ಬ್ಯಾಡ್ಗಿ

ಒಂಭತ್ತು ದಿನಗಳ ದೇವಿಯ ಪಾರಾಯಣ ಕಾರ್ಯಕ್ರಮ

ಒಂಭತ್ತು ದಿನಗಳ ದೇವಿಯ ಪಾರಾಯಣ ಕಾರ್ಯಕ್ರಮ

ಬ್ಯಾಡಗಿ 18: ಗ್ರಾಮದೇವಿ ದೇವಸ್ಥಾನದ ವತಿಯಿಂದ ಶಿಕ್ಷಕ ಕೃಷ್ಣ ಬಡಿಗೇರ ಅವರಿಂದ 9 ದಿನಗಳ ದೇವಿಯ ಪಾರಾಯಣ ಕಾರ್ಯಕ್ರಮ ಆರಂಭಿಸಲಾಯಿತು. 

 ಪ್ರತಿ ವರ್ಷದ ಪದ್ಧತಿಯಂತೆ ಘಟಸ್ಥಾಪನಾ ಪೂರ್ವದಲ್ಲಿ ಪಾಠಶಾಲೆಯ ವಟುಗಳಿಂದ ಅಭಿಷೇಕ ಕುಂಕುಮಾರ್ಚನೆ ಮತ್ತು ಇತರೆ ಪೂಜಾ ಕೈಂಕರ‌್ಯಗಳು ಜರುಗಿದವು ಬಳಿಕ ದೇವಿ ಪಾರಾಯಣಕ್ಕೆ ಚಾಲನೆ ನೀಡಲಾಯಿತು. 

 ಈ ವೇಳೆ ಮುಖಂಡರಾದ ಎಸ್‌.ಆರ್‌.ಪಾಟೀಲ, ಪುಟ್ಟಪ್ಪ ಛತ್ರದ, ಗಂಗಣ್ಣ ಎಲಿ, ನಾಗರಾಜ ದೇಸೂರ, ಶಂಭು ಮಠದ, ಶಿವಬಸಪ್ಪ ಮಾಳೇನಹಳ್ಳಿ, ಚಂದ್ರಣ್ಣ ಶೆಟ್ಟರ, ಶಿವಾನಂದ ಸಾಲ್ಮನಿ, ಉಮಾ ಮಠದ, ಗಾಯತ್ರಿ ಹಳ್ಳಳ್ಳಿ, ಸುಶೀಲಮ್ಮ ಎಲಿ ಇನ್ನಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ