ಗೋಕಾಕ್

ಡಾ. ಸಿ.ಕೆ. ನಾವಲಗಿ ಅವರಿಗೆ "ಸೇವಾರತ್ನ" ಪ್ರಶಸ್ತಿ

ಡಾ. ಸಿ.ಕೆ. ನಾವಲಗಿ ಅವರಿಗೆ "ಸೇವಾರತ್ನ" ಪ್ರಶಸ್ತಿ

ಗೋಕಾಕ್ 03: ಪೂಜ್ಯಶ್ರೀ ಡಾ. ಶಿವಬಸವಮಹಾಸ್ವಾಮಿಗಳವರ 134ನೇ ಜಯಂತಿಯ ಸಂದರ್ಭದಲ್ಲಿ ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ " ಸೇವಾರತ್ನ" ಪ್ರಶಸ್ತಿಯನ್ನು ಸಾಹಿತಿ,ವಚನ-ಜಾನಪದ ಚಿಂತಕ ಡಾ. ಸಿ .ಕೆ. ನಾವಲಗಿ ಅವರಿಗೆ ನೀಡಿ ಗೌರವಿಸಲು ಶ್ರೀಮಠ ನಿರ್ಧರಿಸಿದೆ.   

ಪ್ರಶಸ್ತಿಯು 10,000 ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು ಡಿ.8ರಂದು ಶುಕ್ರವಾರ  10:30ಕ್ಕೆ ಶ್ರೀಮಠದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪೀಠಾಧಿಪತಿ ಪೂಜ್ಯ ಡಾ. ಅಲ್ಲಮಪ್ರಭುಮಹಾ ಸ್ವಾಮಿಗಳು ತಿಳಿಸಿದ್ದಾರೆ.  

ಡಾ. ಸಿ.ಕೆ. ನಾವಲಗಿ" - ಚೆಂಬೆಳಕಿನ ಮಹಾಬೆಳಗು" ಹೆಸರಿನ ಚೆನ್ನವೀರಕಣವಿ ಕುರಿತು ರಚಿಸಿದ ವಿಮರ್ಶಾಕೃತಿಯನ್ನು ಈ ಹಿಂದೆಯೇ ಶ್ರೀಮಠವು ಪ್ರಕಟಿಸಿ, ಕವಿ ಕಣವಿ ಅವರಿಂದಲೇ ಬಿಡುಗಡೆಗೊಳಿಸಿ, ಅವರಿಂದಲೇ ನಾವಲಗಿ ಅವರಿಗೆ 2017 ರಲ್ಲಿ ಗೌರವ ಸನ್ಮಾನ ನೀಡಿದ್ದು ವಿಶೇಷವಾಗಿತ್ತು. ಡಂಬಳಗದಗ ತೋಂಟದಾರ್ಯ ಮಠದ ಜಗದ್ಗುರು ಪೂಜ್ಯ ಡಾ. ಸಿದ್ಧರಾಮಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ರುದ್ರಾಕ್ಷಿಮಠದ ಪೂಜ್ಯ ಡಾ.ಅಲ್ಲಮ ಪ್ರಭುಶ್ರೀಗಳು, ಕಾರಂಜಿಮಠದ ಪೂಜ್ಯ ಗುರುಸಿದ್ಧಶ್ರೀಗಳು, ಅರಭಾವಿ ಮಠದ ಪೂಜ್ಯ ಸಿದ್ಧಲಿಂಗಶ್ರೀಗಳು,ವಿದ್ಯಾಗುರು ಪ್ರೊ . ಎಂ.ಆರ್‌.ಉಳ್ಳೇಗಡ್ಡಿ ಮತ್ತು ಹಿರಿಯರಾದ ಬಿ.ಎಸ್‌.ಗವಿಮಠ ಅವರು ಉಪಸ್ಥಿತರಿದ್ದು, ಆಶೀರ್ವದಿಸಿದ್ದುದು ಇಲ್ಲಿ ಸ್ಮರಣೀಯ. ಇವರು ನಗರದ ಜೆ.ಎಸ್‌.ಎಸ್‌. ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ-ಪ್ರಾಚಾರ್ಯರು. 


ಸುದ್ದಿ ಓದಿ