್ಲಿ ಲಿಂಗೈಕ್ಯ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಭವ್ಯ ಶಕ್ತಿ ದಿವ್ಯ ಪರಂಪರೆವಾಗಿದೆ. ಈ ಉತ್ಸವವು ಎಲ್ಲ ಭಕ್ತರು ತನ್ನು ಮನದಿಂದ ಆಚರಣೆ ಮಾಡುವು ಒಂದು ಕ್ಷೇತ್ರವಾಗಿದೆ ಎಂದು ಕುಡಚಿ ಮತಕ್ಷೇತ್ರದ ಶಾಸಕ ಪಿ.ರಾಜೀವ್ ಅವರು ಬೃಹನ್ಮಠದಲ್ಲಿ ಲಿಂಗೈಕ್ಯ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ 33 ನೇಯ ಪುಣ್ಯಾರಾಧನೆ ನಿಮಿತ್ಯ ದಿ.01ರಂದು ಸುಕ್ಷೇತ್ರ ಕೋಳಿಗುಡ್ಡ ಆನಂದ ಆಶ್ರಮದಿಂದ ಸುಕ್ಷೇತ್ರ ಮುಗಳಖೋಡ ಪಟ್ಟಣದವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲಗ್ಗೊಂಡು ಮಾತನಾಡಿದರು. ಈ ಪಾದಯಾತ್ರೆಯಲ್ಲಿ ಶ್ರೀಮಠದ 400 ಮಠಗಳ ಭಕ್ತರು ಆಗಮಿಸಿದರು ಮತ್ತು ಗ್ರಾಮದ ಅನೇಕ ಗಣ್ಯರು ಹಾಗೂ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಹಾರೂಗೇರಿ ಪೋಲಿಸ ಠಾಣೆಯ ಪಿಎಸ್ಆಯ್ ಹಾಗೂ ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ತ್ ಕೈಗೊಂಡಿದ್ದರು.