ಧಾರವಾಡ - ಹುಬ್ಬಳ್ಳಿ

“ಜೀವನ ನಿರ್ಮಾಣಕ್ಕೆ ಗುರುಗಳ ಮಾರ್ಗದರ್ಶನ ಅತ್ಯವಶ್ಯ”

“ಜೀವನ ನಿರ್ಮಾಣಕ್ಕೆ ಗುರುಗಳ ಮಾರ್ಗದರ್ಶನ ಅತ್ಯವಶ್ಯ”

ಲೋಕದರ್ಶನ ವರದಿ 

  ಧಾರವಾಡ   27: ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಹಿರಿಯರಿಗೆ ಕಿರಿಯರಿಗೆ, ಪೋಷಕರಿಗೆ ಗೌರವ ಕೊಡುವ ತಿಳುವಳಿಕೆ ಬಹಳ ಮುಖ್ಯ. ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು, ಶಕ್ತಿ, ಸಾಮರ್ಥ್ಯ ಹೊಂದಲು ಸಾಧ್ಯ ಎಂದು ಕ.ವಿ.ವಿ. ಪ್ರಸಾರಾಂಗ ನಿವೃತ್ತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಹೇಳಿದರು.  ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮತ್ತು ಕ್ರೀಡಾ ಮಂಟಪವು, ಇಟಗಿಯ ಚೆನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಹಳ್ಳಿಗಳು ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತವೆ. ಗ್ರಾಮಗಳು  ಅದರದೇ ಆದ ಸಾಮರ್ಥ್ಯ ಹೊಂದಿರುತ್ತವೆ. ಹಳ್ಳಿಗಳಲ್ಲಿ ಪ್ರೀತಿ, ವಿಶ್ವಾಸ ನಂಬಿಕೆ ಶಹರದ ಕಲುಷಿತ ವಾತಾವರಣಕ್ಕಿಂತ  ಹೆಚ್ಚಾಗಿ ಸಿಗುತ್ತದೆ. ಈ ಹಿಂದೆ ಸಾಧನೆ ಮಾಡಿದ ಸಾಧಕ ವ್ಯಕ್ತಿಗಳು ಎಲ್ಲರ ಮನಸಿನಲ್ಲಿ ಅಚಲವಾಗಿ ಮೂಡಿರುತ್ತಿದ್ದರು. ಅದಕ್ಕೆ ಕಾರಣ ಹಳ್ಳಿಯಿಂದ ಕಷ್ಟಪಟ್ಟು  ಮತ್ತು ಸಿದ್ಧಾಂತಗಳನ್ನು ನಂಬಿ ಸಾಧನೆ ಮಾಡಿದ್ದರು. ಇಂದಿನ ಸಾಧನೆಗೈದವರಲ್ಲಿ ಬಹಳ ಜನರ ಮನಸಿನಲ್ಲಿ ಕೆಲವೇ ದಿನಗಳು ಇರುತ್ತಾರೆ ಇದಕ್ಕೆ ತತ್ವಸಿದ್ಧಾಂತ ಕೊರತೆ ಕಾರಣ ಎಂದರು. 


ಸುದ್ದಿ ಓದಿ