ಯರಗಟ್ಟಿಯಲ್ಲಿ ಮಹಿಳೆಯರಿಂದ ವಿಶೇಷ ಸಂಕ್ರಾಂತಿ ಆಚರಣೆ
ಲೋಕದರ್ಶನ ವರದಿ
ಯರಗಟ್ಟಿ 15: ಪಟ್ಟಣದ ವಿವೇಕಾನಂದ ನಗರದ ಮಹಿಳೆಯರು ಮನೆಯ ಮುಂದೆ ಸುರ್ಯ ದೇವನಿಗೆ ವಿವಿಧ ಬಗೆಯ ಪೂಜೆ ಸಲ್ಲಿಸಿ ಮನೆಯ ಮುಂದೆ ಒಲೆಹೂಡಿ ಪೊಂಗಲ್, ಪಾಯಸಾ, ಕಡಬು ಹೀಗೆ ಬಗೆಬಗೆಯ ಸಿಹಿತಿಂಡಿ ತಯಾರಿಸಿ ವಿಷೇಶವಾಗಿ ಮಕರ ಸಂಕ್ರಾಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಅನ್ನಪೂರ್ಣಾ ವಿರಕ್ತಮಠ, ಸೃಷ್ಠಿ ಪಟ್ಟಣಶೆಟ್ಟಿ, ಯಶೋದಾ ಕನಕಪ್ಪನವರ, ಕವಿತಾ ತಮಿಳನಾಡು, ಲಕ್ಷ್ಮೀ ಶೆಟ್ಟಿ, ಪ್ರೀಯಂಕಾ ರಾಯರ, ಮಂಜುಳಾ ರಂಗನ್ನವರ, ಶೋಭಾ ಪಟ್ಟಣಶೆಟ್ಟಿ, ವಿದ್ಯಾ ವಿರಕ್ತಮಠ ಹಾಗೂ ಮಕ್ಕಳು ಉಪಸ್ಥಿತರಿದ್ದರು.