ಧಾರವಾಡ - ಹುಬ್ಬಳ್ಳಿ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಅನಾಥರ ಮಾಯಿ” ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಅನಾಥರ ಮಾಯಿ” ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ


ಧಾರವಾಡ  03: ಧಾರವಾಡದ ಸನ್ನಿಧಿ ಮಹಿಳಾ ಮಂಡಳವು ದಿನಾಂಕ : 07.03.2026ರಂದು ಸಂಜೆ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಅನಾಥರ ಮಾಯಿ” ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.   

ಕಾರ್ಯಕ್ರಮವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾದ ಅಮೃತ ದೇಸಾಯಿ ಅವರು ಉದ್ಘಾಟಿಸುವರು.  ಮುಖ್ಯ ಅತಿಥಿಗಳಾಗಿ ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಆಗಮಿಸುವರು.  ಅಧ್ಯಕ್ಷತೆಯನ್ನು ಸನ್ನಿಧಿ ಮಹಿಳಾ ಮಂಡಳದ ಅಧ್ಯಕ್ಷೆ ನಂದಾ ಗುಳೇದಗುಡ್ಡ ವಹಿಸುವರು.   

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರ ಸನ್ಮಾನ : ವಿಶ್ವೇಶ್ವರಿ ಹಿರೇಮಠ, ವಿದುಷಿ ಸುಜಾತಾ ಗುರವ, ಮೇಘಾ ಹುಕ್ಕೇರಿ, ವಿದುಷಿ ಭಾರ್ಗವಿ ಕುಲಕರ್ಣಿ ಮತ್ತು ಯಲ್ಲಮ್ಮ ಪಾಟೀಲ ಹಾಗೂ ವಿಶೇಷ ಸನ್ಮಾನವಾಗಿ ಶ್ರೀಕಾಂತ ಹಲಗತ್ತಿ, ಪ್ರಕಾಶ ಬಾಳಿಕಾಯಿ, ಗೀತಾ ಕಿತ್ತೂರ, ರೇಖಾ ಪಾಟೀಲ ಇವರನ್ನ ಸನ್ಮಾನಿಸಲಾಗುವುದು.   

ನಂತರ ಸಿಂಧು ತಾಯಿ ಸಪಕಾಳ ಅವರ ಜೀವನಾಧಾರಿತ ನಾಟಕ. "ಅನಾಥರ ಮಾಯಿ" ಪರಿಕಲ್ಪನೆ, ರಚನೆ ಹಾಗೂ ನಿರ್ದೇಶನ  ಸುಭಾಸ ನರೇಂದ್ರ. ಸಿಂಧುತಾಯಿ ಪಾತ್ರದಲ್ಲಿ ವೀಣಾ ಅಠವಲೆ ನಿರ್ವಹಿಸುವರು.  ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸನ್ನಿಧಿ ಮಹಿಳಾ ಮಂಡಳದ ಕಾರ್ಯದರ್ಶಿ ರಾಜೇಶ್ವರಿ ಕಬ್ಬೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ