ಬ್ಯಾಡ್ಗಿ

'ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು'

'ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು'

ಬ್ಯಾಡಗಿ 11:  ಇಂದು ಬ್ಯಾಡಗಿ ತಹಶೀಲ್ದಾರ ಕಚೇರಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿರವರು. ಕನಕದಾಸರು ಕರ್ನಾಟಕ ದಲ್ಲಿ  ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ ಇನ್ನೂರೈವತ್ತಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರೇ ಶೂದ್ರ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನ ಕಾರರು ಮತ್ತು ಕರ್ನಾಟಕ  ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟವರು.  ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು ಕನಕದಾಸರು. 

ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತವರೇಣ್ಯರು ಕನಕದಾಸರು. ಕನಕದಾಸರನ್ನು ಕೇವಲ ವಂದೇ ಕುಲಕ್ಕೆ ಸೀಮಿತಗೊಳಿಸದೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಶಂಕ್ರಣ್ಣ ಮಾತನವರ, ರಾಮಣ್ಣ ಉಕ್ಕುಂದ, ತಹಸೀಲ್ದಾರರಾದ ಎಸ್ ಎ ಪ್ರಸಾದ, ಗುಡ್ಡಪ್ಪ ದೇಸಾಯಿ, ಬಸವರಾಜ ಕಂಬಳಿ, ಸೋಮಣ್ಣ ಬರಡಿ, ನಿಂಗಣ್ಣ ಬಟಲಕಟ್ಟಿ, ಯಮನೂರಪ್ಪ ಉಜನಿ, ಶಿವಾನಂದ ವಗ್ಗರಣಿ, ಡಾ:ಹನುಮಂತ ಸುಂಕಾಪುರ, ಜಿತೇಂದ್ರ ಸುಣಗಾರ, ಲಿಂಗರಾಜ ಆಡಿನವರ, ವೀರೇಂದ್ರ ಶೆಟ್ಟರ, ಕೆ ಸಿ ಮೊರೆ ಹಾಗೂ ಸಮಾಜ ಬಾಂಧವರು, ತಾಲೂಕಾ ಮಟ್ಟದ ಅಧಿಕಾರಿಗಳು ಜೊತೆಗಿದ್ದರು 

ಸುದ್ದಿ ಓದಿ