ಅಂಧ ವೃದ್ಧೆಯ ಬಾಳಿಗೆ ಬೆಳಕು ನೀಡಿದ ಡಾ. ಪ್ರಭುಗೌಡ
ತಾಳಿಕೋಟಿ ೧೮: ಒಂದು ಮಾತು ಬಹಳ ಸಾರ್ವತ್ರಿಕವಾಗಿದೆ ಒಬ್ಬ ಅಸಹಾಯಕ ವ್ಯಕ್ತಿಯನ್ನು ತನ್ನುವರೆಂಬುವರು ಎಲ್ಲರೂ ಕೈ ಬಿಟ್ಟಾಗ ಅಂತಹ ವ್ಯಕ್ತಿಯ ಕೈಯನ್ನು ದೈವಿಕ ಶಕ್ತಿಯೊಂದು ಹಿಡಿಯುತ್ತದೆ ಹೀಗೆಯೇ ತನ್ನವರೆಂಬವರೆಲ್ಲರೂ ಕೈ ಬಿಟ್ಟು ನಡು ಬೀದಿಯಲ್ಲಿ ಅನಾಥವಾಗಿ ನಿಂತ 75 ವರ್ಷದ ಕಣ್ಣು ಕಾಣದ ಅಜ್ಜಿಯನ್ನು ತನ್ನ ಆಸ್ಪತ್ರೆಗೆ ಕರೆತಂದು ಉಚಿತವಾಗಿ ಅವಳ ಶಸ್ತ್ರ ಚಿಕಿತ್ಸೆ ಯನ್ನು ಮಾಡಿ ಅವಳ ವಿಶೇಷ ಆರೈಕೆಯನ್ನು ಮಾಡುವುದರ ಮೂಲಕ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭು ಗೌಡ ಲಿಂಗದಳ್ಳಿ ಅವರು ಮತ್ತೊಮ್ಮೆ ಮನವೀಯತೆಯನ್ನು ಮೆರೆದಿದ್ದಾರೆ. ಇತ್ತೀಚಿಗೆ ವಿಜಯಪುರ ನಗರದ ಇಬ್ರಾಹಿಂಪೂರ್ ಗೇಟ್ ಬಳಿ 75 ವರ್ಷದ ಕಣ್ಣು ಕಾಣದ ಅಜ್ಜಿಯೊಬ್ಬಳನ್ನು ಅವಳ ಕುಟುಂಬದವರು ಅನಾಥವಾಗಿ ರಸ್ತೆಯ ಮಧ್ಯದಲ್ಲಿ ಬಿಟ್ಟು ಹೋಗಿದ್ದಾರೆ ದಾರಿ ಕಾಣದೆ ಹತಾಶಳಾಗಿ ನಿಂತ ಈ ಅಜ್ಜಿಯನ್ನು ಕಂಡ ಚಾಲಕನೊಬ್ಬ ಮಾನವೀಯ ದೃಷ್ಟಿಯಿಂದ ಅವಳನ್ನು ಸಮೀಪದ ಹೋಟೆಲ್ ಒಂದರಲ್ಲಿ ಊಟಕ್ಕಾಗಿ ಕರೆದುಕೊಂಡು ಹೋಗಿದ್ದಾನೆ ಆಗ ಅಲ್ಲಿಯೇ ಚಹಾ ಸೇವಿಸುತ್ತಿದ್ದ ಡಾಕ್ಟರ್ ಪ್ರಭುಗೌಡರು ಈ ಅಜ್ಜಿಯನ್ನು ಕಂಡು ಅವಳ ಸ್ಥಿತಿಯನ್ನು ವಿಚಾರಿಸಿದ್ದಾರೆ ಅವಳಿಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ಗೊತ್ತಾದಾಗ ಅವಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಮನವರಿಕೆಯಾಗಿ ಅವಳನ್ನು ತಮ್ಮ ಅನುಗ್ರಹ ಆಸ್ಪತ್ರೆಗೆ ಕರೆ ತಂದಿದ್ದಾರೆ ಅಲ್ಲಿ ದಾಖಲಿಸಿಕೊಂಡು ವೃದ್ಧ ಅಜ್ಜಿಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ ಜೊತೆಗೆ ಅವಳ ವಿಶೇಷ ಆರೈಕೆಯನ್ನು ಮಾಡಿಸುತ್ತಿದ್ದಾರೆ ಈ ಮೊದಲು ಡಾ. ಪ್ರಭುಗೌಡರು ಇಂತಹ ಹಲವಾರು ಸೇವೆಗಳನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಈ ಘಟನೆಯ ಕುರಿತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮನ್ನು ಹೆತ್ತವರು ನಮ್ಮ ಪಾಲಿಗೆ ಅಮೂಲ್ಯವಾದ ಅನುಗ್ರಹವಾಗಿದ್ದಾರೆ ಅವರ ಆರೈಕೆ ನಮ್ಮ ಜವಾಬ್ದಾರಿಯಾಗಿದೆ ಅವರೊಂದು ಈ ರೀತಿ ಅನಾಥವಾಗಿ ಹಾಗೂ ಅಮಾನವೀಯವಾಗಿ ಬಿಟ್ಟು ಹೋಗಿರುವುದು ದುಃಖದ ಸಂಗತಿ ಯಾಗಿದೆ ಈ ಕಾರಣದಿಂದಾಗಿಯೆ ನಾನು ನನ್ನ ಅನುಗ್ರಹ ಆಸ್ಪತ್ರೆಯ ಮೂಲಕ ಹಣದ ತೊಂದರೆಯಲ್ಲಿರುವ ಕಡು ಬಡವರಿಗೆ ಅನಾಥರಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡುವಂತಹ ಕೆಲಸ ಮಾಡುತ್ತಿದ್ದೇನೆ ಇದನ್ನು ನಾನು ನನ್ನ ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿದ್ದೇನೆ ಎಂದರು. ಈ ಸಮಯದಲ್ಲಿ ಅನುಗ್ರಹ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.