ಧಾರವಾಡ - ಹುಬ್ಬಳ್ಳಿ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಅನಾಥರ ಮಾಯಿ” ನಾಟಕ ಹಾಗೂ ಹಾಸ್ಯಸಂಜೆ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಅನಾಥರ ಮಾಯಿ” ನಾಟಕ ಹಾಗೂ ಹಾಸ್ಯಸಂಜೆ

ಲೋಕದರ್ಶನ ವರದಿ 

ತಾಯಿಯ ಮಹತ್ವವನ್ನು ಜನಪದರು ಅನುಭವದ ಅಮೃತತ್ವವನ್ನು ಸಾಹಿತ್ಯ, ಸಂಗೀತ ರೂಪದೊಳಗ ಮಾದರಿಯಾಗಿ ಕಟ್ಟಿಕೊಟ್ಟಿದ್ದಾರೆ : ವಿಶ್ವೇಶ್ವರಿ ಹಿರೇಮಠ

ಧಾರವಾಡ 18 : ಮಹಿಳೆ ಕೇವಲ ಹೆಣ್ಣಾಗದೇ, ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸಖಿಯಾಗಿ ಸಮಾಜದಲ್ಲಿ ಪ್ರಮುಖ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಿದ್ದಾಳೆ.  ತಾಯಿಯ ಮಹತ್ವವನ್ನು ನಮ್ಮ ಜನಪದರು ಅನುಭವದ ಅಮೃತತ್ವವನ್ನು ಸಾಹಿತ್ಯ, ಸಂಗೀತ ರೂಪದೊಳಗ ಮಾದರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹಿರಿಯ ರಂಗಭೂಮಿ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಅಭಿಪ್ರಾಯ ಪಟ್ಟರು.   

ಧಾರವಾಡದ ಸನ್ನಿಧಿ ಮಹಿಳಾ ಮಂಡಳವು ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣದ ಹಾನಗಲ್ ಶ್ರೀ ಕುಮಾರಸ್ವಾಮಿಗಳ ವೇದಿಕೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರಿ​‍್ಡಸಿದ್ದ “ಅನಾಥರ ಮಾಯಿ” ನಾಟಕ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವೇಶ್ವರಿ ಹಿರೇಮಠ ಮಾತನಾಡುತ್ತ  ನಾವಿಂದು 116ನೇ ವಿಶ್ವ ಮಹಿಳಾ ದಿನವನ್ನು ಆಚರಿಸುತ್ತಾ ಇದ್ದೇವೆ.  ಮಹಿಳೆಯ ಸಮಾನತೆಯ ಪ್ರತೀಕವಾಗಿ ಈ ದಿನಾಚರಣೆ ಚಾಲನೆಗೆ ಬಂದಿದೆ.  ಮಹಿಳೆ ಇಂದು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾಳೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.   

ಸನ್ಮಾನ ಸ್ವೀಕರಿಸಿದ ವಿದುಷಿ ಸುಜಾತಾ ಗುರವ, ಲೇಖಕಿ, ಗಾಯಕಿ ಮೇಘಾ ಹುಕ್ಕೇರಿ, ವಿದುಷಿ ಭಾರ್ಗವಿ ಕುಲಕರ್ಣಿ ಮಾತನಾಡಿದರು.  ಸನ್ನಿಧಿ ಮಹಿಳಾ ಮಂಡಳದ ಅಧ್ಯಕ್ಷೆ ನಂದಾ ಗುಳೇದಗುಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಸಾಧಕರಾದ ವಿಶ್ವೇಶ್ವರಿ ಹಿರೇಮಠ, ವಿದುಷಿ ಸುಜಾತಾ ಗುರವ, ಮೇಘಾ ಹುಕ್ಕೇರಿ, ವಿದುಷಿ ಭಾರ್ಗವಿ ಕುಲಕರ್ಣಿ, ರೇಖಾ ಪಾಟೀಲ, ಗೀತಾ ಕಿತ್ತೂರ, ಯಲ್ಲಮ್ಮ ಪಾಟೀಲ ಹಾಗೂ ಶ್ರೀಕಾಂತ ಹಲಗತ್ತಿ, ಪ್ರಕಾಶ ಬಾಳಿಕಾಯಿ, ಸುಭಾಸ ನರೇಂದ್ರ, ಮಲ್ಲಪ್ಪ ಹೊಂಗಲ, ರವಿ ಗಲಬಿ, ಇವರನ್ನು ಸನ್ಮಾನಿಸಲಾಯಿತು.    

ಸುಭಾಸ ನರೇಂದ್ರ ರಚನೆ ಹಾಗೂ ನಿರ್ದೇಶನದ ಸಿಂಧು ತಾಯಿ ಸಪಕಾಳ ಅವರ ಜೀವನಾಧಾರಿತ ನಾಟಕ "ಅನಾಥರ ಮಾಯಿ"ವು ಸಿಂಧುತಾಯಿ ಪಾತ್ರದಲ್ಲಿಯ ವೀಣಾ ಅಠವಲೆ ಅವರ ಅಭಿನಯವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.  ನಂತರ ಖ್ಯಾತ ಹಾಸ್ಯಕಲಾವಿದ ಮೊಬೈಲ್ ಮಲ್ಲ ಅವರು ಪ್ರೆಕ್ಷಕರನ್ನು ನಗೆಗಡಲ್ಲಿ ಮಿಂದೇಳಿಸಿದರು.  ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.   ಅನುರಾಧಾ ಅಡಗಿಮಠ ನಿರೂಪಿಸಿದರು, ಕಾರ್ಯದರ್ಶಿ ರಾಜೇಶ್ವರಿ ಕಬ್ಬೂರ ಸ್ವಾಗತಿಸಿದರು, ಖಜಾಂಚಿ ಡಾ. ಶುಭಾ ಅಂಗಡಿ ವಂದಿಸಿದರು.  ಸಹಕಾರ್ಯದರ್ಶಿ ಸುನಿತಾ ಮುನವಳ್ಳಿ, ಸದಸ್ಯರಾದ ಪಲ್ಲವಿ ಪತ್ತೆನ್ನವರ ಅರುಂದತಿ ಹೋತನಳ್ಳಿ, ಪವಿತ್ರಾ ಸಿಂಗನಹಳ್ಳಿ, ಸಂಗೀತಾ ಶಿಂಧೆ,  ಅರುಂದತಿ ಜಯರಾಜ ಉಪಸ್ಥಿತರಿದ್ದರು. 


ಸುದ್ದಿ ಓದಿ