"ಯೋಗವು ಮಾನವಕುಲವು ಉಸಿರಾಡಲು, ಸಮತೋಲ ಅಗತ್ಯ
ಹೂವಿನಹಡಗಲಿ 22: ಯೋಗವು ಮಾನಕುಲುವು ಉಸಿರಾಡಲು ಸಮಾತೊಲನ ಅಗತ್ಯ ಎಂದು ಸಿಪಿಐ ದೀಪಕ್ ಆರ್ ಭೂಸರೆಡ್ಡಿ ಹೇಳಿದರು. ಹೂವಿನಹಡಗಲಿಯ ಜೆಎಸ್ಎಸ್ ಸಂಸ್ಥೆ ಯಲ್ಲಿ ಶನಿವಾರ ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್, ಸಹಯೋಗದೊಂದಿಗೆ 11 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸಸಿ ನೀರುಣಿಸುವ ಮೂಲಕ ಚಾಲನೆ ನೀಡಿದರು.
ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಬೆಳಕು ಚೆಲ್ಲಿದರು. ಜೆಎಸ್ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎನ್ ಗುರುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಲಕ್ಷ್ಮಣ್ ನಾಯಕ್ ಅವರು ತಮ್ಮ ಪ್ರಾಸ್ತಾವಿಕ ಮಾತನಾಡಿದರು.. ಜೆಎಸ್ಎಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್ಪಿ ರಮೇಶ್,ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಕೆ ನಾಗೇಶ್, , ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಮಾಲತೇಶ್, , ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್ನ ಮಹಿಳಾ ಅಧ್ಯಕ್ಷೆ ಇಂದುಮತಿ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವಿಧ ಯೋಗಾಸನಗಳ ಪ್ರದರ್ಶನವನ್ನು ಡಾ. ಲಕ್ಷ್ಮಣ್ ನಾಯಕ್ ಇವರ ತಂಡ ನೆರವೇರಿಸಿದರು. ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಮತ್ತು ಬಿ.ಎಡ್ ಶಿಕ್ಷಕ ಪ್ರಶಿಕ್ಷಣಾರ್ಥಿಗಳು ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.ಪತಂಜಲಿ ಮಳಿಗೆಯ ಸಾಂಕೇತಿಕ ಉದ್ಘಾಟಿಸಲಾಯಿತು. ಜೆಎಸ್ಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಪಿ. ರಮೇಶ್ ಬಿ ಎಡ್ ಕಾಲೇಜಿನ ಶಿಕ್ಷಕ ಪ್ರಶಿಕ್ಷಣಾರ್ಥಿ ಕುಮಾರಿ ಎಸ್.ಪಿ. ಅರ್ಪಿತಾ ಅವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು.