“ ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ “
ಲೋಕದರ್ಶನ ವರದಿ
“ ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ “
ಧಾರವಾಡ 18: ಇದೆ ಭಾನುವಾರ ಧಾರವಾಡದ ವಿದ್ಯಾಗಿರಿಯ ಮೈಲಾರಲಿಂಗೇಶ್ವರ ದೇವಸ್ಥಾನ 60ನೇ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಜರುಗಿತು. ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಸಿರಿಮಲ್ಲ ತಿಪ್ಪಣ್ಣ ಶಿರೋಳ “ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ” ಎಂದು ಕಾರ್ಣಿಕ ನುಡಿದರು.
ಕಾರ್ಣಿಕ ನುಡಿಯಂತೆ ಮುಂಬರುವ ಸಮಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿದೆ. ರಾಜಕೀಯದಲ್ಲಿ ತುಸು ಭಿನ್ನಾಭಿಪ್ರಾಯ ಕಂಡು ಬಂದರು ಸರಕಾರ ಜನರ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂಬುದು ಇದರ ವಿವರಣೆ. ಎರಡು ದಿನ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ, ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ, ಕಾರ್ಣಿಕ ಸೇವೆ, ಸರಪಳಿ ಸೇವೆ ಅತಿ ವಿಜೃಂಭಣೆಯಿಂದ ಜರುಗಿದವು.