ಕಾಗವಾಡ

ಧಾರ್ಮಿಕದತ್ತ ಕೊಂಡ್ಯೊಯುವ ಸ್ವಸ್ತಿ ಚಲನಚಿತ್ರ

ಧಾರ್ಮಿಕದತ್ತ ಕೊಂಡ್ಯೊಯುವ ಸ್ವಸ್ತಿ ಚಲನಚಿತ್ರ

ಲೋಕದರ್ಶನ ವರದಿ

ಶೇಡಬಾಳ : ಇಂದಿನ ಚಲನಚಿತ್ರಗಳಲ್ಲಿ ಪ್ರೀತಿ, ಪ್ರೇಮ, ಕೊಲೆ, ಸುಲಿಗೆ, ದರೋಡೆ, ಅನೈತಿಕ ಚಟುವಟಿಕೆಗಳ ಕುರಿತು ಹೊರ ಬರುತ್ತಿರುವ ಚಲನಚಿತ್ರಗಳನ್ನು ವಿಕ್ಷೀಸಿ ಬೇಸತ್ತಿರುವ ಇಂದಿನ ಯುವಪೀಳಿಗೆಯನ್ನು ಧಾಮರ್ಿಕ ಭಾವನೆಯನ್ನು ಪ್ರೇರೆಪಿಸುವ, ಅಹಿಂಸಾ ತತ್ವವನ್ನು ಭೋದಿಸುವ, ಬದುಕು ಹಾಗೂ ಬದುಕಲು ಬಿಡಿ ಎಂಬ ತತ್ವ ಸಿದ್ಧಾಂತಗಳನ್ನು ಸಾರುತ್ತಾ ಬೋಧಿಸುವ ಯುವಪೀಳಿಗೆಯನ್ನು ಅಧ್ಯಾತ್ಮಿಕದತ್ತ ಕೊಂಡ್ಯೊಯುವ ಚಲನಚಿತ್ರ ಸ್ವಸ್ತಿ ಚಲನಚಿತ್ರವಾಗಿದ್ದು ಕನರ್ಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಚಿತ್ರ ಮಂದಿರಗಳಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಾ 2ನೇ ವಾರದಲ್ಲಿ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿ ಗ್ರಾಮಗಳಿಂದ ತಂಡೋಪತಂಡವಾಗಿ ಜೈನ ಧಮರ್ಿಯರು ಸಮೀಪದ ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವಿಕ್ಷೀಸುತ್ತಿರುವುದು ಸಾಮಾನ್ಯವಾಗಿದೆ. 

ತಮ್ಮ ಮಕ್ಕಳನ್ನು ಸನ್ಮಾರ್ಗದತ್ತ ಕೊಂಡ್ಯೋಯುವಗೋಸ್ಕರ ಕಡ್ಡಾಯವಾಗಿ ಕುಟುಂಬದ ಹಿರಿಯರು ಸ್ವಸ್ತಿ ಚಲನಚಿತ್ರ ವಿಕ್ಷೀಸುವಂತೆ ಕುಟುಂಬ ಸದಸ್ಯರನ್ನು ಚಲನಚಿತ್ರ ಮಂದಿರಗಳಿಗೆ ಕಳುಹಿಸಿಕೊಡುತ್ತಿರುವುದು ನಾವು ಇಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಸ್ವಸ್ತಿ ಚಲನಚಿತ್ರವು ಯುವಪೀಳಿಗೆಯನ್ನು ಧಾಮರ್ಿಕದತ್ತ ಕೊಂಡ್ಯೋಯುವ ಚಲನಚಿತ್ರವಾಗಿದ್ದಂತೂ ಸತ್ಯ. ಸಮಾಜವು ಸನ್ಮಾರ್ಗದತ್ತ ಸಾಗಬೇಕಾದರೆ ವರ್ಷಕ್ಕೋಂದಾದರೂ ಸ್ವಸ್ತಿ ಚಲನಚಿತ್ರದಂತಹ ಚಿತ್ರಗಳು ತೆರೆ ಕಾಣಬೇಕಾದದ್ದು ಅತ್ಯವಶ್ಯವಾಗಿದೆ.  

ಸ್ವಸ್ತಿ ಈ ಚಲನಚಿತ್ರವು ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿಮಹಾರಾಜರ ಜೀವನಾಧಾರಿತವಾಗಿರುವಂಥ ಚಿತ್ರ. ಜೈನ ಪರಂಪರೆಯು ಮುರಿದು ಬೀಳುತ್ತಿದ್ದ ಸಮಯದಲ್ಲಿ ದಿಗಂಬರ ದೀಕ್ಷೆಯನ್ನು ಸ್ವೀಕರಿಸಿ, ಮುನಿಚರ್ಯ, ಮುನಿಗಳ ಆಚಾರ-ವಿಚಾರ ಹಾಗೂ ದಿಗಂಬರತ್ವದ ಮಹತ್ವವನ್ನು ಸಾರಿ ಹೇಳಿದ 20 ನೇಯ ಶತಮಾನದ ಪ್ರಥಮಾಚಾರ್ಯ ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿಮಹಾರಾಜದ ಜೀವನಾಧಾರಿತವು ಈ ಚಿತ್ರದ ಕಥೆಯ ಹಂದರವಾಗಿದೆ. 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮದಲ್ಲಿ ಜನ್ಮತಾಳಿದ್ದ ಆಚಾರ್ಯ ಶ್ರೀ ಶಾಂತಿಸಾಗರ ಮುನಿಮಹಾರಾಜರ ಹೆಸರು ಸಾತಗೌಡ. ತಂದೆ ಭೀಮಗೌಡ, ತಾಯಿ ಸತ್ಯವತಿ. 1872 ರಿಂದ 1955 ರವರೆಗೆ ನಡೆಯುವ ಜೀವನಾಧಾರಿತ ಈ ಚಲನಚಿತ್ರದಲ್ಲಿ ಶಾಂತಿಸಾಗರ ಮಹಾರಾಜರ ಪಾತ್ರದಲ್ಲಿ ಗ್ರಾಮೀಣ ಭಾಗದ ಕಲಾವಿದರಾದ ಉಗಾರ ಬುದ್ರುಕ ಗ್ರಾಮದ ರಾಜು ಪಾಟೀಲ ಅವರು ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಚಲನಚಿತ್ರ ಕಲಾವಿದರಾದ ಜಯಕುಮಾರು, (ಜೂ. ರಾಜಕುಮಾರ), ರಾಜ್ಯಪ್ರಶಸ್ತಿ ವಿಜೇತ ಹಾಸ್ಯನಟ ಬಿರಾದಾರ, ಡಿಂಗ್ರಿ ನಾಗರಾಜ, ಪೋಷಕ ನಟ ದತ್ತಣ್ಣ, ಶಂಕರ ಪಾಟೀಲ, ಶೃಂಗೇರಿ ರಾಮಣ್ಣ ಹಾಗೂ ಕೆ.ಎಲ್.ಕುಂದರಗಿ ಕಲಾವಿದರು ನಟಿಸಿರುತ್ತಾರೆ. ಅದರಂತೆ ಸ್ತ್ರೀ ಪಾತ್ರಗಳಲ್ಲಿ ವಿದ್ಯಾ, ಮಾಧುರಿ, ಶೃತಿ ಮತ್ತಿತರರು ನಟಿಸಿರುತ್ತಾರೆ. ಈ ಚಿತ್ರದ ಚಿತ್ರೀಕರಣವು ಶ್ರವಣಬೆಳಗೋಳ, ತುಮಕೂರು, ಶಿವಮೊಗ್ಗ, ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ, ಕುಡಚಿ, ನಂದಗಾಂವ, ಭದ್ರಗಿರಿ, (ಹಳಿಂಗಳಿ) ಹಾಗೂ ಮಹಾರಾಷ್ಟ್ರದ ಸಾತಾರಾದಲ್ಲಿ ನಡೆದಿರುತ್ತದೆ.

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿಮರ್ಾಪಕ ಹಾಗೂ ನಿದರ್ೇಶಕ ಹೊನೆಯನ್ನು ಉಗಾರ ಬುದ್ರುಕ ಗ್ರಾಮದ ಯುವ ಕಲಾವಿದ ರಾಜು ಪಾಟೀಲರೇ ಹೊತ್ತುಕೊಂಡಿದ್ದಾರೆ.

ಯಶಸ್ವಿಯಾಗಿ 2ನೇ ವಾರದತ್ತ ಸಂತೋಷ ಬೆಳಗಾವಿ, ಮಯೂರ ಅಂಕಲಿ, ರಾಜಶ್ರೀ ನಿಪ್ಪಾಣಿ, ಪದ್ಮಶ್ರೀ ಹಾರೂಗೇರಿ, ಮಲ್ಲಿಕಾಜರ್ುನ ಬನಹಟ್ಟಿ, ದುಗರ್ಾಲಕ್ಷ್ಮೀ ಉಗಾರ, ಸಾಯಿನಾಥ ಸಂಕೇಶ್ವರ, ಮಹಾರಾಷ್ಟ್ರದ ರಾಘವೇಂದ್ರ ಕುರುಂದವಾಡ, ಝೇಲೆ ಜಯಸಿಂಗಪೂರ ಚಿತ್ರಮಂದಿರಗಳಲ್ಲಿ ಸ್ವಸ್ತಿ ಚಲನಚಿತ್ರವು ಜನ ಮನ್ನಣೆಯಿಂದ ಮುನ್ನುಗ್ಗುತ್ತಿರುವ ಚಲನಚಿತ್ರವಾಗಿದೆ.



ಸುದ್ದಿ ಓದಿ