ಎಸ್.ರಾಮಪ್ಪಗೆ “ಭಾರತ ಸೇವಾ ರತ್ನ” ಪ್ರಶಸ್ತಿ
ಎಸ್.ರಾಮಪ್ಪಗೆ “ಭಾರತ ಸೇವಾ ರತ್ನ” ಪ್ರಶಸ್ತಿ
ಕಂಪ್ಲಿ 29: ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕರಾಗಿ, ಕಾರ್ಯಕ್ರಮ ನಿರೂಪಕರಾಗಿ, ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಸ್.ರಾಮಪ್ಪ ಅವರಿಗೆ “ಭಾರತ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘ, ಕರ್ನಾಟಕ ಸೋಶಿಯಲ್ ಕ್ಲಬ್ ಮತ್ತು ಚೇತನ ಫೌಂಡೇಷನ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಎಮ್ಮಿಗನೂರು ಗ್ರಾಮದ ಸಹಿಪ್ರ ಶಾಲೆಯ ಗೌರವ ಶಿಕ್ಷಕ ಎಸ್.ರಾಮಪ್ಪನವರಿಗೆ “ಭಾರತ ಸೇವ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಶಿಕ್ಷಕ ಎಸ್.ರಾಮಪ್ಪ ಮಾತನಾಡಿ ನಿರಂತರವಾಗಿ ತಾವು ಗೌರವ ಶಿಕ್ಷಕರಾಗಿ ಮಾಡಿದ ಸೇವೆ, ವಿವಿಧ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಈ ಪ್ರಶಸ್ತಿಯಿಂದ ತಮ್ಮ ಜವಬ್ದಾರಿಗಳು ಇನ್ನು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಿಸಿಕೊಳ್ಳುವುದಾಗಿ ತಿಳಿಸಿದರು.