ಯರಗಟ್ಟಿ

‘ಕನಕದಾಸರು ಸಮಾನತೆ ಪ್ರತಿಪಾದಿಸಿದ ಮಹಾನ್ ನಾಯಕ’

‘ಕನಕದಾಸರು ಸಮಾನತೆ ಪ್ರತಿಪಾದಿಸಿದ ಮಹಾನ್ ನಾಯಕ’

ಯರಗಟ್ಟಿ 17: ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ ಸಂತ ಶ್ರೇಷ್ಠ ಕನಕದಾಸರು ಎಂದು ಸಮಾಜ ಸೇವಕ ಬಸವರಾಜ ಪಟ್ಟಣಶೆಟ್ಟಿ ಹೇಳಿದರು. 

ಸಮೀಪದ ಮದ್ಲೂರ ಗ್ರಾಮದ ಶ್ರೀ ಬೀರ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಸಮಾಜಿಕ ಪಿಡುಗಾದ ಜಾತಿ ಪದ್ಧತಿ ವಿರುದ್ಧ ಹೋರಾಡಿ ಸಮಾನತೆ ಪ್ರತಿಪಾದಿಸಿದ ಮಹಾನ್ ನಾಯಕ ಎಂದರು. 

ಬಸವರಾಜ ಮನಿಕಟ್ಟಿ, ಗುಡುಸಾಬ ದೊಡಮನಿ ಮಾತನಾಡಿ, ಭಕ್ತ ಕನಕದಾಸರು ನಾಡು ಕಂಡ ಶ್ರೇಷ್ಠ ದಾರ್ಶನಿಕರು, ಜಾತಿ ವ್ಯವಸ್ಥೆ ವಿರುದ್ಧ ತಮ್ಮದೇ ಆದ ವೈಚಾರಿಕ ಕೀರ್ತನೆಗಳ ಮೂಲಕ ಮನುಕುಲಕೆ ಸಂದೇಶ ಕೊಟ್ಟು ಬದುಕಿನ ಮರ್ಮ ತಿಳಿಸಿದ ಮಹಾತ್ಮರು ಎಂದರು. 

ವೇದಮೂರ್ತಿ ಬಸವರಾಜ ಪೂಜೇರ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.   

ಮುಖಂಡ ಮಾರುತಿ ಕುರಿ, ಪುಂಡಲೀಕ ಉಪ್ಪಾರ, ಬಾಬು ಪರಾಸಿ, ಮಲ್ಲೇಶಪ್ಪ ಕಲಕುಟ್ರಿ, ಸನ್ನಿಂಗಪ್ಪ ಪಚ್ಚಿ, ಬಸವರಾಜ ಸುಣಗಾರ, ನಾಗಪ್ಪ ಸಾಲಿ, ಸಿದ್ದಪ್ಪ ಕುರಿ, ಮಹದೇವಪ್ಪ ಮುರಗೋಡ, ಹನಮಂತಗೌಡ ಪಾಟೀಲ, ರಾಯಪ್ಪ ಗುಂಡಲಮನಿ, ಕರೇಪ್ಪ ಕಲಕುಟ್ರಿ, ದ್ಯಾಮನ್ನ ಮಾದರ, ಯಲ್ಲಪ್ಪ ಶೀರೆಪ್ಪನವರ, ಈರ​‍್ಪ ತಳವಾರ, ಅರ್ಜುನ ಪಚ್ಚಿ, ಫಕೀರ​‍್ಪ ಕುರಿ, ಶಂಕರೆಪ್ಪ ಕುರಿ, ಸುಭಾನಿ ದೊಡಮನಿ, ದ್ಯಾಮನ್ನ ಬಡಿಗೇರ, ಬಿಮಪ್ಪ ಬಿಲಕಂಚಿ, ದಿನೇಶ ಕುರಿ ಹಾಗೂ ಗ್ರಾಮಸ್ಥರು ಇದ್ದರು. ಅಶೋಕ ಬಡಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ