ಧಾರವಾಡ - ಹುಬ್ಬಳ್ಳಿ

"ಮೊಬೈಲ್ ಬಿಟ್ಟು ಮ್ಯಾಟ್ ಹಿಡಿಯಿರಿ ಯೋಗ ಮಾಡಿ" : ಅಜಿತ ಪ್ರಸಾದ

"ಮೊಬೈಲ್ ಬಿಟ್ಟು ಮ್ಯಾಟ್ ಹಿಡಿಯಿರಿ ಯೋಗ ಮಾಡಿ" : ಅಜಿತ ಪ್ರಸಾದ

ಲೋಕದರ್ಶನ ವರದಿ

ಧಾರವಾಡ 22: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಧಾರವಾಡ ಜೈನ ಮಿಲನ್ ಮತ್ತು ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿ ಧಾರವಾಡ ಸಂಯೋಗದೊಂದಿಗೆ ನಡೆದ ಆರು ದಿನಗಳ ಕಾಲ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆ.ಎಸ್‌.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ 2026ರ ಯೋಗದ ದಿನದ ವಾಕ್ಯ ಒಂದು ಭೂಮಿ ಒಂದೇ ಆರೋಗ್ಯಕ್ಕಾಗಿ ಯೋಗ ಇದರ ಅರ್ಥ ಮನುಷ್ಯನ ಆರೋಗ್ಯ ಪ್ರಾಣಿಗಳ ಆರೋಗ್ಯ ಪರಿಸರದ ಆರೋಗ್ಯ ಎಲ್ಲವೂ ಪರಿಸರ ದೊಂದಿಗೆ ಬೆಸೆದುಕೊಂಡಿದೆ ಮತ್ತು ತಾವು ದಿನಕ್ಕೆ 30 ನಿಮಿಷ ಮೊಬೈಲ್ ಟಿವಿ ಲ್ಯಾಪ್ಟಾಪ್ ನಿಂದ ದೂರವಿದ್ದು ಯೋಗ ಮತ್ತು ದೈಹಿಕ ಚಟುವಟಿಕೆಗೆ ಸಮಯ ನೀಡಬೇಕು ಇದು ಮನಸ್ಸಿಗೆ ಶಾಂತಿ ದೇಹಕ್ಕೆ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಯೋಗ ಗುರು ಮಂಜುನಾಥ್ ಹೂಗಾರ್ ಶ್ರೀಮತಿ ಭಾರತಿ ಹೂಗಾರ್, ಶ್ರೀ ಮಹಾವೀರ ಉಪಾದ್ಯೆ, ಶ್ರೀಮತಿ ಜ್ಯೋತಿ ಕಟಗಿ ಶ್ರೀ ಭರ್ಮಪ್ಪ ಭಾವಿ ಶ್ರೀ ಅಶೋಕ್ ಬಾಳಿಕಾಯಿ ಶ್ರೀ ಬ್ರಹ್ಮ ಪ್ರಕಾಶ್ ಶ್ರೀ ನಾಗರಾಜ್ ಶೆಟ್ಟಿ, ಶ್ರೀಮತಿ ಸಂಗೀತ ಉಪಾದ್ಯೆ ಶ್ರೀ ಸುಕುಮಾರ್ ಕೋಕಟ್ನೂರ್ ಮುಂತಾದವರು ಉಪಸ್ಥಿತರಿದ್ದರು ಮತ್ತು ಈ ಸಮಾರಂಭದಲ್ಲಿ ಫಾದರ್ಸ್‌ ಡೇ ಕಾರ್ಯಕ್ರಮವನ್ನು ಶ್ರೀಮತಿ ರಾಜೇಶ್ವರ ಶೆಟ್ಟಿ ನಡೆಸಿಕೊಟ್ಟರು ಈ ಸಮಾರಂಭವನ್ನು ಮೊದಲು ಮೂರು ಬಾರಿ ನಮೋಕಾರ ಮಂತ್ರದೊಂದಿಗೆ ಪ್ರಾರಂಭಗೊಂಡು ಮತ್ತು ಪ್ರಾರ್ಥನೆಯನ್ನು ಕುಮಾರಿ ಅನುಷಾ ಸ್ವಾಗತ ಮತ್ತು ನಿರೂಪಣೆಯನ್ನು ಅಧ್ಯಕ್ಷ  ಡಾ. ಜಿನ್ನಪ್ಪ ಕುಂದಗೋಳ ವಂದನಾರೆ​‍್ಣಯನ್ನು ಕಾರ್ಯದರ್ಶಿ, ರತ್ನಾಕರ್ ಹೋಳ್ಗೆ ಮತ್ತು ಎಲ್ಲರಿಗೂ ಪ್ರಮಾಣ ಪತ್ರ ವಿತರಣೆಯನ್ನು ಖಜಾಂಚಿ ಶ್ರೀ ಮೋಹನ್ ಕುಮಾರ್ ಗೋಗಿ ಅವರು ನಡೆಸಿಕೊಟ್ಟರು 


ಸುದ್ದಿ ಓದಿ