"ಮುಂಡಗೋಡಿನಲ್ಲಿ ಭಕ್ತಿಭಾವದ ಶ್ರೀರಾಮ ನವಮಿ ಆಚರಣೆ
ಮುಂಡಗೋಡ 27 :ಪಟ್ಟಣದ ಶಿವಾಜಿ ಸರ್ಕಲ್ನಲ್ಲಿ ಶ್ರೀರಾಮ ನವಮಿಯ ಅಂಗವಾಗಿ ಶ್ರೀರಾಮ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಂಡಿತು.ಸುಂದರ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸುತ್ತಿದ್ದಂತೆ, ನೆರೆದಿದ್ದ ನೂರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ’ಜೈ ಶ್ರೀರಾಮ’ ಘೋಷಣೆಗಳು ಮುಗಿಲು ಮುಟ್ಟಿದವು. ಹಣ್ಣು-ಹಂಪಲುಗಳ ನೈವೇದ್ಯದ ನಂತರ ನೆರೆದಿದ್ದ ಭಕ್ತಾದಿಗಳಿಗೆ ಸಿಹಿ ವಿತರಣೆ ಮಾಡಿ ಸಂಭ್ರಮ ಆಚರಿಸಲಾಯಿತು. ಈ ವೇಳೆಯಲ್ಲಿ ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷರಾದ ಮಂಜುನಾಥ ಎಚ್ ಪಿ , ಫಣಿರಾಜ್ ಹದಳಗಿ, ಸುರೇಶ್ ಕಲ್ಲೋಳ್ಳಿ, ಶಂಕರ್ ಲಮಾಣಿ ಮಂಜುನಾಥ್ ಪಾಟೀಲ್, ಮಲ್ಲಿಕಾರ್ಜುನ್ ಗೌಳಿ, ನವೀನ್ ಇಂಗಳೆ, ಮಂಜುನಾಥ್ ಹಿರೇಮಠ, ರವಿ ತಳವಾರ್, ಶ್ರೀಧರ್ ಉಪ್ಪಾರ್, ಅನಿಲ್ ಕೊರವರ, ಹಾಗೂ ಸಂಜು ಬೋಸ್ಥೆ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು.