ಶಾಲಾ ಸಂಸತ್ತ ಚುನಾವಣೆ ನೂರಕ್ಕೇ ನೂರರಷ್ಟು ಮತದಾನ
ಲೋಕದರ್ಶನ ವರದಿ
ಶಿಗ್ಗಾವಿ : ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಚುನಾವಣೆಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಶಾಲಾ ಸಂಸತ್ತ ಚುನಾವಣೆಯನ್ನು ಮಾಡಲಾಗುತ್ತಿದೆ ಎಂದು ತಾಲೂಕಿನ ಹಳೆಬಂಕಾಪುರ ಗ್ರಾಮದ ಸಕರ್ಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಚ್.ಡಿ.ಆಸಾದಿ ಹೇಳಿದರು.
ತಾಲೂಕಿನ ಹಳೆಬಂಕಾಪುರ ಗ್ರಾಮದ ಸಕರ್ಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತ ಚುನಾವಣೆ ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅವರು ಇಂದಿನ ವಿದ್ಯಾಥರ್ಿಗಳಿಗೆ ಪ್ರಾಯೋಗಿಕ ಶಿಕ್ಷಣದ ಅವಸ್ಯಕತೆಯಿದ್ದು, ಆ ನಿಟ್ಟಿನಲ್ಲಿ ಶಾಲಾ ಸಂಸತ್ತ ಚುನಾವಣೆಯನ್ನು ನಡೆಸಲಾಗುತ್ತಿದೆ. ಇದರಿಂದ ವಿದ್ಯಾಥರ್ಿಗಳಿಗೆ ಚುನಾವಣೆಬಗ್ಗೆ ಸಂಪೂರ್ಣ ಅರಿವು ಮೂಡಲಿದೆ ಎಂದು ಹೇಳಿದರು.
ಶಿಕ್ಷಕರಾದ ಗಣೇಶ ಮಾಳಮ್ಮನವರ ಮಾತನಾಡಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಮತ ಚಲಾಯಿಸಬೇಕು. ನಾವು ಮತಹಾಕಿ ಆರಿಸಿ ಕಳುಹಿಸದ ವ್ಯಕ್ತಿಗಳ ಗುಂಪಿನಿಂದ ಸರಕಾರ ರಚನೆಯಾಗುವುದು. ಎಂದು ವಿದ್ಯಾಥರ್ಿಗಳಿಗೆ ಚುನಾವಣೆಬಗ್ಗೆ ಅರಿವುಮೂಡಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಭಾಷ ತಳವಾರ ಸದಸ್ಯ ಸಹದೇವಪ್ಪ ಬಾವಿಕಟ್ಟಿ ಮಾತನಾಡಿದರು. ಒಟ್ಟು 15 ಖಾತೆಗಳಿಗೆ 20 ನಾಮಪತ್ರ ಸಲ್ಲಿಕೆಯಾಗಿದ್ದವು, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ ನಂತರ ಜು. 18 ರಂದು ಚುನಾವಣೆ ನಡೆದು, 142 ಶಾಲಾ ಸಂಸತ್ತ ವಿದ್ಯಾಥರ್ಿಮತದಾರರಿಂದ ನೂರಕ್ಕೇ ನೂರು ಮತ ಚಲಾವಣೆಗೋಂಡವು. ಎಲ್ಲರು ಸರದಿ ಸಾಲಿನಲ್ಲಿ ನಿಂತು ಗುರುತಿನ ಚೀಟಿ ನೀಡಿ ಬೆರಳಿಗೆ ಶಾಹಿ ಹಾಕಿಸಿಕೊಳ್ಳುವಮೂಲಕ ಗೌಪ್ಯ ಮತದಾನ ಮಾಡಿದರು. ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರಾದ ಶಿವಾನಂದ ಸವಣೂರ ಹಾಗು ಆರ್.ಬಿ. ಡಾಣಗಲ್ ಕಾರ್ಯನಿರ್ವಹಿಸಿದರು.
ಶಿಕ್ಷಕರಾದ ನಂದಾ ಸುಂಕದ, ನಾಗರಾಜ ಗೋಂದಕರ್, ಮಾಲತೇಶ ಸಿದ್ದನಗೌಡ್ರ, ಎಸ್.ಆರ್.ಬಡಗಿ ರವಿ ಮುರಾರಿ, ಸೇರಿದಂತೆ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.