ರಾಜಕೀಯ

'ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಶಕ್ತಿಗೆ ಕಲಾಪ ಬಲಿ ಕೊಡುವುದು ಸಲ್ಲ!

'ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಶಕ್ತಿಗೆ  ಕಲಾಪ ಬಲಿ ಕೊಡುವುದು ಸಲ್ಲ!

ಪ್ರವೀಣ ಗಿರಿ

ಚ.ಕಿತ್ತೂರ

ಚಳಿಗಾಲ ಅಧಿವೇಶನ ಎಂಬುದು ಉತ್ತರ ಕನರ್ಾಟಕ ಭಾಗದ ಜನರಿಗೆ ಒಂದು ರೀತಿಯ ಹಬ್ಬ. ಇಡೀ ಸರಕಾರವೇ ಇಲ್ಲಿ ವಾಸ್ತವ ಹೂಡಿ ತನ್ನ ಕೆಲಸ ಕಾರ್ಯದಲ್ಲಿ ತೊಡಗಿರುತ್ತದೆ. ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಮಹೋದಯರು, ಶಾಸಕರು, ಅಧಿಕಾರಿವರ್ಗ ಸೇರಿದಂತೆ ಎಲ್ಲರೂ ಬೆಳಗಾವಿಯ ಸುವರ್ಣಸೌಧದ ಸೂರಿನಡಿಯಲ್ಲಿ ಸಿಗುವುದಲ್ಲದೇ ಅದೆಷ್ಟೋ ವರ್ಷಗಳಿಂದ ನಿಂತ ಈ ಭಾಗದ ಕೆಲಸ ಕಾರ್ಯಗಳಿಗೆ ಮರು ಜೀವ ಬರುವುದಲ್ಲದೇ ಹೆಚ್ಚಿನ ವೇಗ ಸಿಗಬಹುದು(?) ಎಂಬುದು ಬಹುತೇಕ ಇಲ್ಲಿನ ಜನರ ನಿರೀಕ್ಷೆಯೂ ಆಗಿರುತ್ತದೆ. ಆದರೆ ಇಲ್ಲಿನ ವಾಸ್ತವವೇ ಬೇರೆಯಾಗಿದೆ.

ರಾಜ್ಯದ ಎರಡನೇ ರಾಜಧಾನಿ ಎಂಬ ಖ್ಯಾತಿ ಹೊಂದಿರುವ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನವೇನೋ ಆರಂಭವಾಗಿ ಒಂದು ವಾರವಾಗಿದೆ. ಆದರೆ ಹೇಳಿಕೊಳ್ಳುವಂತಹ ಯಾವುದೇ ಗಂಭೀರವಾದ ಚಚರ್ೆಗಳು ಅಧಿವೇಶನದಲ್ಲಿ ಕಂಡು ಬರುತ್ತಿಲ್ಲ. ಟೀಕೆ ಟಿಪ್ಪಣಿಗಳು ಸಹಜ. ಆದರೆ ಇದೇ ಕೆಲಸವಾಗಬಾರದು. ರಾಜಕಾರಣಿಗಳು ಕೇವಲ ತಮ್ಮ ವೈಯಕ್ತಿಕ ಹಿತಾಶಕ್ತಿಗೆ ಕಲಾಪವನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಸುಧೀರ್ಘ ಚಚರ್ೆ ಮಾಡಿ ಉತ್ತರ ಕನರ್ಾಟಕ ಭಾಗದ ಜನರಿಗೆ ನ್ಯಾಯ ಒದಗಿಸುವ ದೊಡ್ಡ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಉತ್ತರಾಧಿವೇಶನದಲ್ಲಿ ಶಾಸಕರ ಸಂಖ್ಯೆಗಿಂತ ಖಾಲಿ ಖುಚರ್ಿಗಳ ಸಂಖ್ಯೆಯೇ ಹೆಚ್ಚು ಕಂಡು ಬರುತ್ತಿದೆ. 

ನಮ್ಮ ಭಾಗಗಳಲ್ಲಿ ದೊಡ್ಡ ಸಮಸ್ಯೆಗಳು ಉಲ್ಬಣಗೊಂಡರೆ ಇಲ್ಲಿನ ಬಹುತೇಕ ಜನಪ್ರತಿನಿಧಿಗಳು ದೂರದ ಬೆಂಗಳೂರಿನತ್ತ ಬೊಟ್ಟು ಮಾಡಿ, ಬೀಸುವ ದೊಣ್ಣೆಯಿಂದ ನುಳುಚಿಕೊಳ್ಳಲು ಪ್ರಯತ್ನಿಸುತ್ತಾರೆ ಹೊರತು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವುದಿಲ್ಲ. ಪರಿಹಾರ ಹುಡುಕವಷ್ಟರ ಮಟ್ಟಿಗೆ ಅವರಲ್ಲಿ ತಾಳ್ಮೆಯೂ ಇರುವುದಿಲ್ಲ. ಕೆಲವೊಬ್ಬ ರಾಜಕಾರಣಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಕಾಣದ ಕೈಗಳು ಅವರನ್ನು ಮುನ್ನುಗ್ಗಲು ಬಿಡುವುದಿಲ್ಲ ಇದು ಸದ್ಯದ ಸ್ಥಿತಿ. ಹೀಗಿದ್ದಲ್ಲಿ ಅಭಿವೃದ್ಧಿ ನಿರೀಕ್ಷಿಸಿಸಲು ಹೇಗೆ ಸಾಧ್ಯ? 

ಉತ್ತರ ಕನರ್ಾಟಕ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸದಾ ಕಾಲ ಕಾಡುವ ಬರ, ಕುಡಿಯುವ ನೀರಿನ ಸಮಸ್ಯೆ, ರೈತರ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ, ಬೆಳೆ ಹಾನಿ ಪರಿಹಾರ, ಕಳಸಾ-ಬಂಡೂರಿ ಅನುಷ್ಠಾನ, ಗಡಿ ಸಮಸ್ಯೆ, ವಿವಿಧ ಸಂಘ ಸಂಸ್ಥೆಗಳ ಬೇಡಿಕೆಗಳು ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ನಮ್ಮ ಭಾಗದ ಸಮಸ್ಯೆಗಳ ಕುರಿತು ಎಷ್ಟರ ಮಟ್ಟಿಗೆ ಚಚರ್ೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ಸತ್ಯವೇ. 

ಉತ್ತರ ಕನರ್ಾಟಕ ಭಾಗದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚಚರ್ಿಸಲು ಹೆಚ್ಚಿನ ಸಮಯ ಸಿಗುವುದಿಲ್ಲ ಎಂಬ ಕೊರಗು ನಿನ್ನೆ ಮೊನ್ನೆದಲ್ಲ. ಈ ಕೊರಗು ನಿಗಿಸುವ ನಿಟ್ಟಿನಲ್ಲಿಯೇ ಕುಂದಾನಗರಿ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿದ್ದು, ಇಲ್ಲಿ ನಡೆಯುವ  ಅಧಿವೇಶನದಲ್ಲಾದರೂ ಉಕ ಭಾಗದ ಜನಪ್ರತಿನಿಧಿಗಳು ತಮ್ಮ ಪಕ್ಷ, ಪ್ರತಿಷ್ಠೆ, ರಾಜಕೀಯವನ್ನು ಬದಿಗಿಟ್ಟು ಒಗ್ಗಟ್ಟಾಗಿ ಇಚ್ಛಾಶಕ್ತಿ ಪ್ರದಶರ್ಿಸಿ ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಬೇಕಿದೆ. 

ಅನ್ನದಾತನ ಅಳಲು 

ಕೆಲವೊಂದು ಸಕ್ಕರೆ ಕಾಖರ್ಾನೆಗಳ ನಡುವಳಿಕೆಗಳು ಅನ್ನದಾತನ ಸಂತೋಷವನ್ನು ಕಿತ್ತುಕೊಂಡು ಬಿಟ್ಟಿವೆ. ಹಗಲು ರಾತ್ರಿಯೆನ್ನದೇ ಹೊಲ-ಗದ್ದೆಗಳಲ್ಲಿ ಕಷ್ಟಪಟ್ಟು ದುಡಿದು ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಿ, ದುಡ್ಡಿಗಾಗಿ ಬೀದಿಯಲ್ಲಿ ಪ್ರತಿಭಟನೆ ಮಾಡುವ ದನನೀಯ ಪರಿಸ್ಥಿತಿಯಿದೆ. 

ಈ ಅಧಿವೇಶನದಲ್ಲಿ ರೈತಾಪಿ ವರ್ಗದ ಕುರಿತು ಹೆಚ್ಚಿಗೆ ಚಚರ್ೆಯಾದರೆ ರೈತರಿಗೆ ಅನುಕೂಲವಾಗುವುದಲ್ಲದೇ ಅವರ ಬದುಕು ಹಸನಾಗುವುದು. ಈ ನಿಟ್ಟಿನಲ್ಲಿ ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಲವು ಸಲ ರೈತ ಮುಖಂಡರೊಂದಿಗೆ ಚಚರ್ೆ ನಡೆಸಿದ್ದು ಸಮಾಧಾನ ತಂದಿದ್ದರೂ ನೆಮ್ಮದಿ ಇಲ್ಲದಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅವಶ್ಯಕತೆಯಿದೆ. ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಮತ್ತು ಕಬ್ಬಿನ ಬಾಕಿ ನೀಡುವಂತೆ ಬೇಡಿಕೊಳ್ಳುತ್ತಿರುವ ರೈತಾಪಿ ವರ್ಗದ ಜನರಿಗೆ ಶಾಶ್ವತ ಪರಿಹಾರದ ಅವಶ್ಯಕತೆಯಿದೆ.  

ಅದರಂತೆ ನಿರಂತರವಾಗಿ ಉತ್ತರ ಕನರ್ಾಟಕದಲ್ಲಿ ಕಳಸಾ-ಬಂಡೂರಿಗಾಗಿ ಪ್ರತಿಭಟನೆ ನಡೆದರೂ ಹೆಚ್ಚಿನ ತಲೆಕೆಡಿಸಿಕೊಳ್ಳದ ಸಕರ್ಾರ, ಈ ಹಿಂದೆ ಕಾವೇರಿ ವಿವಾದ ಬುಗಿಲೆದ್ದಾಗ ವಿಶೇಷ ಅಧಿವೇಶನ ನಡೆಸಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯ. ಆದರೆ ಕಳಸಾ-ಬಂಡೂರಿಗಾಗಿ ವಿಶೇಷ ಅಧಿವೇಶನ ಅಲ್ಲದಿದ್ದರೂ ಮಹಾದಾಯಿ ಕುರಿತು ಸಮಗ್ರ ಚಚರ್ೆ ಆಗಬೇಕು ಅಲ್ಲದೇ ಶಾಶ್ವತ ಪರಿಹಾರ ಬೇಕು ಎಂಬುದು ಈ ಭಾಗದ ಜನರ ಬೇಡಿಕೆ. ಈ 21ನೇ ಶತಮಾನದಲ್ಲಿಯೂ ನಮ್ಮ ದೇಶದಲ್ಲಿ ಇನ್ನೂ ಕುಡಿಯುವ ನೀರಿಗಾಗಿ ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಇದೆ ಎಂಬುದೇ ಹಾಸ್ಯಾಸ್ಪದ ಸಂಗತಿಯಾಗಿದೆ.  

ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಉತ್ತರದ ಅಧಿವೇಶನ ಯಶಸ್ವಿ ಆಗಬೇಕು ಮತ್ತು ಸಾರ್ಥಕವಾಗಬೇಕಾದಲ್ಲಿ ಮೊದಲು ಎಡಬಿಡದೇ ಇಲ್ಲಿ ನಡೆಯುವ ಪ್ರತಿಭಟನೆಗಳ ಹಾವಳಿ ನಿಲ್ಲಬೇಕು. ಒಂದು ರೀತಿಯಲ್ಲಿ ಬೆಳಗಾವಿಯ ಅಧಿವೇಶನಕ್ಕೂ ಪ್ರತಿಭಟನೆಗಳಿಗೂ ಯಾವಾಗಲೂ ನಂಟಿದ್ದಂತೆ ಕಂಡು ಬರುತ್ತದೆ. ಪ್ರತಿಭಟನೆ ಮೂಲಕ ಸರಕಾರವನ್ನು ಎಚ್ಚರಿಸಿ, ತಮ್ಮ ಬೇಡಿಕೆ ಇಡೇರಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೇನೋ ಸರಿ. ಆದರೆ ಈ ಪ್ರತಿಭಟನೆಯ ಕಾವಿನಿಂದ ವಿನಾಕಾರಣ ಕಲಾಪ ಬಲಿ ತೆಗೆದುಕೊಂಡರೆ ಯಾರಿಗೆ ತಾನೇ ಲಾಭ? ವರ್ಷದಲ್ಲಿ ಒಮ್ಮೆ ನಡೆಯುವ ಅಧಿವೇಶನಕ್ಕೂ ಅಡ್ಡಿ ಮಾಡಿದರೇ ಸಮಸ್ಯೆಗಳು ಮತ್ತೇ ಹಾಗೆಯೇ ಉಳಿದುಕೊಳ್ಳುತ್ತವೆ. ಮತ್ತೇ ಈ ಕೆಲಸ ಕಾರ್ಯಗಳಿಗಾಗಿ ದೂರದ ಬೆಂಗಳೂರಿನ ದಾರಿ ತುಳಿಯಬೇಕಾಗುತ್ತದೆ.

ಈ ಕುರಿತು ಚಿಂತನೆಯ ಅಗತ್ಯವಿದ್ದು, ಆದಷ್ಟೂ ಪ್ರತಿಭಟನೆಯಿಂದ ದೂರವಿದ್ದು, ಅಭಿವೃದ್ಧಿಪರ ವಿಸ್ತೃತ ಚಚರ್ೆಗೆ ಅವಕಾಶ ನೀಡಬೇಕಾಗಿರುವುದು ನಮ್ಮ ಕರ್ತವ್ಯವೂ ಹೌದು. ಏನೇ ಆಗಲಿ, ಒಟ್ಟಾರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಧಿವೇಶನ ಸಾರ್ಥಕವಾಗಲಿ!


ಸುದ್ದಿ ಓದಿ