ಧಾರವಾಡ - ಹುಬ್ಬಳ್ಳಿ

ಸಾಹಿತ್ಯ ರೂಪಗಳ ಒಳ-ಹೊರಗು ಪರಿಚಯಿಸಿದ ಸಾಹಿತ್ಯಾತರಂಗ ವಿಚಾರ ಸಂಕಿರಣ.

ಸಾಹಿತ್ಯ ರೂಪಗಳ ಒಳ-ಹೊರಗು ಪರಿಚಯಿಸಿದ  ಸಾಹಿತ್ಯಾತರಂಗ ವಿಚಾರ ಸಂಕಿರಣ.
"Literary Wave" symposium introducing the ins and outs of literary forms.

ಧಾರವಾಡ 25: ಕೇAದ್ರ ಸಾಹಿತ್ಯ ಅಕಾಡೆಮಿಯು, ಆಕಾಶವಾಣಿ ಧಾರವಾಡ ಕೇಂದ್ರದ ಸಹಯೋಗದಲ್ಲಿ ಕಳೆದ ದಿನಾಂಕ ೨೨ರ ಸೋಮವಾರದಂದು ತನ್ನ "ಸಾಹಿತ್ಯ ವೇದಿಕೆ" ಕಾರ್ಯಕ್ರಮದ ಅಡಿಯಲ್ಲಿ, "ಸಾಹಿತ್ಯಾತರಂಗ" ಎಂಬ ವಿಚಾರ ಸಂಕಿರಣವನ್ನು ಎರ್ಪಡಿಸಿತ್ತು. ಆಕಾಶವಾಣಿ ಧಾರವಾಡ ಕೇಂದ್ರದ ಶಾಲ್ಮಲಾ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಈ ವಿಚಾರ ಸಂಕಿರಣವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದವರು ಆಕಾಶವಾಣಿ ಧಾರವಾಡ ಕೇಂದ್ರದ ಎಂಜನಿಯರಿAಗ್ ವಿಭಾಗದ ಉಪಮಹಾನಿರ್ದೇಶಕ ಕೆ. ಅರುಣ ಪ್ರಭಾಕರ ಅವರು. ಮಾಯಾ ರಾಮನ್ ಅವರು ಹಾಡಿದ ಡಾ. ದ. ರಾ. ಬೇಂದ್ರೆಯವರ ಭಾವಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿಲಯದ ಕಾರ್ಯಕ್ರಮ ಮುಖ್ಯಸ್ಥರಾಗಿರುವ ಮಂಜುಳಾ ಪುರಾಣಿಕ ಅವರು ಸರ್ವರನ್ನು ಸ್ವಾಗತಿಸುತ್ತ, ಎರಡೂ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತ ಪ್ರಯತ್ಮವಾಗಿ ಆಯೋಜಿತವಾಗಿರುವ ಈ ಕಾರ್ಯಕ್ರಮದ ಲಾಭವನ್ನು ನಮ್ಮ ಸಹೃದಯರು ಮತ್ತು ವಿದ್ಯಾರ್ಥಿ ಪಡೆದುಕೊಳ್ಳಬೇಕು ಎಂದು ಆಶಿಸಿದರು.

ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಲಹಾ ಸಮಿತಿಯ ಸದಸ್ಯರಾದ ಡಾ.ಬಸವರಾಜ ಸಾದರ ಅವರು ಪ್ರಸ್ತಾವಿಕ ಮಾತುಗಳನ್ನಾಡುತ್ತ, ಅಕಾಡೆಮಿಯು ದೇಶದಾದ್ಯಂತ ನಡೆಸುವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಭಾರತೀಯ ಎಲ್ಲ ಭಾಷೆಗಳಲ್ಲೂ ವರ್ಷಕ್ಕೆ ಐದು ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಸಾಹಿತ್ಯ ಅಕಾಡೆಮಿಯು, ಪ್ರತಿವರ್ಷ ೫೦೦ ಗ್ರಂಥಗಳನ್ನು ಪ್ರಕಟಿಸುತ್ತಿರುವುದಲ್ಲದೆ, ವಾರ್ಷಿಕ ಮುಖ್ಯ ಪ್ರಶಸ್ತಿ, ಅನುವಾದ ಪ್ರಶಸ್ತಿ, ಬಾಲ ಮತ್ತು ಯುವ ಪುರಸ್ಕಾರಗಳನ್ನೂ ಒಳಗೊಂಡು ಹಿರಿಯ ಬರಹಗಾರರಿಗೆ ಫೆಲೋಶಿಪ್ ನ್ನು ಕೊಡುತ್ತಿದೆ ಎಂದರು. ಅದು ಆಯೋಜಿಸುವ ಹಲವು ಬಗೆಯ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ "ಸಾಹಿತ್ಯ ವೇದಿಕೆ"ಯೂ ಒಂದಾಗಿದ್ದು, ಅದರ ಅಡಿಯಲ್ಲಿಯೇ "ಸಾಹಿತ್ಯಾಂತರAಗ" ಕಾರ್ಯಕ್ರಮ ಏರ್ಪಾಡಾಗಿದೆ ಎಂದು ತಿಳಿಸಿದರು. ಸೃಜನಶೀಲ ಸಾಹಿತ್ಯ ನಿರ್ಮಾಣಕ್ಕೂ ಮೊದಲು, ವಿವಿಧ ಪ್ರಕಾರಗಳ ರಚನಾ ಸ್ವರೂಪ, ವಸ್ತು, ಭಾಷೆ, ತಂತ್ರ ಮತ್ತು ಪ್ರಯೋಜನಗಳನ್ನು ತಿಳಿದುಕೊಂಡರೆ,  ನಿರ್ಮಾಣವಾಗುವ ಸಾಹಿತ್ಯ ಮತ್ತಷ್ಟು ಗಂಭೀರವಾಗುತ್ತದೆ, ಆ ಹಿನ್ನೆಲೆಯಲ್ಲಿ ಸಾಹಿತ್ಯದ ಕೆಲವು ಪ್ರಕಾರಗಳ ಅಂತರAಗ-ಬಹಿರAಗಗಳನ್ನು ಚರ್ಚಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಡಾ. ರಾಘವೇಂದ್ರ ಪಾಟೀಲ ಅವರು ಸಣ್ಣಕಥೆಗಳ ಬಗ್ಗೆ, ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಕಾದಂಬರಿಗಳ ಬಗ್ಗೆ, ಡಾ.ವಿನಯಾ ವಕ್ಕುಂದ ಅವರು ಕಾವ್ಯ ಕುರಿತು ಮತ್ತು ಡಾ. ರಂಗನಾಥ ಕಂಟನಕುAಟೆ ಅವರು ವಿಮರ್ಶೆಯ ಬಗ್ಗೆ ಸೋದಾಹರಣಾತ್ಮಕ ಉಪನ್ಯಾಸಗಳನ್ನು ಪ್ರಸ್ತುತಪಡಿಸಿದರು.

ಕೊನೆಯಲ್ಲಿ ಡಾ. ಬಸವರಾಜ ಸಾದರ ಅವರು ಮಾತನಾಡಿ, ಮನುಷ್ಯನ ಸಂವೇದನೆಗಳನ್ನು ಜಾಗೃತವಾಗಿಟ್ಟು, ಸಹಬಾಳ್ಬೆ ಮತ್ತು ಸಮಾನತೆ ಸಾಧಿಸಲು ಸಾಹಿತ್ಯ ಯಾವ ರೀತಿ ಮಾರ್ಗದರ್ಶನ ನೀಡುತ್ತದೆ ಎಂಬುದನ್ನು ಸೋದಾಹರಣಾತ್ಮಕವಾಗಿ ವಿವರಿಸಿದರು.

ಧಾರವಾಡದ ಅನೇಕ ಹಿರಿಯ ಬರಹಗಾರರು ಹಾಗೂ ಸಹೃದಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಉದ್ಘೋಷಕಿ ಸುರೇಖಾ ಸುರೇಶ್ ಅವರು ಕಾರ್ಯಕ್ರಮ ನಿರೂಪಿಸಿ್ರು. ಸುರೇಶ್ ಕಾಂಬಳೆ ಅವರ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


ಸುದ್ದಿ ಓದಿ