ಶಿಗ್ಗಾವ್

ಚಿಗುರು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ಚಿಗುರು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ 18: ಇಂದಿನ ಬಾಲ ಪ್ರತಿಭೆಗಳು ಮುಂದಿನ ನಾಡಿನ ಕನ್ನಡಾಂಬೆಯ ಕೆಚ್ಚೆದೆಯ ಕುಡಿಗಳಾಗಿ ಬೆಳೆಯಬೇಕು ಹಾಗೂ ವಿವಿಧ ರಂಗ, ಕ್ಷೇತ್ರಗಳಲ್ಲಿ ಬೆಳೆಸುವ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಪ್ರಾಚಾರ್ಯ ಮಂಜುನಾಥ ಮರಿತಮ್ಮನವರ ಹೇಳಿದರು. 

     ತಾಲೂಕಿನ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಚಿಗುರು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ದೇವರು ಕೋಟ್ಟ ಪಂಚೇಂದ್ರಿಯಗಳನ್ನು ಒಳ್ಳೆಯದಕ್ಕಾಗಿ ಬಳಸಬೇಕು. ದೇವರು ಕೊಟ್ಟ ಕಣ್ಣು ಪಕೃತಿಯಾದರೆ ಕೆಂಗಣ್ಣು ವಿಕೃತಿಯಾಗಿದೆ. ಬೆನ್ನು ಪ್ರಕೃತಿ, ಬೆನ್ನಿಗೆ ಚೂರಿ ಹಾಕುವುದು ವಿಕೃತಿಯಾಗಿದೆ, ಮೂಗು ಪ್ರಕೃತಿಯಾದರೆ, ಇತರರ ಬದುಕಿನಲ್ಲಿ ಮೂಗು ತೂರಿಸುವುದು ವಿಕೃತಿಯಾಗಿದೆ. ಕಾಲು, ಕೈಗಳು ಸಂಸ್ಕೃತಿಯಾದರೆ, ಕಾಲಿನಿಂದ ಇತರರಿಗೆ ಒದೆಯುವುದು, ಹೋಡೆಯುವುದು ವಿಕೃತಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.  

      ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ,  ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಪಠ್ಯದ ಜೊತೆಗೆ, ಪಠ್ಯೇತರ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ನಡೆಯಬೇಕು. ಪಠ್ಯೆ, ಪುಸ್ತಕಗಳನ್ನು ಹೊರತು ಪಡೆಸಿ, ಮಕ್ಕಳಲ್ಲಿ ಅಡಗಿರುವ ವಿವಿದ ಪ್ರತಿಭೆಗಳನ್ನು ಅನಾವರಣಗೋಳಿಸಲು ಚಿಗುರು ಕಾರ್ಯಕ್ರಮ ವೇದಿಕೆ ಪೂರಕವಾಗಿದೆ. ಇಂತಹ ವೇದಿಕೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಂಡು ತಮ್ಮ ಪ್ರತಿಭೆಗಳನ್ನು ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಅನಾವರಣಗೋಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

     ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ವಿವಿದ ಪ್ರತಿಭೆಗಳ ಅಡಕವಾಗಿರುತ್ತವೆ. ಅವುಗಳನ್ನು ಕಂಡು ಹಿಡಿದು, ಪ್ರೋತ್ಸಾಹಿಸಿ ಹೊರತರುವಂತ ಕೆಲಸ ಶಿಕ್ಷಕ ಹಾಗು ಪಾಲಕರಿಂದಾಗಬೇಕಿದೆ. ಮನುಷ್ಯನ ಮೌಲ್ಯಯುತ ಜೀವನಕ್ಕೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಸೇರಿದಂತೆ ವಿವಿದ ಕಲೆಗಳು ಅವಸ್ಯವಾಗಿದ್ದು, ಅವುಗಳನ್ನು ಅನಾವರಣಗೋಳಿಸಲು ವೇದಿಕೆ ಅವಸ್ಯಕತೆಯಿತ್ತು. ಅಂತಹ ವೇದಿಕೆಯನ್ನು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸೃಷ್ಠಿಸಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೋಳಿಸಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಹೇಳಿದರು. 

          ಸಭೆಯ ಕಾರ್ಯಕ್ರಮದ ನಂತರ ಶಿಗ್ಗಾವಿ, ಸವಣೂರ, ಹಾವೇರಿ, ಹಿರೇಕೇರೂರ, ಹಾನಗಲ್, ಬಂಕಾಪುರ ಶಾಲಾ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಹಾಗು ಸುಗಮ ಸಂಗೀತ, ಜಾನಪದಗೀತೆ, ಭರತನಾಟ್ಯ, ಸಮೂಹ ನೃತ್ಯ, ಏಕಪಾತ್ರಾಭಿನಯ, ನಾಟಕ ಕಲೆಗಳು ವಿದ್ಯಾರ್ಥಿಗಳಿಂದ ಅನಾವರಣಗೋಂಡವು. 

     ಮುಖಂಡರಾದ ಬಸವರಾಜ ಕಟ್ಟಿಮನಿ, ಸಂಗೀತ ಶಿಕ್ಷಕ ಫಕ್ಕೀರೇಶ ಬಜಂತ್ರಿ, ಮಲ್ಲಯ್ಯ ಇಂಗಳಳ್ಳಿಮಠ, ಮಾದವರಾವ್ ಕಾಮನಹಳ್ಳಿ, ವಿಜಯ್‌ಕುಮಾರ ಕಾಳೆ, ಪರಮೇಶ್ವರ ಹಡಪದ, ಸಂಜೀವ ಪಾಟೀಲ, ಶಂಕರಗೌಡ ಪಾಟೀಲ, ಸಂತೋಷ ಸವಣೂರ, ಮಹಾಂತೇಶ ನಂದಿಹಳ್ಳಿ ಸೇರಿದಂತೆ ಇತರರು ಇದ್ದರು. ಶಿಕ್ಷಕ ಕೆ.ಎನ್‌.ಪಾಟೀಲ ಸ್ವಾಗತಿಸಿದರು. ಗಣೇಶ ಗುಳೇದ ನಿರೂಪಿಸಿದರು. 


ಸುದ್ದಿ ಓದಿ