ಪೂಂಚ್ ನಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸಿ ದಾಳಿ: ಓರ್ವ ಯೋಧ ಹುತಾತ್ಮ
ಜಮ್ಮು, ಅಕ್ಟೋಬರ್.1: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನ ಸೈನಿಕರು ಪೂಂಚ್ ಜಿಲ್ಲೆಯ ಕೃಷ್ಣ ಘಾಟ್ ವಲಯದಲ್ಲಿ ಬುಧವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು ಎಂದು ರಕ್ಷಣಾ ವಕ್ತಾರ ಗುರುವಾರ ತಿಳಿಸಿದ್ದಾರೆ.
ನಮ್ಮ ಸೈನಿಕರು ಕೂಡ ಪ್ರತಿ ದಾಳಿ ನಡೆಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಮ್ಮ ಸೈನಿಕ ಲಾನ್ಸ್ ನಾಯಕ್ ಕರ್ನೈಲ್ ಸಿಂಗ್ ತೀವ್ರವಾಗಿ ಗಾಯಗೊಂಡರು. ಬಳಿಕ ಅವರು ಮೃತಪಟ್ಟರು ಎಂದು ಅವರು ತಿಳಿಸಿದರು.
ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಧೈರ್ಯಶಾಲಿ, ಪ್ರೇರಣೆ ಮತ್ತು ಪ್ರಾಮಾಣಿಕ ಸೈನಿಕನಾಗಿದ್ದರು ಎಂದು ವಕ್ತಾರರು ಹೇಳಿದರು. ಅವರ ಹುತಾತ್ಮತೆಯನ್ನು ದೇಶ ಗೌರವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.