ಕಂಪ್ಲಿ

“ವಿಶ್ವಾವಸು ನಾಮಸಂತ್ಸರದಲ್ಲಿ ಸುಖಃ,ದುಖಃಗಳು ಸಮಾನವಾಗಿವೆ : ಕೆ.ಎಂ.ಬಸವರಾಜ ಶಾಸ್ತ್ರಿ

“ವಿಶ್ವಾವಸು ನಾಮಸಂತ್ಸರದಲ್ಲಿ ಸುಖಃ,ದುಖಃಗಳು ಸಮಾನವಾಗಿವೆ : ಕೆ.ಎಂ.ಬಸವರಾಜ ಶಾಸ್ತ್ರಿ

“ವಿಶ್ವಾವಸು ನಾಮಸಂತ್ಸರದಲ್ಲಿ ಸುಖಃ,ದುಖಃಗಳು ಸಮಾನವಾಗಿವೆ : ಕೆ.ಎಂ.ಬಸವರಾಜ ಶಾಸ್ತ್ರಿ 

ಕಂಪ್ಲಿ  01:  ಮನುಕುಲದ ಶಾಂತಿ,ನೆಮ್ಮದಿ, ಸಮೃದ್ಧಿಯ ಜೀವನದ ಅಡಿಪಾಯವಾಗಿ ಪ್ರಾಚೀನ ಋಷಿಮುನಿಗಳು ಜ್ಯೋತಿಷ್ಯ ಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ,ಇದರಲ್ಲಿ ವೈಜ್ಞಾನಿಕ ಹಿನ್ನೆಲೆಯುಳ್ಳ ಸಂಸ್ಕಾರವಿದೆ, ಆದರೆ ಸಂಸ್ಕಾರದ ಕೊರತೆಯಿಂದಾಗಿ ಮನುಷ್ಯ ರಾಕ್ಷಕ ಪ್ರವೃತ್ತಿಯನ್ನು ತೋರುತ್ತಿರುವುದರಿಂದ ಜಗತ್ತಿನಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಪಟ್ಟಣದ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿಗಳು ಹೇಳಿದರು. 

ಅವರು ಹಿಂದೂಗಳ ಪವಿತ್ರ ಹಬ್ಬ ಹಾಗೂ ನೂತನ ವರ್ಷವಾದ ಯುಗಾದಿ ಹಬ್ಬದ ದಿನದ ನಿಮಿತ್ತವಾಗಿ ಕಲ್ಯಾಣಚೌಕಿ ಮಠದಲ್ಲಿಪಂಚಾಂಗ ಪಠಣ ಶಾಸ್ತ್ರಕ್ಕೆ ಚಾಲನೆ ನೀಡಿ ಮಾತನಾಡಿ ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿದ್ದು, ಅರ್ಥಪೂರ್ಣ ಜೀವನಕ್ಕೆ ಸಹಕಾರಿಯಾಗಿದೆ. ಪರೋಪಕಾರ,ಪರಸ್ಪರ ಸಹಕಾರ ಮನೋಭಾವ, ಕಷ್ಟಪಟ್ಟು ಧರ್ಮದ ಅನುಸಾರ ಗಳಿಸುವಿಕೆಯಿಂದ ಉತ್ತಮ ಜೀವನ ಸಾಗಿಸಬಹುದಾಗಿದೆ. 

 ಈ ವರ್ಷ “ವಿಶ್ವವಸು” ನಾಮಸಂವತ್ಸರದಲ್ಲಿ ವರ್ಷಪೂರ್ತಿ ಸುಖಃ,ದುಖಃಗಳು ಸಮಾನವಾಗಿದ್ದು, ಅಲ್ಲಲ್ಲಿ ಅಗ್ನಿಭಯ,ಕೊಲೆ, ಸುಲಿಗೆಗಳು ನಡೆಯುತ್ತವೆ. ಮಳೆ ಬೆಳೆಗಳು ಉತ್ತಮವಾಗಿದ್ದು,ರಾಜಕೀಯ ಪ್ರಮುಖರಲ್ಲಿ ಪರಸ್ಪರ ನಿಂದನೆಗಳು , ನಾಯಕರು, ಅಧಿಕಾರಿಗಳು ತೊಂದರೆಯನ್ನು ಅನುಭವಿಸುತ್ತಾರೆ. ಎಲ್ಲೆಡೆ ಅಶಾಂತಿಯ ವಾತಾವರಣ ತೋರಿಬರುತ್ತದೆ. ಅತೀವೃಷ್ಠಿಯಿಂದಾಗಿ ಕೆಲವು ಕಡೆಗಳಲ್ಲಿ ಬೆಳೆಗಳು ಹಾನಿಯಾಗುವ ಸಂಭವವಿರುತ್ತದೆ. ಬಿಸಿಲಿನ ತಾಪಮಾನ ಮಿತಿಮೀರುತ್ತದೆ.   

ಈ ವರ್ಷ ಉತ್ತಮ ಮಳೆ, ಬೆಳೆಗಳೂ ದೊರಕಲಿದ್ದು, ಸುಖಃ,ದುಖಃಗಳು ಸಮಾನವಾಗಿರಲಿವೆ. ಸಾರ್ವಜನಿಕರು ಪೂಜೆ,ಜಪ ಧ್ಯಾನ,ದೇವರಿಗೆ ಅಭಿಷೇಕ, ಪೂಜೆ, ಗುರು ಹಿರಿಯರಿಗೆ ಗೌರವಗಳನ್ನು ಕೊಡುವುದನ್ನು ರೂಢಿಸಿಕೊಳ್ಳುವುದರಿಂದ,ಧರ್ಮ ಕಾರ್ಯಗಳನ್ನು ಮಾಡುವುದರಿಂದ, ಉತ್ತಮ ಆಲೋಚನೆ ಮಾಡುವುದರಿಂದ ಈ ವರ್ಷ ಉತ್ತಮ ಫಲಗಳನ್ನು ಅನುಭವಿಸಬಹುದಾಗಿದೆ ಎಂದರು. 

ನಂತರ ಮಠಕ್ಕೆ ಆಗಮಿಸಿದ್ದ ಅನೇಕ ಭಕ್ತರು ತಮ್ಮ ರಾಶೀ ಫಲಗಳನ್ನು ತಿಳಿದುಕೊಂಡರು.ಕಾರ್ಯಕ್ರಮದಲ್ಲಿ ,ಚನ್ನಮಲ್ಲಶಾಸ್ತ್ರಿ ಕೆ.ಎಂ, ಕೆ.ಎಂ.ಪ್ರದೀಪ್ ಶಾಸ್ತ್ರಿ, ಅರವಿ ಅಮರೇಶಗೌಡ, ಯು.ಎಂ.ವಿದ್ಯಾಶಂಕರ್, ಪುಟ್ಟಿ ಸಚಿನ್, ಎಲಿಗಾರ ವೆಂಕಟರೆಡ್ಡಿ, ಮಂಜುನಾಥಗೌಡ, ಮುತ್ತು ಬೆನಕನಾಳ್‌ಮಠ, ಸಂತೋಷ ಕೊಟ್ರ​‍್ಪ ಸೋಗಿ ದಂಪತಿಗಳು, ಚೇತನಾ ಬಸವರಾಜಶಾಸ್ತ್ರಿ, ಮಲ್ಲಿಕಾರ್ಜುನಗೌಡ ಸೇರಿದಂತೆ ಅನೇಕರು ಇದ್ದರು.  ಪಠಣ ಮಾಡಿದರು. 


ಸುದ್ದಿ ಓದಿ