ಜಮಖಂಡಿ

‘ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರ ಸಂಘ ಲಾಭದತ್ತ’

‘ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರ ಸಂಘ ಲಾಭದತ್ತ’

ಜಮಖಂಡಿ 23:ಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ 2019ರಂದು ಪ್ರಾರಂಭವಾದ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರ ಸಂಘವು ಮೂರು ತಿಂಗಳ ಅವಧಿಯಲ್ಲಿ 10 ಲಕ್ಷ ಠೇವಣಿಗಳಿಂದ 40 ಸಾವಿರ ಲಾಭದಿಂದ 5 ನೇ ವರ್ಷದಲ್ಲಿ ಪಾದಾರೆ​‍್ಣಗೊಂಡಿದೆ. ಮೊದಲು 784 ಶೇರುದಾರರಿದ್ದು ಈಗ 8466 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, 28 ಲಕ್ಷ ಷೇರು ಬಂಡವಾಳದಿಂದ ಪ್ರಾರಂಭವಾದ ಸಂಸ್ಥೆ 6 ಕೋಟಿ 28ಲಕ್ಷ ರೂ,ಗಳ ಷೇರು ಬಂಡವಾಳ ಪಡೆದುಕೊಂಡಿದೆ ಎಂದು ಮಾಜಿ ಶಾಸಕ ಸಂಸ್ಥೆಯ ಅಧ್ಯಕ್ಷ ಆನಂದ ನ್ಯಾಮಗೌಡ ಹೇಳಿದರು. 

ನಗರದ ರಾಯಲ್ ಪ್ಯಾಲೇಸ ಶಾಲೆಯ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ 3 ಕೋಟಿ 46 ಲಕ್ಷ ರೂಗಳು ಠೇವು ಸಂಗ್ರಹವಾಗಿದೆ. ಕೇವಲ ಒಂದು ವರ್ಷದಲ್ಲಿ 84 ಕೋಟಿ ರೂ, ಷೇರು ಹಣ ಕ್ರೋಢಿಕರಣವಾಗಿದೆ. 2ನೇ ವರ್ಷ 2ಕೋಟಿ ಅಷ್ಟು ಲಾಭವನ್ನು ಮಾಡಿತ್ತು. ಶೇ.15 ಡಿವಡೆಂಡ್ ನೀಡಲಾಗಿತ್ತು.  ಪ್ರಸ್ತುತ ವರ್ಷದಲ್ಲಿ 3 ಕೋಟಿ 19 ಲಕ್ಷ ಲಾಭವನ್ನು ಪಡೆದುಕೊಂಡಿದೆ. ಎಲ್ಲ ಷೇರು ಸದಸ್ಯರಿಗೆ ಶೇ, 18 ರಷ್ಟು ಡಿವಡೆಂಡ್ ನೀಡಬೇಕೆಂದು ಆಡಳಿತ ಮಂಡಳಿ ತೀರ್ಮಾನಿಸಲಾಗಿದೆ ಎಂದರು. 

ನಮ್ಮ ಸಂಸ್ಥೆಯು 5 ಸ್ಥಳಗಳಲ್ಲಿ ಶಾಖೆಯ ಕಾರ್ಯನಿರ್ವಹಿಸುತ್ತಿದೆ. ಜಮಖಂಡಿ, ರಬಕವಿ,ಬನಹಟ್ಟಿ, ಮುಧೋಳ, ಜಮಖಂಡಿ ಸಕ್ಕರೆ ಕಾರ್ಖಾನೆಯಲ್ಲಿ, ಸಾವಳಗಿಯಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ 10 ಶಾಖೆಗಳನ್ನು ಪ್ರಾರಂಭ ಮಾಡಲಿಕ್ಕೆ ಅನುಮತಿಯನ್ನು ಪಡೆದುಕೊಂಡಿದ್ದು. ಕೋಲಾರದಲ್ಲಿ, ಬಾಗಲಕೋಟ, ಜೈನಾಪೂರ, ಬಬಲೇಶ್ವರ ಹೀಗೆ ಹಲವು ಕಡೆಗಳಲ್ಲಿ ಶಾಖೆಗಳನ್ನು ಪ್ರಾರಂಭ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಲಾಭ ನೋಡಿದರೆ ನಮ್ಮ ಸಂಸ್ಥೆಯ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ. ಈ ಸಂಸ್ಥೆಯಿಂದ ಮುಂದಿನ ದಿನದಲ್ಲಿ ರೈತರಿಗೆ ಬೇಕಾಗುವ ರಸಗೊಬ್ಬರ ಓಷಧಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವದು ಎಂದರು. 

ವರ್ಧಮಾನ ನ್ಯಾಮಗೌಡ, ಎ.ಆರ್‌.ಸಿಂಧೆ, ಭಾಸ್ಕರ ಬಡಿಗೇರ, ನಿಂಗಪ್ಪಾ ಕಡಪಟ್ಟಿ, ಕಲ್ಲಪ್ಪಾ ಗಿರಡ್ಡಿ, ಮುತ್ತಪ್ಪಾ ತಳವಾರ, ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ