ಪ್ರಗತಿಪರ ರೈತರಿಗೆ ಹರೇ ಬಲರಾಮಶ್ರೀ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಬೈಲಹೊಂಗಲ 22: ಪ್ರತಿಯೊಬ್ಬ ರೈತರು ಸಾವಯವ ಕಷಿ ಪದ್ದತಿಯನ್ನು ಅಳವಡಿಸಿಕೊಂಡು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿದಲ್ಲಿ ಉತ್ತಮ ಬೆಳೆ ಬೆಳೆದು ಭೂಮಿಯ ಫಲವತ್ತತೆ ಕಾಯ್ದುಕೊಳ್ಳಬಹುದು ಎಂದು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಹೇಳಿದರು.
ಅವರು ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಹರೇ ಕೃಷ್ಣ ಫೌಂಡೆಶನ ವತಿಯಿಂದ ಕೃಷಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಪ್ರಗತಿ ಪರ ರೈತರಿಗೆ ಬಲರಾಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮಿಜಿ ಆಶೀರ್ವಚನ ನೀಡಿದರು.
ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರಿಗೆ ಬಲರಾಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುರುಪುತ್ರ್ಪ ಹೊಸಮನಿ, ಬಸವರಾಜ ಮೂಗಿ, ಗುರು ಮೆಟಗುಡ್ಡ, ಶ್ರೀಶೈಲ ಮೆಟಗುಡ್ಡ, ದುಂಡಪ್ಪ ತುರಮರಿ, ಮಲ್ಲಿಕಾರ್ಜುನ ಸಾಲಿಮಠ, ರಾಮನಿಂಗಪ್ಪ ಕೋಟಗಿ, ವಿರುಪಾಕ್ಷ ಕಂಠಿ,ಸುರೇಶ ತುಪ್ಪದ ಇದ್ದರು.
ಹರೇ ಕೃಷ್ಣ ಪೌಂಡೇಶನ ಅಧ್ಯಕ್ಷ ಶ್ರೀಶೈಲ ಯಡಳ್ಳಿ ಶ್ರೀ ಕೃಷ್ಣ ಪೂಜೆ ನೆರವೇರಿಸಿದರು. ಬಸವರಾಜ ಬಡಿಗೇರ ನಿರೂಪಿಸಿದರು. ಬಸವರಾಜ ಶಿಂತ್ರಿ ವಂದಿಸಿದರು. ಚಂದ್ರಶೇಖರರ ಕೊಪ್ಪದ ಸ್ವಾಗತಿಸಿದರು.