ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಅಜೀಮ್ಗೆ ಬೊಮ್ಮಾಯಿ ಕರೆ
ಲೋಕದರ್ಶನ ವರದಿ
ಶಿಗ್ಗಾವಿ 20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನನ್ನನ್ನು ಎರಡನೇ ಅವಧಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ಮುಂದುವರೆಸಿ, ನಿವೊಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದುದರಿಂದ ದಿನದ 24 ತಾಸು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಅಲ್ಪ ಸಂಖ್ಯಾತ ಸಮುದಾಯಗಳ ಕುಂದು ಕೊರತೆ ಆಲಿಸಿ, ವರದಿಗಾರರೊಂದಿಗೆ ಮಾತನಾಡಿದ ಅವರು ಸರಕಾರದ ಮೈನಾರಿಟಿ ನಿಯಮಗಳ ಪ್ರಕಾರ ಅಲ್ಪಸಂಖ್ಯಾತ 6 ಸಮುದಾಯಗಳ ರಕ್ಷಣೆ, ಅಲ್ಪ ಸಂಖ್ಯಾತರ ಸಮುದಾಯ ಸಂಸ್ಥೆಗಳ ರಕ್ಷಣೆ, ಅವರಿಗೆ ಸಿಗಬೇಕಾದ ಹಕ್ಕುಗಳ ರಕ್ಷಣೆ ಜೊತೆಗೆ ಅವರ ಕಲ್ಯಾಣಕ್ಕಾಗಿ ಶಿಫಾರಸ್ಸು ಮಾಡುವ ಅಧಿಕಾರವನ್ನು ಸರಕಾರ ನಮ್ಮ ಆಯೋಗಕ್ಕೆ ನೀಡಿದೆ. ಜಿಲ್ಲೆಯ 6 ಅಲ್ಪಸಂಖ್ಯಾತ ಸಮುದಾಯಗಳ ಕುಂದುಕೊರತೆ ಕೇಳಲು ಈ ಪ್ರವಾಸ ಹಮ್ಮಿಕೊಂಡಿದ್ದೇನೆ.
ಜೈನ ಸಮುದಾಯದವರು ನಮಗೆ ಪ್ರತ್ಯೇಕವಾದ ಅಭಿವೃದ್ದಿ ಪ್ರಾಧಿಕಾರವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ, ಈ ಭಾಗದಲ್ಲಿ ಹೆಚ್ಚಾಗಿರುವ ಪಿಂಜಾರ, ನಧಾಫ ಸಮುದಾಯಗಳು ಕೂಡಾ ಪ್ರತ್ಯೇಕವಾದ ಅಭಿವೃದ್ದಿ ಪ್ರಾಧಿಕಾರಕ್ಕೇ ಬೇಡಿಕೆಯನ್ನು ಇಟ್ಟಿದ್ದು ಮುಖ್ಯಮಂತ್ರಿಗಳು ಈ ವಿಷಯವಾಗಿ ವಿಶೇಷ ಆಸಕ್ತಿಯನ್ನು ತೋರಿಸಿದ್ದಾರೆ. ಜೈನ ಸಮುದಾಯದ ಅನೇಕ ಆಸ್ಥಿಗಳು ವತ್ತುವರಿಯಾಗಿವೆ, ಅವುಗಳನ್ನು ಅವರಿಗೆ ನೀಡಲು ಸರ್ವೇಮಾಡಲು ಆದೇಶಿಸಲಾಗಿದೆ, ಜೈನ ಮತ್ತು ಭೌಧ ಸಮುದಾಯದ ನಿರಾಶ್ರಿತರಿಗೆ ವಸತಿ ಯೋಜನೆಯನ್ನು ಕಲ್ಪಿಸಲು 37 ಕೋಟಿ ಅನುಧಾನವನ್ನು ನೀಡಲಾಗಿದೆ, ಸಿಖ್ ಸಮುದಾಯದವರು ಕರ್ನಾಟಕದಲ್ಲಿ ವಾಸವಾಗಿದ್ದು ಅವರಿಗು ಶೈಕ್ಷಣಿಕ ಔಧ್ಯೋಗಿಕ ಸಭಲೀಕರಣಕ್ಕೆ ಮೀಸಲಾತಿಯನ್ನು ಕೇಳಿದ್ದು ಅವರ ಬೇಡಿಕೆಯನ್ನು ಸರಕಾರಕ್ಕೆ ಸಿಪಾರಸ್ಸು ಸಲ್ಲಿಸಲಾಗಿದೆ. ಶಿಗ್ಗಾವಿ ತಾಲೂಕಿನ ಮುಸ್ಲೀಂ ಸಮುದಾಯದ ಕುಂದುಕೊರತೆಗಳನ್ನು, ಮತ್ತು ಅವರಿಗೆ ಸಿಕ್ಕಿರುವ, ಸಿಗಬೇಕಾಗಿರುವ ಸರ್ಕಾರದ ಸೌಲಭ್ಯಗಳ ಕುರಿತು ಪರಿಸೀಲಿಸುತ್ತೇನೆ, ಈ ಕ್ಷೇತ್ರಕ್ಕೆ ಅದೃಷ್ಟದ ಫಲವಾಗಿ ಬಸವಾರಜ ಬೊಮ್ಮಾಯಿ ಸಿಕ್ಕಿದ್ದಾರೆ, ಅವರೊಬ್ಬ ದಕ್ಷ ನಾಯಕ ಅವರೊಂದಿಗೆ ನಾನು ಕೆಸಾ ಮಾಡಿದ್ದೇನೆ ಅದರಿಂದ ಅವರ ಸಾಮಾಥ್ರ್ಯ ನನಗೆ ತಿಳಿದಿದೆ ಎಂದು ಹೇಳಿದರು. ಅ.ಸಂ.ಅಯೋಗದ ನಿಸಾರ ಅಹ್ಮದ, ಅ.ಸಂ.ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಶೋಕ ಗದ್ದಿಗೌಡ್ರ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರೀಪ್ಸಾಬ ನಧಾಪ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.