ಸಮಾಜ ಸೇವಕ ಎಸ್.ರಾಮಪ್ಪ ನವರಿಗೆ “ಪುನೀತ್ರಾಜಕುಮಾರ್ ಸ್ಪೂರ್ತಿ” ಪ್ರಶಸ್ತಿ
ಸಮಾಜ ಸೇವಕ ಎಸ್.ರಾಮಪ್ಪ ನವರಿಗೆ “ಪುನೀತ್ರಾಜಕುಮಾರ್ ಸ್ಪೂರ್ತಿ” ಪ್ರಶಸ್ತಿ
ಕಂಪ್ಲಿ 26: ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶತಮಾನ ಶಾಲೆಯ ಗೌರವ ಶಿಕ್ಷಕರು,ಸಂಪನ್ಮೂಲ ವ್ಯಕ್ತಿ, ನಿರೂಪಕ ಹಾಗೂ ಸಮಾಜ ಸೇವಕರಾದ ಎಸ್.ರಾಮಪ್ಪನವರಿಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಸ್ಪೂರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಧಾರವಾಡದ ರಂಗಾಯಣ ಸುವರ್ಣ ಸಮುಚ್ಛಯ ಭವನದಲ್ಲಿ ಕರ್ನಾಟಕ ಸೋಶಿಯಲ್ ಕ್ಲಬ್ ಮತ್ತು ಹುಬ್ಬಳ್ಳಿಯ ವಿಶ್ವಾಸ್ ಫೌಂಡೇಷನ್ಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಸಮಾಜ ಸೇವಕರು, ಶತಮಾನ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕರು, ನಿರೂಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಎಸ್.ರಾಮಪ್ಪನವರ ಶೈಕ್ಷಣಿಕ, ಸಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸರ್ವಧರ್ಮ ಸಮಾಜ ಸೇವಕ ರಮೇಶ್ ಮಹಾದೇವಪ್ಪ, ರಾಜ್ಯ ಸರ್ಕಾರಿ ನೌಕರರ ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷರಾದ ವೀಣಾ ಹೊಸಮನಿ, ಸಾಹಿತಿ, ಶಿಕ್ಷಕ ಪಂಡಿತ್ ಆವಜಿ, ವಿಶ್ವಾಸ್ ಫೌಂಡೇಶನ್ನ ಮಂಜುಆ ಬೆಣ್ಣೆ, ಕರ್ನಾಟಕ ಸೋಶಿಯಲ್ ಕ್ಲಬ್ಬಿನ ಚಂದ್ರಶೇಖರ್ ಮಾಡಲಗೇರಿ ಸೇರಿದಂತೆ ಇತರರು ಇದ್ದರು.