"ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ"
ಯಮಕನಮರಡಿ:ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಚಾಪುರ್ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಮುಖ್ಯಅತಿಥಿಗಳಾಗಿಅಧ್ಯಾಪಕ ಆನಂದ್ಎನ್ ಅವರು ಕರ್ನಾಟಕ ಇತಿಹಾಸದ ಕುರಿತು ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಆಶಾಮೇಡಂ ಅವರು ಕನ್ನಡ ಜನತೆಯ ಸ್ವಾಭಿಮಾನದ ಕುರಿತು ಪ್ರಸ್ತಾವಿಕ ಮಾತುಗಳನ್ನು ಆಡಿಸರ್ವರನ್ನು ಸ್ವಾಗತಿಸಿದರು. ಕೋಟಿಕಂಠ ಗಾಯನವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ಕುಲಕರ್ಣಿವಹಿಸಿ ಮಾತನಾಡಿ ಇಂಗ್ಲೀಷ ಮಧ್ಯಮ ಶಾಲಾ ಕಾಲೇಜುಗಳು ಹೆಚ್ಚಾಗಿಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ದೈಹಿಕ ನಿರ್ದೇಶಕ ಪ್ರೊ.ನದಾಫ್,ಇತಿಹಾಸದ ಮುಖ್ಯಸ್ಥ ಶ್ರೀಶೈಲ್ಬಬಲಾದ, ವಾಣಿಜ್ಯ ಭಾಗದ ಅಧ್ಯಾಪಕರುಗಳಾದ ಬಿರಾಸುರನವರ್, ತಂಗಮ್ಮ, ಸುಮನ್ಖಾನ್ಬಾಜೆ, ಇಂಗ್ಲಿಷ್ವಿಭಾಗದ ಶುಭಾಹಿರೇಮಠ, ಗಣಿತ ವಿಭಾಗದ ಎಸ್. ಎಸ್.ಮಹಾಜನಶೆಟ್ಟಿ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮವನ್ನ ಕನ್ನಡ ವಿಭಾಗದ ಪ್ರೊ.ನೀಲಕಂಠಭೂಮಣ್ಣವರನಿರೂಪಿಸಿದರೆ ಪ್ರೊ.ಸಂತೋಷ್ ಉಂಡಾಡಿ ವಂದಿಸಿದರು