ಸ್ಥಳೀಯ ರೈತ ಸಂಘದ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಹಾವೇರಿ11: ಜಿಲ್ಲೆಯ ಚಂದಾಪೂರ ಗ್ರಾಮದಲ್ಲಿ ನವೋದಯ ಪರಿಸರ ಹಾಗೂ ಶಿಕ್ಷಣ ಅಭಿವೃದ್ಧಿ (ನೀಡ್ಸ್) ಸಂಸ್ಥೆ, ನವೋದಯ ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ಸ್ಥಳೀಯ ರೈತ ಸಂಘದ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸಂಯೋಜಕರಾದ ಗುಡ್ಡಪ್ಪ ಎಂ ಮರಾಠೆಯವರ ನೇತೃತ್ವದಲ್ಲಿ ಗ್ರಾಮದ ಸಕರ್ಾರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಸರದ ಆಮ್ಲಜನಕದ ಮೂಲಗಳು ಹಾಗೂ ಜಿವಾಳುಗಳಾದ ಗಿಡಗಳನ್ನು ಮಕ್ಕಳಿಗೆ ಕೊಡುವ ಹಾಗೂ ಆವರಣದಲ್ಲಿ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಎಂ ಮರಾಠೆ ಮಾತನಾಡಿ ಪರಿಸರದಿಂದ ನಾವು ಬದುಕಲು ಸಾಧ್ಯ. ಕಾಡು ಬೆಳಿಸಿ ನಾಡು ಉಳಿಸಿ ಎಂಬ ತತ್ವವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಮನೆಗೊಂದು ಮರ ನೆಡುವ ಮೂಲಕ ನಾವು ಪರಿಸರ ಉಳಿವಿಗೆ ಸಹಕರಿಸೋಣ. ಇಂದಿನ ಮನಷ್ಯ ಎಷ್ಟೆ ಬುದ್ಧಿವಂತನಾದರೂ ಉತ್ತಮ ಪರಿಸರ ಇಲ್ಲದೇ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಿಲ್ಲ.ಪರಿಸರ ನಮ್ಮ ಉಸಿರು ಇದರ ಉಳಿವಿಗೆ ಎಲ್ಲರೂ ಪಣ ತೊಡಬೇಕಾಗಿದೆ ಎಂದು ಪರಿಸರದ ಜಾಗೃತಿ ಮೂಡಿದರು. ಈ ಅವಧಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಎಚ್ ಬಿ ಬೆಳಗಲಿ.ಗ್ರಾ ಪಂ ಅಧ್ಯಕ್ಷರಾದ ಪರಶುರಾಮ ಜಟ್ಟೇಪ್ಪನವರ ಸುಜಾತಾ ಕಲಕಟ್ಟಿ. ನಿಂಬವ್ವ ಗೊಣ್ಣಪ್ಪನವರ. ಲಕ್ಷ್ಮಮ್ಮ ಹೇಳವರ. ಸಂಸ್ಥೆಯ ಕಾರ್ಯವೃಂದದವರಾದ ಕರಬಸಪ್ಪ ದೇವಗಿರಿ.ಐ ಜಿ ಯಲವಿಗಿ ಸೇರಿದಂತೆ ಶಾಲೆಯ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ. ರೈತ ಸಂಘದ ಮುಖಂಡರಾದ ಮುತ್ತು ಗುಡಗೇರಿ.ಪಂಚಾಕ್ಷರಯ್ಯ ಹಿರೇಮಠ.ರೈತರು ಹಾಗೂ ಊರ ನಾಗರಿಕ ಬಂಧುಗಳು ಪಾಲ್ಗೊಂಡಿದ್ದರು.