ಬ್ಯಾಡ್ಗಿ

'ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗೆ ಕಠಿಣ ಕಾನೂನು ಕೈಗೊಳ್ಳಬೇಕು'

'ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗೆ ಕಠಿಣ ಕಾನೂನು ಕೈಗೊಳ್ಳಬೇಕು'

ಬ್ಯಾಡಗಿ 11: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗೆ ಕಠಿಣ ಕಾನೂನು ಕೈಗೊಳ್ಳಬೇಕು ಹಾಗೂ ಬಾಲಕಿಯ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ  ರಕ್ಷಣಾ ವೇದಿಕೆಯ ಪ್ರವೀಣಕುಮಾರ ಶೆಟ್ಟಿ ಬಣದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹನುಮಂತ ಭೋವಿ ಮಾತನಾಡಿ, ಕಲಬುರ್ಗಿ  ಜಿಲ್ಲೆಯ ಅಫಜಲಪುರ ತಾಲೂಕಿನ ವಿದ್ಯಾರ್ಥಿನಿ ಆಳಂದ ತಾಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯು ಬಹಿರ್ದೇಸೆಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿಗಳು ಬಾಲಕಿಯನ್ನು ಕಬ್ಬಿನ ಗದ್ದೆಗೆ  ಎಳೆದೊಯ್ದು ಅತ್ಯಾಚಾರವೆಸಗಿ. ನಂತರ ಬಾಲಕಿಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. 

ಈ ದುಷ್ಕೃತ್ಯವನ್ನು ಎಸಗಿದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ಗಲ್ಲು ಶಿಕ್ಷೆಯನ್ನು ವಿಧಿಸಬೇಕಲ್ಲದೇ, ನೊಂದ ಬಾಲಕಿಯ ಕುಟುಂಬಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಎಸ್.ಎ.ಪ್ರಸಾದ ಅವರು ಈ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಾದೇವಪ್ಪ ಹೆಡಿಗೊಂಡ,  ಫಕೀರೇಶ್ ಕಟ್ಟಿಮನಿ, ಅನ್ನಪೂರ್ಣ ವಡ್ಡಟ್ಟಿ ಭಾಷಾ ಓಲೇಕಾರ, ಬಾಹುಬಲಿ ಜೈನರ, ಮಂಜುನಾಥ್ ದೊಡ್ಮನಿ, ಪ್ರೇಮ ಮೂಲಿಮನಿ, ಮಾಲತೇಶ ಹೆಬಸೂರ, ಮಹೇಶ ಬುಳ್ಳಮ್ಮನವರ, ಚಂದ್ರು ವಡ್ಡರ, ಸೋಮಣ್ಣ ಕೂರಗುಂದ, ಲಕ್ಷ್ಮಿ ಕಜ್ಜರಿ, ಎಲ್ಲವ್ವ ಹೊಟ್ಟೆಪ್ಪನವರ, ರೇಣುಕಾ ಬಡಿಗೇರ, ದಾದಾಪೀರ್ ಶಿರಹಟ್ಟಿ, ಫಾರೂಕ್ ಬೆಳಗಾಂ, ಚಮನಅಲಿ ರಾಣೆಬೆನ್ನೂರು, ಹನುಮಂತಪ್ಪ ಬುಡುಪನಳ್ಳಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಸುದ್ದಿ ಓದಿ