ರಾಷ್ಟ್ರೀಯ

ಮೋದಿ... ಮತ್ತೊಮ್ಮೆ ‘ನಮಸ್ತೆ ಟ್ರಂಪ್’ ಆಯೋಜಿಸುತ್ತಾರ ?. ಟ್ರಂಪ್ ರನ್ನು ಆಹ್ವಾನಿಸುತ್ತಾರ? ಪಿ. ಚಿದಂಬರಂ ವ್ಯಂಗ್ಯ

ಮೋದಿ... ಮತ್ತೊಮ್ಮೆ ‘ನಮಸ್ತೆ ಟ್ರಂಪ್’  ಆಯೋಜಿಸುತ್ತಾರ ?.   ಟ್ರಂಪ್  ರನ್ನು ಆಹ್ವಾನಿಸುತ್ತಾರ? ಪಿ.  ಚಿದಂಬರಂ ವ್ಯಂಗ್ಯ

ನವದೆಹಲಿ,ಅಕ್ಟೋಬರ್ 1: ಕೋವಿಡ್ -19 ಸೋಂಕಿನ  ಅಂಕಿ ಅಂಶಗಳನ್ನು  ಭಾರತ  ಮರೆ ಮಾಚುತ್ತಿದೆ ಎಂದು  ಅಮೆರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ  ಹಿನ್ನಲೆಯಲ್ಲಿ ಕಾಂಗ್ರೆಸ್  ಹಿರಿಯ ನಾಯಕ ಪಿ.ಚಿದಂಬರಂ ಪ್ರಧಾನಿ  ನರೇಂದ್ರ ಮೋದಿ ಅವರ  ಬಗ್ಗೆ   ವ್ಯಂಗ್ಯವಾಡಿದ್ದಾರೆ.  

ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ,   ಮತ್ತೊಮ್ಮೆ  “ ನಮಸ್ತೆ ಟ್ರಂಪ್”  ಕಾರ್ಯಕ್ರಮ  ನಿರ್ವಹಿಸುತ್ತಾರ ?   ಮೋದಿ ಅವರ    “ ಡಿಯರ್ ಫ್ರಂಡ್”  ಟ್ರಂಪ್ ಅವರನ್ನು  ಮತ್ತೊಮ್ಮೆ  ಭಾರತಕ್ಕೆ ಆಹ್ವಾನಿಸುತ್ತಾರ?  ಎಂದು ಪ್ರಶ್ನಿಸುವ ಮೂಲಕ   ವ್ಯಂಗ್ಯವಾಡಿದ್ದಾರೆ.

ಕೋವಿಡ್   ಸತ್ಯಾಂಶಗಳನ್ನು  ಬಹಿರಂಗಗೊಳಿಸುತ್ತಿಲ್ಲ ಎಂದು ಭಾರತವನ್ನು   ಚೈನಾ, ರಷ್ಯಾ ದೇಶಗಳ ಗುಂಪಿಗೆ ಟ್ರಂಪ್ ಸೇರ್ಪಡೆಗೊಳಿಸಿದ್ದಾರೆ.  ವಾಯು ಮಾಲಿನ್ಯಕ್ಕೂ ಈ ಮೂರು ದೇಶಗಳೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ.  ಈಗ ಪ್ರಧಾನಿ ಮೋದಿ  ಮತ್ತೊಮ್ಮೆ “ ನಮಸ್ತೆ ಟ್ರಂಪ್”   ನಡೆಸಲಿದ್ದಾರೆಯೇ..?  ಅವರ  ಪರಮಾಪ್ತ ಮಿತ್ರನನ್ನು   ಭಾರತಕ್ಕೆ ಆಹ್ವಾನಿಸಲಿದ್ದಾರಾ? ಎಂದು  ಚಿದಂಬರಂ  ಟ್ವೀಟ್  ಮಾಡಿದ್ದಾರೆ.

ಸುದ್ದಿ ಓದಿ