ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇಂದಿಗೂ ಮನೆ ಮಾತಾಗಿದೆ: ಸರೋಜಾ ಉಳ್ಳಾಗಡ್ಡಿ
ಬ್ಯಾಡಗಿ 22: ಸಾಮರಸ್ಯದ ಪರಿಕಲ್ಪನೆಯಿಂದ ಸುಮಾರು ಹನ್ನರಡನೇ ಶತಮಾನದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಭಾರತೀಯ ಸುಶ್ರಾವ್ಯ ಸಂಗೀತದಲ್ಲಿ ಇಂದಿಗೂ ಮನೆ ಮಾತಾಗಿದೆ, ಇಂತಹದ್ದೊಂದು ಮಾಂತ್ರಿಕ ಶಕ್ತಿಯಿಂದ ವಿಶ್ವದ ಮೂಲೆ ಮೂಲೆಗೂ ಹಿಂದೂಸ್ಥಾನಿ ಗಾಯನಸುಧೆ ಹರಿಯುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಚಾವಡಿ ರಸ್ತೆಯಲ್ಲಿರುವ ವಾಜಪೇಯಿ ರಂಗಮಂದಿರದಲ್ಲಿ 42 ನೇ ಗಣೇಶೋತ್ಸವದ ಅಂಗವಾಗಿ ಶ್ರೀ ಆಂಜನೇಯ ಯುವಕ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ‘ಸಂಗೀತ ಸುಧೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ಯಕಾಲೀನ ಕಾಲದಲ್ಲಿ ಮಧುರ ವ್ಯವಸ್ಥೆಗಳು ಪರ್ಷಿಯನ್ ಸಂಗೀತದ ಕಲ್ಪನೆಗಳೊಂದಿಗೆ ಬೆಸೆಯಲ್ಪಟ್ಟವು, 16 ನೇ ಶತಮಾನದ ಬಳಿಕ ಗಾಯನದ ಶೈಲಿಗಳು ರಾಜಪ್ರಭುತ್ವದಲ್ಲಿ ಅರಸರಿಂದ ಪೋಷಣೆಗೊಳಗಾಗಿ ಕೊನೆಗೆ ಇಂದಿನ ಶೈಕ್ಷಣಿಕ ವ್ಯವಸ್ಥೆಗಳಾಗಿ ಪರಿವರ್ತನೆಗೊಂಡಿವೆ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸುಮಾ ಹೂಲಿಹಳ್ಳಿ, ಕೇಂದ್ರ ಸರ್ಕಾರದ ಮಂಡಿಸಿದ ಮಹಿಳಾ ಮೀಸ ಲಾತಿ ಮಸೂದೆ ಅಂಗೀಕಾರವಾಗಿದ್ದು ಸಂತಸದ ಸಂಗತಿ, 42 ವರ್ಷದಿಂದ ಗಣೇಶೋತ್ಸವ ಕಾರ್ರಕ್ರಮವನ್ನು ಅಚ್ಚುಕಟ್ಟಾಗಿ, ಅರ್ತಪೂರ್ಣವಾಗಿ ಆಚರಣೆ ಮಾಡುತ್ತ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಯುವಕ ಮಂಡಳಿ ಮಹತ್ತರ ವಾದ ಕಾರ್ಯವನ್ನು ಮಾಡುತ್ತಿದೆ ಎಂದರು.
ಪಟ್ಟಣದ ವಾಗ್ದೇವಿ ಸಂಗೀತ ವಿದ್ಯಾಲಯ ಶಿಕ್ಷಕಿ ಹೇಮಾ ಜೋಯಿಸ್ ಅವರು ತಮ್ಮ ವಿಧ್ಯಾರ್ಥಿಗಳೊಂದಿಗೆ ನಡೆಸಿಕೊಟ್ಟ ಸಂಗೀತ ಸುಧೆ ಕಾರ್ಯಕ್ರಮ ಸೇರಿದ್ದ ಸಾವಿರಾರು ಪ್ರೇಕ್ಷಕರನ್ನ ಮಂತ್ರ ಮುಗ್ಧರನ್ನಾಗಿಸಿತು, ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಫಕ್ಕೀರಮ್ಮ ಛಲವಾದಿ ಸೇರಿದಂತೆ ಗೀತಾ ಕಬ್ಬೂರ ಇನ್ನಿತರರಿದ್ದರು.