ಧಾರವಾಡ - ಹುಬ್ಬಳ್ಳಿ

ದಿ.03 ರಂದು "ವೇದಾಂತ ಪರಿಷತ್ತು" ಸತ್ಸಂಗ್ ಕಾರ್ಯಕ್ರಮ ಆರಂಭ

ದಿ.03 ರಂದು  "ವೇದಾಂತ ಪರಿಷತ್ತು" ಸತ್ಸಂಗ್ ಕಾರ್ಯಕ್ರಮ ಆರಂಭ

ಹಂದಿಗುಂದ:  ಶ್ರೀ ಸಿದ್ದಾರೂಢ ಮಠದಲ್ಲಿ 18ನೇ ವರ್ಷದ ಪಾರಮಾರ್ಥಿಕ ಮಹೋತ್ಸವ 

ಪಾಲಬಾವಿ 02:  ಸಮೀಪದ ಹಂದಿಗುಂದ ಗ್ರಾಮದಲ್ಲಿಯ ನವನಗರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಸದ್ಗುರು ಶ್ರೀ ಸಿದ್ಧಾರೂಢ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ 18ನೇ ವರ್ಷದ ವೇದಾಂತ ಪರಿಷತ್ತು, ಪಾರಮಾರ್ಥಿಕ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವವು ಶುಕ್ರವಾರ ದಿ.03 ರಂದು ಮುಂಜಾನೆ 10ಗಂಟೆಗೆ ಸಡಗರ ಸಂಭ್ರಮದಿಂದ ಜರುಗಲಿದೆ.  

ಶುಕ್ರವಾರ ದಿ. 03ರಂದು ಮುಂಜಾನೆ 6ಗಂಟೆಗೆ ಸಿದ್ಧಾರೂಢರ ಕರ್ತೃ ಗದ್ದುಗೆಗೆ ಪಂಚಾಕ್ಷರಿ ಮಹಾಮಂತ್ರದೊಂದಿಗೆ ವಿಶೇಷ, ಪೂಜೆನೆರವೇರುವುದು, ವಸ್ತ್ರಧಾರಣೆ, ಹಣ್ಣು, ಪುಷ್ಪ, ನೈವೇದ್ಯ ಸಮರ​‍್ಿಸಲಾಗುವುದು. ಮುಂಜಾನೆ 9ಗಂಟೆಗೆ ಗ್ರಾಮದ ಆರಾಧ್ಯ ದೇವರಾದ ಶ್ರೀ ಹಾಲಸಿದ್ದೇಶ್ವರ ದೇವಸ್ಥಾನದಿಂದ ಸುಮಂಗಲೆಯರಿಂದ ಪೂರ್ಣಕುಂಭ, ಆರತಿಯೊಂದಿಗೆ ಶ್ರೀ ಹಾಲಸಿದ್ದೇಶ್ವರ ದೇವರ ಪಲ್ಲಕ್ಕಿ, ಶ್ರೀ ಯಲ್ಲಮ್ಮದೇವಿ ಜಗ ಹಾಗೂ ಸದ್ಗುರು ಸಿದ್ಧಾರೂಢರ ಭಾವಚಿತ್ರದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನವನಗರದಲ್ಲಿರುವ ಸಿದ್ಧಾರೂಢ ಮಠವನ್ನು ತಲುಪುವುದು.  

ನಂತರ ಸುಮಂಗರಿಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮವು ಜರುಗುವುದು. 10:30ಕ್ಕೆ ವೇದಾಂತ ಪರಿಷತ್ತು ಕಾರ್ಯಕ್ರಮವು ಜರುಗುವುದು. "ಶ್ರೀಗುರುವಚನೋಪದೇಶವ ನಾಲಿಸಿದಾಗಳಹುದು ನರರಿಗೆ ಮುಕುತಿ" ಎಂಬ ವಿಷಯದ ಆಧಾರದ ಮೇಲೆ ಸಕಲ ಪೂಜ್ಯರು ಪ್ರವಚನ ನೀಡುವರು. ಮಹಾಲಿಂಗಪುರ ಬ್ರಹ್ಮ ವಿದ್ಯಾಶ್ರಮದ ಪೀಠಾಧಿಪತಿ ಸಹಜಾನಂದ ಮಹಾಸ್ವಾಮಿಗಳು ಪಾವನ ಸಾನಿಧ್ಯವಹಿಸುವರು, ಹಂದಿಗುಂದ ಗುರುಮಠದ ಗುರುಲಿಂಗಯ್ಯ ಸ್ವಾಮಿಜಿ ಅಧ್ಯಕ್ಷತೆವಹಿಸುವರು. ಸಿದ್ಧೇಶ್ವರ ಮಠದ ಅರ್ಚಕರು ಗುರುಲಿಂಗಯ್ಯ ಸ್ವಾಮೀಜಿ, ಮಹಾಲಿಂಗಪುರದ ಸಿದ್ದರಾಮ ಶರಣರು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸುವರು.  

ಮಧ್ಯಾಹ್ನ 1:30ಕ್ಕೆ ದಾಸೋಹದ ಮಹಾಮನೆಯಲ್ಲಿ ಅನ್ನಸಂತರೆ​‍್ಣ ನೆರವೇರುವುದು ಎಂದು ಶ್ರೀ ಸಿದ್ಧಾರೂಢ ಮಠ ಅಭಿವೃದ್ಧಿ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮಣ ಚಿನಗುಂಡಿ 7829896864, ಈರ​‍್ಪ ನಾವಿ 7026003790 ಇವರನ್ನು ಸಂಪರ್ಕಿಸಲು ಕೋರಲಾಗಿದೆ.  


ಸುದ್ದಿ ಓದಿ