ಕಾರವಾರ

“ಇನ್ನರ್‍ವ್ಹೀಲ್ ಡೇ” ಕಾರ್ಯಕ್ರಮ

“ಇನ್ನರ್‍ವ್ಹೀಲ್ ಡೇ” ಕಾರ್ಯಕ್ರಮ
ಕಾರವಾರ 21: ಇತ್ತೀಚೆಗೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಕಾರವಾರ ವತಿಯಿಂದ “ಇನ್ನರ್‍ವ್ಹೀಲ್ ಡೇ” ಆಚರಿಸಲಾಯಿತು.  ಸರಳ ಸಮಾರಂಭದಲ್ಲಿ ಕಾಮು ಗುನಗಿರವರಿಗೆ ಉಚಿತವಾಗಿ ಸಂಪೂರ್ಣ ಹಲ್ಲಿನ ಸೆಟ್‍ನ್ನು ನೀಡಲಾಯಿತು.  
ರೋ. ಡಾ.ಸಮೀರಕುಮಾರ ನಾಯಕ ಪ್ರಾಯೋಜಿಸಿದ್ದರು ಹಾಗೂ ಹಲ್ಲಿನ ಸೆಟ್‍ನ್ನು ಅಳವಡಿಸಿಕೊಟ್ಟರು.  ಸಂಸ್ಥೆಯ ಅಧ್ಯಕ್ಷೆ   ನೂತನ ಸೋನಿ ಸ್ವಾಗತಿಸಿದರು.    
ಅರ್ಚನಾ ಶೆಟ್ಟಿ,   ಸುಜಾತಾ ಜೋಶಿ ಇನ್ನರ್‍ವ್ಹೀಲ್ ಸಂಸ್ಥೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.  ವೇದಿಕೆಯ ಮೆಲೆ   ವರ್ಷಾ ನಾಯಕ ಉಪಸ್ಥಿತರಿದ್ದರು.  ಸಂಸ್ಥೆಯ ಕಾರ್ಯದರ್ಶಿ ಶೀತಲ ಮಾಂಜ್ರೇಕರ ಎಲ್ಲರನ್ನು ವಂದಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ಸುನೀಲ ಸೋನಿ, ಕಾರ್ಯದರ್ಶಿ ರೋ. ಗಣಪತಿ ಬಾಡಕರ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.  ಇನ್ನರ್‍ವ್ಹೀಲ್ ಸಂಸ್ಥೆಯ ಹಲವಾರು ಸದಸ್ಯರು ಹಾಜರಿದ್ದು “ಇನ್ನರ್‍ವ್ಹೀಲ್ ಡೇ” ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.

ಸುದ್ದಿ ಓದಿ