ರಾಣೆಬೆನ್ನೂರ

‘ಐಸಿಯು ಕೊಡುಗೆ ಜನಪರ ಕೆಲಸಗಳಿಂದ ಜನರ ಮನದಾಳದಲ್ಲಿ ಉಳಿಯಲು ಸಾಧ್ಯ’

‘ಐಸಿಯು ಕೊಡುಗೆ ಜನಪರ ಕೆಲಸಗಳಿಂದ ಜನರ ಮನದಾಳದಲ್ಲಿ ಉಳಿಯಲು ಸಾಧ್ಯ’

ರಾಣೆಬೆನ್ನೂರು 06:  ಜನಪ್ರತಿನಿಧಿಗಳು ಜನರ ಸೇವಕರು,ಜನಸಾಮಾನ್ಯರ ಸೇವೆಯಲ್ಲಿಕೆಲಸ ಮಾಡಿದಾಗ ಮಾತ್ರ ಸದಾಕಾಲ ಜನರ ಮನಸ್ಸಿನಾಳದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುವುದು ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು. ಅವರು ಹಲಗೇರಿ ರಸ್ತೆಯ, ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ತಮ್ಮ ಪುತ್ರ ಪ್ರಕಾಶ್ ಕೋಳಿವಾಡ ಪಿ.ಕೆ.ಕೆ. ಇನಿಶಿಯೇಟಿವ್ ಮತ್ತು ಬೆಂಗಳೂರು ಐ ಕ್ಯಾಟ್ ಫೌಂಡೇಶನ್ ಕೊಡಮಾಡಿದ. ಕೋಟಿ ರೂ ವೆಚ್ಚದ ಐಸಿಯು ಯೂನಿಟ್ ಸಾರ್ವಜನಿಕ ಸೇವೆಗೆ ಲೋಕಾರೆ​‍್ಣಗೊಳಿಸಿ ಮಾತನಾಡಿದರು.  

ತಾಲೂಕಿನಲ್ಲಿ ಶ್ರೀಮಂತರಿಗಿಂತ ಬಡವರೇ ಹೆಚ್ಚಾಗಿದ್ದಾರೆ, ಕಾಯಿಲೆಗಳು ಉಲ್ಬಣಿಸಿದಾಗ ಅಧಿಕ ವೆಚ್ಚವನ್ನು ಭರಿಸಿ, ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ, ಯಾವುದೇ ಖರ್ಚುವೆಚ್ಚ ವಿಲ್ಲದೆ ಆರೋಗ್ಯಸೇವೆ ದೊರೆಯುವ ವಿಶ್ವಾಸದಿಂದ ಬಡವರು ಸರ್ಕಾರಿ  ಆಸ್ಪತ್ರೆಗೆ ಧಾವಿಸುತ್ತಾರೆ, ವೈದ್ಯರು ಅಂಥವರ ಸೇವೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಮನವಿ ಮಾಡಿದರು. ಇತಿಹಾಸದಲ್ಲಿ ಸಣ್ಣದಾದ ಕೊಠಡಿಯಲ್ಲಿದ್ದ ಸರ್ಕಾರಿ.ಆಸ್ಪತ್ರೆ ಜನರ ಅನುಕೂಲತೆಗಾಗಿ, ನಿರಂತರ ಪ್ರಯತ್ನದ ಫಲವಾಗಿ, ನೂರು ಹಾಸಿಗೆಗಳನ್ನು ಮೇಲ್ದರ್ಜೆಗೇರಿಸಿ ನಿರ್ಮಾಣವಾಗಿದೆ. ಐಸಿಯು  ಸೇವೆ ಶ್ರೀಮಂತರಿಗಿಂತ ಬಡವರಿಗೆ ಹೆಚ್ಚಾಗಿ ದೊರೆಯಬೇಕು, ಎಂದರು.ಐ ಕ್ಯಾಟ್ ಫೌಂಡೇಶನ್ ಅಧ್ಯಕ್ಷ ಡಾ : ಶಾಲಿನಿ ನೆಲವಾಡ ಅವರು, ಕೋವಿಡ್ ಸಂದರ್ಭದಲ್ಲಿ ಪಿಕೆಕೆ ಇನಿಶಿಯೇಟಿವ್ ಸಂಸ್ಥೆಯ ಪ್ರಕಾಶ್ ಕೋಳಿವಾಡ್ ಅವರು ಮಾಡಿದ ನಿಸ್ವಾರ್ಥ ಸೇವೆ ಯಾರೂ ಮರೆಯುವಂತಿಲ್ಲ, ಸದ್ದಿಲ್ಲದ ಸಾಧಕರಿವರು, ಇವರ ಪ್ರಯತ್ನದಿಂದಾಗಿ ಇಂದು ಪ್ರಥಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು,ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯೊಂದಿಗೆ, ಆಸ್ಪತ್ರೆಯಲ್ಲಿ ಲಭ್ಯವಿದೆ, ಯಂತ್ರವು ಕೊನೆಯ ಗಳಿಗೆಯಲ್ಲಿ ಪ್ರಾಣ ಉಳಿಸಲು ಸಾಧ್ಯವಾಗಲಿದೆ ಎಂದರು. ಪಿಕೆಕೆ ಅಧ್ಯಕ್ಷ, ಯುವನಾಯಕ ಪ್ರಕಾಶ್ ಕೋಳಿವಾಡ್ ಅವರು, ತಮ್ಮ ಸಂಸ್ಥೆ ನಿಸ್ವಾರ್ಥ ಭಾವನೆಯಿಂದ, ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ, ಸಾರ್ವಜನಿಕ ಸೇವೆಯಲ್ಲಿ ನಿರತವಾಗಿದೆ, ವ್ಯಾಕ್ಸಿನ್, ವೆಂಟಿಲೇಟರ್, ಸಂಚಾರಿ ವಾಹನ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ  ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸಿ ಜನರ ಪ್ರಾಣವನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದ ಅವರು, ಭವಿಷ್ಯದ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರುವ ವಿಶ್ವಾಸ ತಮಗಿದೆ ಎಂದರು. ಡಿಎಚ್‌ಒ, ಎಚ್ ಎಸ್ ರಾಘವೇಂದ್ರ ಸ್ವಾಮಿ, ಟಿ ಹೆಚ್ ಓ, ಡಾ: ಆರ್‌. ಸಿ.ಪರಮೇಶ್ವರ​‍್ಪ, ರೋಟರಿ ಅಧ್ಯಕ್ಷ, ಎಂ.ಎಂ. ಅನಂತ ರೆಡ್ಡಿ,ವೈದ್ಯಾಧಿಕಾರಿ ಡಾ: ರಾಜು ಶಿರೂರ್, ಸೇರಿದಂತೆ ಮತ್ತಿತರ ಗಣ್ಯರು, ವೈದ್ಯರು ಮಾತನಾಡಿದರು.  ಕಾರ್ಯಕ್ರಮದಲ್ಲಿ,ಕಾಂಗ್ರೆಸ್ ಮುಖಂಡರಾದ, ಮಂಜನ ಗೌಡ ಪಾಟೀಲ್, ಸಣ್ಣತಮ್ಮಪ್ಪ ಬಾರ್ಕಿ, ಪಿ.ಜೆ.ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ರಾಜಣ್ಣ ಮೋಟಗಿ, ಶೇರುಖಾನ್ ಕಾಬೂಲಿ, ಶಿರಿನ್ ತಾಜ್ ಶೇಕ್, ಮಧು ಕೋಳಿವಾಡ, ಎಂ.ಕೆ. ಮೋಹೀದೀನ್, ಡಾ: ಸಂಜಯ್ ಸಾಹುಕಾರ್ , ಡಾ : ಮೇನಕಾ ಸಾಹುಕಾರ, ಎನ್‌.ಜೆ. ಮರಿಯಮ್ಮನವರ ಡಾ : ವಿವೇಕ್ ಬೆಳ್ಳಿ,ಸೇರಿದಂತೆ, ಸೇಮಿ, ಕ್ರಾಪ್ಟೋ, ಮತ್ತಿತರ ಸಂಸ್ಥೆಗಳ, ಅಧಿಕಾರಿಗಳು ಮುಖ್ಯಸ್ಥರು ಸಿಬ್ಬಂದಿ ಉಪಸ್ಥಿತರಿದ್ದರು. ಸುಮಿತ್ರಾ ಪ್ರಾರ್ಥಿಸಿದರು. ಡಾ : ಆರ್‌. ಸಿ. ಪರಮೇಶ್ವರ​‍್ಪ ಸ್ವಾಗತಿಸಿದರು. ಗಂಗಾಧರ ನಿರೂಪಿಸಿ,ಜಂಟಿ ಕಾರ್ಯದರ್ಶಿ ಡಾ ನೀಲು ಸುನಿಲ್, ಅವರು ವಂದಿಸಿದರು.ಊ5-ಖಓಖ02- ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಐಸಿಯು ಎಂತ್ರ ಲೋಕಾರಾ​‍್ಣ ಸಮಾರಂಭದಲ್ಲಿ ಕೆ ಬಿ ಕೋಳಿವಾಡ ಮಾತನಾಡಿದರು.ಊ5-ಖಓಖ02ಂ ಸರ್ಕಾರಿ ಆಸ್ಪತ್ರೆಗೆ ಪಿ..ಕೆ.ಕೆ ಇನಿಷಿಯೇಟಿವ್ -ಐ ಕ್ಯಾಟ್ ಫೌಂಡೇಶನ್ ನೀಡಿದ ಐ ಸಿ ಯು ಯಂತ್ರವನ್ನು, ಪ್ರಕಾಶ್ ಕೋಳಿವಾಡ, ಆಸ್ಪತ್ರೆಗೆ ಹಸ್ತಾಂತರಿಸಿದರು. 


ಸುದ್ದಿ ಓದಿ