ತಾಳಿಕೋಟಿ

‘ಭಾರತ’ ಜೋಡೊ’ ಪಾದಯಾತ್ರೆ

‘ಭಾರತ’ ಜೋಡೊ’ ಪಾದಯಾತ್ರೆ

ತಾಳಿಕೋಟಿ 25: ಭಾರತ ಜೋಡೊ ಕಾರ್ಯಕ್ರಮದ ಅಂಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಇಂದು ನಡೆಯಲಿದೆ.  

ಈ ಪಾದಯಾತ್ರೆ ಬೆಳಿಗ್ಗೆ 09 ಘಂಟೆಗೆ ವಡವಡಗಿ ಗ್ರಾಮದ ಸಂಗಮನಾಥ ದೇವಸ್ಥಾನದಿಂದ ಆರಂಭವಾಗಿ ಹುಲಿಬೆಂಚಿ-ನಾಗರಾಳ ಮಧ್ಯದ ಮಾರ್ಗವಾಗಿ ಕು.ಸಾಲವಾಡಗಿ ಮುಖಾಂತರ ಹೂವಿನ ಹಿಪ್ಪರಗಿಯವರೆಗೆ ಸುಮಾರು 14 ಕಿ.ಮಿ. ದವರೆಗೆ ಕ್ರಮಿಸಿ ಹೂವಿನ ಹಿಪ್ಪರಗಿ ಗ್ರಾಮದ ಸಂತೆಕಟ್ಟೆಯಲ್ಲಿ ಸಾರ್ವಜನಿಕ ಸಭೆಯಾಗಿ ಮಾರ​‍್ಡಲಿದೆ. 

ಪಾದಯಾತ್ರೆಯಲ್ಲಿ ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಮಾಜಿ ಹಾಗೂ ಹಾಲಿ ಚುನಾಯಿತ ಸದಸ್ಯರು, ಮುಖಂಡರು, ಬೂತ್ ಮಟ್ಟದ ಕರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಳನಗೌಡ ಪಾಟೀಲ (ಸಾತಿಹಾಳ) ಹಾಗೂ ದೇ.ಹಿಪ್ಪರಗಿ ಬ್ಲಾಕ್ ಅಧ್ಯಕ್ಷ ಬಶೀರಶೇಠ ಬೇಪಾರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ