'ರಂಗಭೂಮಿ ಕಲೆ ನಾಡಿನ ಕಲಾ ಸಂಸ್ಕೃತಿಯ ಪ್ರತೀಕ'
ಬೈಲಹೊಂಗಲ 05: ರಂಗಭೂಮಿ ಕಲೆ ನಮ್ಮ ನಾಡಿನ ಕಲಾ ಸಂಸ್ಕೃತಿಯ ಪ್ರತೀಕವಾಗಿದೆ. ಆದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಬೆಳೆದಂತೆ ಟಿವಿ,ಮೊಬೈಲ್ಗಳ ಅತಿಯಾದ ಬಳಕೆಯಿಂದ ರಂಗಕಲೆ ಅವನತಿಯತ್ತ ಸಾಗಿದೆ. ಆದ್ದರಿಂದ ಇಂದಿನ ಪೀಳಿಗೆಗೆ ಕನ್ನಡ ರಂಗಭೂಮಿಯ ಇತಿಹಾಸ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಖ್ಯಾತ ಹಾಮರ್ೋನಿಯಮ ವಾದಕ ಅಡವಯ್ಯಸ್ವಾಮಿ ಕುಲಕಣರ್ಿ ಅವರಿಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನವಾದ ಹಿನ್ನೆಲೆಯಲ್ಲಿ ಗ್ರಾಮದ ಅವರ ಮನೆಗೆ ಭೇಟಿ ನೀಡಿ, ಬಳಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಗೌರವ ಸತ್ಕಾರ ಮಾಡಿ ಕೌಜಲಗಿ ಅವರು ಮಾತನಾಡಿದರು.
ಅಡವಯ್ಯಸ್ವಾಮಿಜಿಯವರು ರಂಗಕಲೆಗಾಗಿ ಕೊಟ್ಟ ಕೊಡುಗೆ ಶ್ಲಾಘನೀಯ ಅವರ ಸಾಧನೆ ಇಂದಿನ ಯುವ ಕಲಾವಿದರಿಗೆ ಸ್ಫೂತರ್ಿಯಾಗಿದೆ. ಅವರಿಗೆ ಸರಕಾರದಿಂದ ಸಿಗಬೇಕಾದ ಎಲ್ಲ ಸವಲತ್ತು ಸೌಲಭ್ಯ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಇದೇ ವೇಳೆ ಕೌಜಲಗಿ ಅವರು ಭರವಸೆ ನೀಡಿದರು.
ಪ್ರಮುಖರಾದ ಚನ್ನಬಸಪ್ಪ ಅರಳಿಮರದ, ಗುರುಪಾದಯ್ಯ ಚರಂತಿಮಠ, ಮಂಜುನಾಥ ವಾಳಿ, ವಿಜಯ ಅಲಸಂಧಿ ಗುರು ಅರಳಿಮರದ, ಬಸವರಾಜ ಅಂದಾನಶೆಟ್ಟಿ, ಶಂಕರೆಪ್ಪ ಅಂದಾನಶೆಟ್ಟಿ, ಮಹಾಂತೇಶ ಉಪ್ಪಿನ, ವಿಠ್ಠಲ ಕಾಳಿ, ನಿಂಗಪ್ಪ ಗುಂಡಗ್ಯೆ, ಬಸವಂತ ಜಮನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಮಲ್ಲಪ್ಪ ಯರಿಕಿತ್ತೂರ ನಿರೂಪಿಸಿ ವಂದಿಸಿದರು.