‘ಡಿಜಿಟಲ್ ಸಾಧನೆಗಳನ್ನು ಬಳಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ’
ಯರಗಟ್ಟಿ 14: ಗ್ರಾಮೀಣ ಗ್ರಂಥಾಲಯಗಳು ಈಗ ಅರಿವು ಕೇಂದ್ರವಾಗಿ ಡಿಜಿಟಲ್ ಮಾಹಿತಿಗಳನ್ನು ತ್ವರಿತವಾಗಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಿಕ್ಷಣ ಪೌಂಡೇಶನ್ ಮದ್ಯ ಕರ್ನಾಟಕದ ರೋರಲ್ ಮ್ಯಾನೇಜರ್ ಶ್ರೀಶೈಲ ಅಥಣಿ ತಿಳಿಸಿದರು.
ಅವರು ತಾಲೂಕ ಪಂಚಾಯತ ಸಭಾ ಭವನದಲ್ಲಿ ಗ್ರಾಮ ಪಂಚಾಯತಿ ಮೇಲ್ವಿಚಾರಕರಿಗೆ ಶಿಕ್ಷಣ ಪೌಂಡೇಶನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಒಂದು ದಿನದ ನಾಯಕತ್ವ ಮತ್ತು ಡಿಜಿಟಲ್ ಸಾಕ್ಷರತೆಯ ಕುರಿತಾದ ಒಂದು ದಿನದ ತರಬೇತಿಯ ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಪೌಂಡೇಶನ್ ಬೆಳಗಾವಿ ಜಿಲ್ಲಾ ಸಂಯೋಜಕರಾದ ರಾಘವೇಂದ್ರ ನಾಯ್ಕ ಮಾತನಾಡಿ ಆದುನಿಕತೆಯ ಸ್ಪರ್ಶ ಪಡೆದ ಗ್ರಾಮ ಪಂಚಾಯತ ಅರಿವು ಕೇಂದ್ರಗಳು ಸಮಾಜ ಮುಖ್ಯ ವಾಹಿನಿಯಲ್ಲಿ ಗುರುತಿಸುವಕೊಳ್ಳುವಂತೆ ಮಾಡಬೇಕು ಗ್ರಂಥಾಲಯಗಳ ಶಿಕ್ಷಣ ಪೌಂಡೇಶನ್ ಸಂಸ್ಥೆಯಿಂದ ನೀಡಿರುವ ಡಿಜಿಟಲ್ ಸಾಧನೆಗಳನ್ನು ಬಳಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾದ್ಯವಾಗಬೇಕು ಎಂದರು.
ಜಿಲ್ಲಾ ಸಂಯತೋಜಕರಾದ ಬಾಳಪ್ಪ ಮಡಿವಾಳರ ಮಾತನಾಡಿ ಜೀವನದಲ್ಲಿ ಕೌಶಲ್ಯವಿದ್ದರೆ ಮಾತ್ರ ಜ್ಞಾನಕ್ಕೆ ಬಲವಿರುತ್ತದೆ ಮುಂಬರುವ ಪಿಳಿಗೆಗೆ ಡಿಜಿಟಲ್ ಸಾಕ್ಷರತೆ ಅಗತ್ಯವಾಗಿದೆ ಎಂದರು. ಸಂದರ್ಬದಲ್ಲಿ ಕಾರ್ಯನಿರ್ವಾ ಅಧಿಕಾರಿ ಆನಂದ ಬಡಕುಂದರಿ, ಎಡಿಪಿ ಆರ್ ಎ ಪಾಟೀಲ, ಮಂಜುನಾಥ ಮ್ಯಾಗಿನಮನಿ, ಈರಣ್ಣ ಗುಂಡಗಾಂವಿ, ಮುನಿಯಪ್ಪ ಅಮೋಗಿಮಠ, ರಾಜು ಗಾಣಿಗೇರ, ಮಂಜುನಾಥ ಅಂಗಡಿ ಮುಂತಾದವರು ಇದ್ದರು.