ಹೂವಿನ ಹಡಗಲಿ

‘ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಮೀಸಲಾತಿ ಅಗತ್ಯ’

‘ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಮೀಸಲಾತಿ ಅಗತ್ಯ’

ಲೋಕದರ್ಶನ ವರದಿ 

ಹೂವಿನಹಡಗಲಿ 18: ವೀರಶೈವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಕೊಡಿ. ಇಲ್ಲದಿದ್ದರೇ ಮುಂಬರುವ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ ಎಚ್ಚರಿಸಿದರು.  

ಪಟ್ಟಣದ  ಶಿವಶಾಂತವೀರ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಪಂಚಮಸಾಲಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ‌್ಯಕ್ರಮದಲ್ಲಿ ಮಾತನಾಡಿ ಕೃಷಿ ಅವಲಂಬಿತ ಪಂಚಮಸಾಲಿಗೆ 2ಎ ಮೀಸಲಾತಿ ಅರ್ಹವಾಗಿದೆ.  ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಮೀಸಲಾತಿ ಅಗತ್ಯವಿದೆ.ಸಿಎಂ.ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ಮೀಸಲಾತಿ ಘೋಷಿಸಿದರೆ ಸಮಾಜ ಅವರಿಗೆ ಋಣಿಯಾಗಲಿದೆ ಎಂದರು.  

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಜಿ.ಪಿ.ಪಾಟೀಲ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜ ಸಂಘಟನೆ ನಿಂತ ನೀರಾಗಬಾರದು.ಸಮುದಾಯದ ಒಳಿತಿಗಾಗಿ ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಬೇಕು ಎಂದರು. 

ಪಂಚಮಸಾಲಿ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ್ ಪಾಟೀಲ ಮಾತನಾಡಿ ಮೀಸಲಾತಿಯನ್ನು ಸರ್ಕಾರ ಕಾನೂನು ತೊಡಕಾಗದಂತೆ ಘೋಷಿಸಿಬೇಕಿದೆ.ಈ ವಿಚಾರದಲ್ಲಿ ಸಮುದಾಯವನ್ನು ಪ್ರಚೋದಿಸುವುದು ಸರಿಯಲ್ಲ ಎಂದರು.ಗವಿಮಠದ ಹಿರಿಶಾಂತವೀರಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ತಾಲೂಕು ಪಂಚಮಸಾಲಿ ಅಧ್ಯಕ್ಷ ಗಡ್ಡಿ ಪತ್ರೆಪ್ಪ ಅಧ್ಯಕ್ಷತೆ ವಹಿಸಿದ್ದರು. 

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಮಾಜದ ಮುಖಂಡರಾದ ನಂದಿಹಳ್ಳಿ ಹಾಲಪ್ಪ,ಪಿ.ಕೇಶಪ್ಪ, ಕೋಡಿಹಳ್ಳಿ ಮುದುಕಪ್ಪ, ಸೊಪ್ಪಿನವೀರಣ್ಣ, ವಿ.ಬಿ.ಜಗದೀಶ್, ಬಸವನಗೌಡ ಪಾಟೀಲ, ವೀರಭದ್ರ​‍್ಪ,ಮಲ್ಲೆಪ್ಪ, ಬಸೆಟ್ಟಿ ಪ್ರಕಾಶ, ಜಯಪ್ರಕಾಶ, ಅಕ್ಕಮ್ಮ, ಜಯಲಕ್ಷ್ಮಿ.ಕಲ್ಪನಾ ಹೆಚ್‌. ಪಾಟೀಲ ಇದ್ದರು. 


ಸುದ್ದಿ ಓದಿ