ಬ್ಯಾಡ್ಗಿ

ಪಾರ್ಕ್‌ ಅಭಿವೃದ್ಧಿ ಕಾಮಗಾರಿಯ "ಭೂಮಿ ಪೂಜೆ

ಪಾರ್ಕ್‌ ಅಭಿವೃದ್ಧಿ ಕಾಮಗಾರಿಯ "ಭೂಮಿ ಪೂಜೆ

ಪಾರ್ಕ್‌ ಅಭಿವೃದ್ಧಿ ಕಾಮಗಾರಿಯ "ಭೂಮಿ ಪೂಜೆ  

ಬ್ಯಾಡಗಿ 13: ಪಟ್ಟಣದ  ಗಾಂಧಿ ನಗರದ ಪಾರ್ಕ್‌ ನಲ್ಲಿ "ಮಾನ್ಯ ಮುಖ್ಯ ಮಂತ್ರಿಗಳ ಅಮೃತ ನಗರೋತ್ತನಾ ಹಂತ 4ರ ಯೋಜನೆಯ ಖಅಖಕ/ಖಿಖಕ ಅನುದಾನದಲ್ಲಿ ಪುರಸಭೆ ವಿವಿಧ ವಾರ್ಡಗಳಲ್ಲಿ ಚರಂಡಿ, ಪಾರ್ಕ್‌ ಅಭಿವೃದ್ಧಿ ಕಾಮಗಾರಿಯ *"ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸುವ ಕನಸನ್ನು ಹೊಂದಿದೆ. ಅದರಂತೆಪಟ್ಟಣದಲ್ಲಿ ಮೂಲ ಸೌಕರ್ಯ ಒದಗಿಸುವ ಸಲುವಾಗಿ ಹಲವು ಯೋಜನೆ ಹಾಕಿಕೊಂಡಿದ್ದೇವೆ. ಅದರಂತೆ ಪ್ರಸ್ತುತ ವಿವಿಧ ಕಾಲೊನಿಗಳನ್ನು ಆಯ್ಕೆ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಗೌಡ ಪಾಟೀಲ.ಉಪಾಧ್ಯಕ್ಷ ಸುಭಾಷ್ ಮಾಳಗಿ.ಶಿವಾನಂದ ಅಂಗಡಿ.ರಾಮಣ್ಣ ಕೋಡಿಹಳ್ಳಿ.ರಾಜಸಾಬ ಕಳ್ಯಾಳ .ಮಜೀದ ಮುಲ್ಲಾ.ಚಂದ್ರಣ್ಣ ಶೆಟ್ಟರ.ಸರೋಜಾ ಉಳ್ಳಾಗಡ್ಡಿ.ಕಲಾವತಿ ಬಡಿಗೇರ. ಗುತ್ತಿಗೆದಾರರ ನೀಲಪ್ಪ ಬಣಕಾರ.ಹಾಗೂ ಪುರಸಭೆ ಸದಸ್ಯರು ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ