ಬೆಳಗಾವಿ

“ಗ್ರಾಮೀಣ ಜಾನಪದ ಕಲಾ ಸಂಭ್ರಮ

“ಗ್ರಾಮೀಣ ಜಾನಪದ ಕಲಾ ಸಂಭ್ರಮ

ಲೋಕದರ್ಶನ ವರದಿ 

      ಚಂದರಗಿ  29ಃ ದಿನಾಂಕಃ 26-06-2026 ರಂದು ಸಂಜೆ 10 ಗಂಟೆಗೆ ಶ್ರೀ ಶಿವಾನಂದ ಭಾರತಿ ಸ್ವಾಮಿ ಜಾನಪದ ಕಲಾ ಯುವ ಸಂಘ, ಜೋಕಾನಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಮ್‌. ಚಂದರಗಿ ಗ್ರಾಮದಲ್ಲಿ “ಗ್ರಾಮೀಣ ಜಾನಪದ ಕಲಾ ಸಂಭ್ರಮ-2026” ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಮಾರುತಿ ಕಳ್ಳಿಗುದ್ದಿ, ಗ್ರಾಮ ಪಂಚಾಯತ ಅಧ್ಯಕ್ಷರು, ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ ಮೊಶೆಪ್ಪ ವೆಂಕಟಾಪೂರ ಇವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಮೇಶ ಬಸಪ್ಪ ಕತ್ತಿ, ಸಂತೋಷ ಅವಜಪ್ಪಗೋಳ, ಯಮನವ್ವ ಜೋಕಾನಟ್ಟಿ, ರುದ್ರ​‍್ಪ ಮಾದರ, ಶಾಂತವ್ವ ದ್ಯಾಮಪ್ಪ ನಾಗನ್ನವರ, ರುದ್ರ​‍್ಪ ಮಾದರ, ರೂಪಾ ಸುತಾರ, ಶ್ರೀಕಾಂತ ದುಂಡಯ್ಯಾ ಹಿರೇಮಠ, ಕೆಂಪಣ್ಣಾ ರಾಮಪ್ಪ ಕತ್ತಿ, ಲಕ್ಷ್ಮಣ ರಾಮಪ್ಪ ಅಕ್ಕಿಸಾಗರ ಇವರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶೆಟ್ಟೆಪ್ಪ ಕಾಡಪ್ಪ ಮಾದರ ಇವರು ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಹಲವಾರು ಕಲಾವದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಜೀವನಕ್ಕೂ ಒಂದು ದಾರಿಯಾದಂತೆ ಆಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಗ್ಯಾ-ಬಾಳ್ಯಾ ಸಣ್ಣಾಟ ಹಾಗೂ ಭಜನಾ ಪದಗಳು ಜರುಗಿದವು. ಸ್ವಾಗತವನ್ನು ಯಮನವ್ವ ಜೋಕಾನಟ್ಟಿ ಹಾಗೂ ವಂದಣಾರೆ​‍್ಣಯನ್ನು ಅಕ್ಕಮಹಾದೇವಿ ಮಾದರ ಮಾಡಿದರು. 


ಸುದ್ದಿ ಓದಿ