ಶಿಗ್ಗಾವ್

ಜನಪದ ಕಲಾವಿದರು ಸತ್ಯದ ಬೀಜ ಬಿತ್ತುತ್ತ ಬಂದಿದ್ದಾರೆ: ಪ್ರೊ.ಟಿ.ಎಂ.ಭಾಸ್ಕರ್

ಜನಪದ ಕಲಾವಿದರು ಸತ್ಯದ ಬೀಜ ಬಿತ್ತುತ್ತ ಬಂದಿದ್ದಾರೆ:  ಪ್ರೊ.ಟಿ.ಎಂ.ಭಾಸ್ಕರ್

ಲೋಕದರ್ಶನ ವರದಿ

ಶಿಗ್ಗಾವಿ 12: ಕಲೆಯು ಶ್ರದ್ಧೆ ಮತ್ತು ಶೀಲದ ಮೇಲೆ ಪ್ರಜ್ವಲಿಸುತ್ತದೆ ಎಂಬುದು ಜನಪದ ಕಲಾವಿದರ ಮಾತಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್  ಅಭಿಪ್ರಾಯಪಟ್ಟರು.

ತಾಲೂಕಿನ ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಜನಪದ ಕಲೆ ಅಧ್ಯಯನ ವಿಭಾಗವು ಆಯೋಜಿಸದ ಜನಪದ ವಾದ್ಯಗಳ ತರಬೇತಿ ಶಿಬಿರ ಜಗ್ಗಲಿಗೆ ಚಾಲನೆ ನೀಡಿ ಮಾತನಾಡಿ  ಜನಪದ ಕಲೆಯ ದರ್ಶನವಾಗಿದೆ ಅದನ್ನು ಉಸಿರಾಗಿಸಿಕೊಂಡ ಜನಪದ ಕಲಾವಿದರು ಶ್ರಮ ಸಂಸ್ಕೃತಿ ಹಿನ್ನೆಲೆಯಲ್ಲಿ ಅಳವಡಿಸಿ, ಹಾಡುತ್ತ, ಕುಣಿಯುತ್ತ ಲೋಕದಲ್ಲಿ ಸತ್ಯದ ಬೀಜ ಬಿತ್ತುತ್ತ ಬಂದಿದ್ದಾರೆ ಈ ಅರ್ಥಪೂರ್ಣ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕ್ರೀಯಾಶೀಲರಾಗಿ ಪಾಲ್ಗೊಂಡು ಜನಪದ ಕಲೆ ಹಾಗೂ ಕಲಾವಿದರ ಪರಿಚಯ ಮಾಡಿಕೊಳ್ಳಬೇಕು ಎಂದರು.

ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್ ಮಾತನಾಡಿ ಜನಪದ ಕಲೆಯ ಭಾಗವಾದ ಜಗ್ಗಲಿಗೆಯು ಅತ್ಯಂತ ಪ್ರಾಚೀನವಾದದ್ದು. ಇಂದಿನ ದಿನಗಳಲ್ಲಿ ನಿರ್ಲಕ್ಷ್ಯಗೆ ಒಳಗಾದ ಜಗ್ಗಲಿಗೆ ಕಲೆಯನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಈ ಕಲೆಯನ್ನು ಕಲಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪದ ಶ್ರೀಮಂತಿಕೆಯನ್ನು ಸಾದರಪಡಿಸಬೇಕು ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಮಾತನಾಡಿ ಯುದ್ದದ ಸಂದರ್ಭದಲ್ಲಿ ರಣಕಹಳೆ ಊದುವುದು ರೂಢಿಯಲ್ಲಿತ್ತೋ ಹಾಗೆಯೇ ಜಾತ್ರೆಗಳ ವಿಶೇಷ ಸಂದರ್ಭಗಳಲ್ಲಿ ಸಂಭ್ರಮಕ್ಕಾಗಿ ಜಗ್ಗಲಿಗೆ ಬಳಕೆಯೂ ಸಹ ರೂಢಿಯಲ್ಲಿತ್ತು. ಇದರಿಂದ ಜಾಗತೀಕ ಸ್ವರೂಪ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರು ಹಾಗೂ ಜಗ್ಗಲಿಗೆ ಕಲಾವಿದರಾದ ಕುಬೇರಗೌಡ ಮುರಳಿ ಅವರು ಮಾತನಾಡಿ ಜಗ್ಗಲಿಗೆಯು ಇತ್ತೀಚೆಗೆ ಜಗ್ಗಲಗಿ ವಾದ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಪಸರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧನಾಧಿಕಾರಿ ಡಾ.ಕೆ.ಪ್ರೇಮಕುಮಾರ್ ಸೇರಿದಂತೆ ಸಹಾಯಕ ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು, ಡಾ.ಆನಂದಪ್ಪ ಜೋಗಿ ಪ್ರಾಥರ್ಿಸಿದರು, ಕಾರ್ಯಕ್ರಮದ ಸಂಚಾಲಕ ಡಾ.ಬಸವರಾಜ ಎಸ್.ಜಿ ವಂದಿಸಿದರು 

ಸುದ್ದಿ ಓದಿ