ಪರಮಾತ್ಮನ ಮನುಷ್ಯನ ದೇಹದಲ್ಲಿ ಎಲ್ಲ ಸಂಪತ್ತನು ನೀಡಿದ್ದಾನೆ: ಪ್ರಭುಜೀ ಮಹಾರಾಜರು
ಲೋಕದರ್ಶನ ವರದಿ,
ಜಮಖಂಡಿ 24: ಪರಮಾತ್ಮನ ಮನುಷ್ಯನ ದೇಹದಲ್ಲಿ ಎಲ್ಲ ಸಂಪತ್ತನು ನೀಡಿದ್ದಾನೆ. ಅದನ್ನು ಹೊರತು ಪಡಿಸಿ ಬೇರೆ ವಿಚಾರಗಳನ್ನು ಮಾಡುತ್ತಾ. ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಟ ಮಾಡುತ್ತಿದ್ದಾನೆ ಎಂದು ಇಂಚಗೇರಿ ಮಠದ ಪ್ರಭುಜೀ ಮಹಾರಾಜರು ಹೇಳಿದರು.
ನಗರದ ಬೃಂದಾವನ ಲೇವಟ್ದಲ್ಲಿ ನಡೆದ ದ್ಯಾಮವ್ವದೇವಿ, ಲಕ್ಕವ್ವದೇವಿ ಮೂರ್ತಿ ಪ್ರತಿಷ್ಠಾಣ ಕಾರ್ಯಕ್ರಮ ಮತ್ತು ಭಂಡಾರ ಜಾತ್ರೆ ಹಾಗೂ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ಹಣ, ಆಸ್ತಿಯನ್ನು ಗಳಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇವಿಯು ಎಲ್ಲವನ್ನೂ ನೀಡಿದ್ದಾಳೆ. ಅದನ್ನು ಸರಿಯಾಗಿ ಉಪಯೋಗಿಸುವ ಗುಣಗಳನ್ನು ಹೊಂದಬೇಕು. ಪ್ರಕೃತಿಯನ್ನು ದೇವರೆಂದು ಆರಾಧಿಸುವ ಮನುಷ್ಯ ಇಂದು ಭೂಮಿಯ ಮೇಲೆ ದೇವರು, ದೇವತೆಗಳು ಹುಟ್ಟಿಕೊಂಡಿರುತ್ತವೆ, ಈ ಜೀವನದಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಬೇಕು. ಎಲ್ಲರೂ ಕೂಡಿಕೊಂಡು ಒಂದಾಗಿ ಜಾತ್ರೆಯ ಆಚರಣೆ ಮಾಡುವ ಜೊತೆಗೆ ಕೇವಲ ಜಾತ್ರೆ, ಜಾತ್ರೆಗೆ ಸಿಮೀತವಾಗದೆ. ದೇವಿಯನ್ನು ಸ್ಮರಿಸುವ ಕೆಲಸ ಮಾಡಬೇಕೆಂದು ಆರ್ಶಿವಚನ ನೀಡಿದರು.
ಯಾದಗಿರಿ ಮದಾನೆಗುಂದಿ ಮಠದ ರವೀಂದ್ರ ಮಾಹಾಸ್ವಾಮಿಜೀ ಸಾನಿಧ್ಯ ವಹಿಸಿ ಮಾತನಾಡಿದರು. ಮನಸು ಗಲಿಜ್ಜುವಾದರೆ ಶಾಂಪು. ಸೋಪುಗಳಿಂದ ಸ್ವಚ್ಛವಾಗದು. ದೇವರ ಜ್ಞಾನ, ಪೂಜ್ಯರ ಹಿತ್ತ ವಚನ ವಾಣಿಯನ್ನು ಕೇಳುವುದರಿಂದ ಮನಸು ಸ್ವಚ್ಛವಾಗುತ್ತದೆ. ದಾನ-ಧರ್ಮ ಮಾಡುವ ಮೂಲಕ ಪುಣ್ಯ ದೊರೆಯುತ್ತದೆ. ಪುಣ್ಯ ಯಾವ ಸಮಯದಲ್ಲಿ ದೊರೆಯುತ್ತದೆ ಎಂದರೆ ಕಷ್ಟದ ಕಾಲದಲ್ಲಿ ಪುಣ್ಯ ದೊರೆಯುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯಬೇಕಾದರೆ ದೇವರ, ದೇವಿಯ ಸನ್ನಿಧಿಯಲ್ಲಿ ಮಾತ್ರ ಮನಸಿಗೆ ನೆಮ್ಮದಿ ಸಿಗಲು ಸಾಧ್ಯ ಎಂದರು.
ನಗರದ ಆಲಗೂರ ಪ್ಲಾಟ್ದಲ್ಲಿ ಚೌಡೇಶ್ವರಿ ದೇವಿಯ ದೇವಸ್ಥಾನದಿಂದ ಬೃಂದಾವನ ಲೇವಟ್ದವರೆಗೆ ದ್ಯಾಮವ್ವದೇವಿ ಹಾಗೂ ಲಕ್ಕವ್ವದೇವಿಯ ಮೆರವಣಿಗೆ ನಡೆಯಿತು.
ಪ್ರದೀಪ ಮಾಲಿಂಗಪೂರಮಠ, ಶಂಕರ ಇಂಗಳಗಾವಿ, ರುದ್ರಯ್ಯ ಕರಡಿ, ಅಜೇಯ ಕಡಪ್ಟಟ್ಟಿ, ಕುಶಾಲ ವಾಗಮೋರೆ, ಪರಮಾನಂದ ಗೌರೋಜಿ, ಉಮೇಶ ದೇಸಾಯಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.