ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜಕ್ಕೆ ಮಾದರಿಯಾಗಿ ಬದುಕಲಿ: ಲಿಂಗರಾಜ ಅಂಗಡಿ
ಲೋಕದರ್ಶನ ವರದಿ
ಸವದತ್ತಿ 12: ಬಡತನವಿದ್ದರು ಕೂಡಾ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ಮಾದರಿಯಾಗಿ ಬದುಕಬೇಕಿದ್ದು, ಸಮಾಜಮುಖಿ ಸೇವೆ ನಮ್ಮೆಲ್ಲರದಾಗಿರಬೇಕೆಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ಸ್ಥಳೀಯ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಭಾವನೆ ದೂರಾಗಬೇಕಿದ್ದು, ಸಮಯ ಪ್ರಜ್ಞೆಯೊಂದಿಗೆ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಪ್ರಾಚಾರ್ಯ ಕೆ.ಬಿ.ಕೋರಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಮಾಡುವುದರ ಜೊತೆಗೆ ಸಮಾಜಮುಖಿಯಾದ ಕೆಲಸಗಳನ್ನು ಮಾಡುತ್ತಾ ಅಮೃತತ್ವ ಕಡೆಗೆ ಸಾಗಬೇಕೆಂದರು.
ಬಸವರಾಜ ಎಮ್ ಹೂಲಿಕಟ್ಟಿ ಅಧ್ಯಕ್ಷತೆವಹಿಸಿದ್ದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು. ಸನ್ 2022-23 ನೇ ಸಾಲಿನ ಆದರ್ಶ ವಿದ್ಯಾರ್ಥಿ ಎಂದು ಪ್ರವೀಣ ಬಡಮ್ಮನವರ ಹಾಗೂ ಆದರ್ಶ ವಿದ್ಯಾರ್ಥಿನಿಯರೆಂದು ಕಲ್ಪನಾ ಜ್ಯೋತಿ ಹಾಗೂ ಲಕ್ಷ್ಮೀ ಶಂಕ್ರೆಪ್ಪ ಲಮಾಣಿಯವರನ್ನು ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಜಿ.ಸವಟಗಿ, ಬಸವರಾಜ ಅಕ್ಕಿ, ಜಿ.ಎಸ್.ಶಿಂಧೆ, ಎನ್.ಬಿ.ಚಂದರಗಿ, ಎನ್.ಎಲ್.ಕಳ್ಳಿ, ಶ್ರೀರಕ್ಷಾ ಮೇದಾರ ಹಾಗೂ ಉಪನ್ಯಾಸಕ ಸಿಬ್ಬಂದಿ ಮತ್ತು ಪಾಲಕರು ಪಾಲ್ಗೊಂಡಿದ್ದರು. ಹೆಚ್.ಬಿ.ಭಜಂತ್ರಿ ಸ್ವಾಗತಿಸಿದರು. ಉಪನ್ಯಾಸಕರಾದ ಎಸ್.ಕೆ.ಕಂಬಾಳಿಮಠ ನಿರೂಪಿಸಿದರು. ಕೆ.ಎಮ್.ಹುಣಶೀಕಟ್ಟಿ ವಂದಿಸಿದರು